ಬಿಜೆಪಿ ಜಿಲ್ಲಾ ಯುವ ಮೋರ್ಚಾದಿಂದ ವಿವೇಕ ನಡಿಗೆ ವಾಕಥಾನ್ | ಗಣ್ಯರು, ಯುವಕರು ಭಾಗಿ
ಯಾದಗಿರಿ: ದೇಶದಾದ್ಯಂತ ಮಹಾನ್ ಅಧ್ಯಾತ್ಮಿಕ ನಾಯಕ, ತತ್ವಜ್ಞಾನಿ, ಚಿಂತಕ ಹಾಗೂ ವಿಶ್ವ ಸನ್ಯಾಸಿ ಸ್ವಾಮಿ ವಿವೇಕಾ ನಂದರ 162 ನೇ ಜನ್ಮ ದಿನಾಚರಣೆಯನ್ನು ಅಂಗವಾಗಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದಿಂದ ನಗರದ ಮೈಲಾಪುರ ಅಗಸಿಯಿಂದ ಗಾಂಧಿ ವೃತದ ವರೆಗೆ ವಿವೇಕ ನಡಿಗೆ ವಾಕಥಾನ್ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಭಾಗವಹಿಸದ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ ಮಾತನಾಡಿ, ಸ್ವಾಮಿ ವಿವೇಕಾನಂದರ ಚಿಂತನೆಗಳು ಯಾವಾಗಲೂ ಯುವಕರನ್ನು ಪ್ರೇರೇಪಿಸುವಂತಿವೆ ಜೊತೆಗೆ ಅವರಲ್ಲಿ ಹೊಸ ಶಕ್ತಿ ಮತ್ತು ಪ್ರಜ್ಞೆಯನ್ನು ತುಂಬುತ್ತಿವೆ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಭಾರತದಲ್ಲಿ ರಾಷ್ಟ್ರೀಯ ಯುವ ದಿನವಾಗಿ ಆಚರಿಸಲಾಗುತ್ತದೆ.
ರಾಷ್ಟ್ರೀಯ ಯುವ ದಿನದಂದು, ವೈಯಕ್ತಿಕ ಅಭಿವೃದ್ಧಿ, ಸಮಾಜ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಧನಾತ್ಮಕವಾಗಿ ಕೊಡುಗೆ ನೀಡಲು ಯುವಕರನ್ನು ಪ್ರೇರೇಪಿಸಲು ಮತ್ತು ಪ್ರೋತ್ಸಾಹಿಸಲು ವಾಕಥಾನ್ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಹಮ್ಮಿಕೊಳ್ಳ ಲಾಗಿದೆ ಎಂದು ಹೇಳಿದರು.
ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ ಮಾತನಾಡಿ, ಸ್ವಾಮಿ ವಿವೇಕಾನಂದ ಅವರು ರಾಮಕೃಷ್ಣ ಪರಮಹಂಸರನ್ನು ಭೇಟಿಯಾದ ನಂತರ ವಿವೇಕಾನಂದರಿಗೆ ಅಧ್ಯಾತ್ಮಿಕತೆಯತ್ತ ಒಲವು ಬೆಳೆಯಿತು. ರಾಮಕೃಷ್ಣ ಪರಮಹಂಸರ ಆತ್ಮೀಯ ಶಿಷ್ಯರಾದರು ಪರಮಹಂಸರನ್ನು ತಮ್ಮ ಅಧ್ಯಾತ್ಮಿಕ ಗುರುವೆಂದು ಪರಿಗಣಿಸಿದ ನಂತರ, ಅವರನ್ನು ಸ್ವಾಮಿ ವಿವೇಕಾನಂದ ಎಂದು ಕರೆಯಲಾಯಿತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಧರ ಆರ್ ಸಾಹುಕಾರ ಮಾತನಾಡಿ, ಸ್ವಾಮಿ ವಿವೇಕಾನಂದರು 1863 ರ ಜನವರಿ 12 ರಂದು ಕೋಲ್ಕತ್ತಾದಲ್ಲಿ ಜನಿಸಿದ್ದರು, 1893 ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಂಸತ್ತಿನಲ್ಲಿ ಭಾಷಣದ ಮೂಲಕ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡರು.
ವಿವೇಕಾನಂದರ ಅಂದಿನ ಭಾಷಣ ಇತಿಹಾಸದಲ್ಲಿ ಅವರ ಅತ್ಯಂತ ಪ್ರಸಿದ್ದ ಕ್ಷಣಗಳಲ್ಲಿ ಒಂದಾಗಿದೆ. ತಮ್ಮ ಭಾಷಣದ ಆರಂಭದಲ್ಲಿ ಸ್ವಾಮಿ ವಿವೇಕಾನಂದರು, ಅಮೆರಿಕದ ಸಹೋದರ ಸಹೋದರಿಯರೇ ಎಂದು ಹೇಳಿದಾಗ ಸದನವು ಎರಡು ನಿಮಿಷಗಳ ಕಾಲ ಚಪ್ಪಾಳೆಯನ್ನು ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿತ್ತು. ಅಂದಿನಿಂದ, ಭಾರತ ಮತ್ತು ಭಾರತೀಯ ಸಂಸ್ಕೃತಿಗೆ ಪ್ರಪಂಚದಾದ್ಯಂತ ಮಾನ್ಯತೆ ಸಿಕ್ಕಿತು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಲೆಮಾರಿ ಅರೆ ಅಲೆಮಾರಿ ನಿಗಮದ ಮಾಜಿ ಅಧ್ಯಕ್ಷ ದೇವಿಂದ್ರನಾಥ ನಾದ, ನಾಗರತ್ನ ಕುಪ್ಪಿ, ಯುಡ ಮಾಜಿ ಅಧ್ಯಕ್ಷ ಬಸವರಾಜ ಚಂಡ್ರಕಿ, ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಗುರು ಕಾಮ, ಜಿಲ್ಲಾ ವಕ್ತಾರ ಹಣಮಂತ ಇಟಗಿ, ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಹೊನಿಗೇರಿ,ನಗರಸಭೆ ಮಾಜಿ ಉಪಾಧ್ಯಕ್ಷೆ ಪ್ರಭಾವತಿ ಕಲಾಲ ನಗರಸಭೆ ಸದಸ್ಯ ಸ್ವಾಮಿದೇವ ದಾಸನಕೆರಿ ಮತ್ತು ವಿಜಯಲಕ್ಷ್ಮಿ ನಾಯಕ, ರಾಘವೇಂದ್ರ ಯಕ್ಷಿಂತಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸುನಿತಾ ಚೌವ್ಹಾಣ್, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜಗದೀಶ್ ಪಾಟೀಲ್, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಮಲ್ಲು ಕೊಲಿವಾಡ ಮತ್ತು ಮಂಜುನಾಥ ಗುತ್ತಿಗೆದಾರ, ಜಿಲ್ಲಾ ಮಾಧ್ಯಮ ಸಹ ಸಂಚಾಲಕ ಚಂದ್ರಶೇಖರ ಕಡೆಸೂರ, ಭೀಮಭಾಯಿ ಶೆಂಡಿಗಿ, ಸ್ನೇಹ ರಾಸಳಕರ, ಮಹಾದೇವಪ್ಪ ಗಣಪುರ, ನಾಗಪ್ಪ ಗಚ್ಚಿನಮನಿ, ಬಸ್ಸು ಬಳಿಚಕ್ರ, ಮರಲಿಂಗ ಕಿಲ್ಲಕೇರಿ, ವಿಕಾಸ ಚೌವ್ಹಾಣ್, ತಿರುಪತಿ ಚೌವ್ಹಾಣ್, ದೇವು ನಾಯಕ, ವಿನೋದ್ ಹಿರಿಮಠ, ವಿಶ್ವ ಹಳಿಗೇರ, ಭೀಮು ವರ್ಕನಳ್ಳಿ, ಶರಣು ಹೊಸ ಮನಿ, ದೇವು ಅಂಬಿಗರ, ವೆಂಕಟೇಶ್ ಮುದ್ನಾಳ, ಸೈದಪ್ಪ ಸೇರಿ ದಂತೆ ಯುವ ಮೋರ್ಚಾ ಪದಾಧಿಕಾರಿ ಗಳ ಮತ್ತು ಕಾರ್ಯಕರ್ತ ರು ಇದ್ದರು.