ಸುಮಾರು ವರ್ಷಗಳಿಂದ ಕಾರ್ಯಕರ್ತನಾಗಿ ದುಡಿದ ಚಾಂದಪಾಷಾ | ಪಕ್ಷಕ್ಕಾಗಿ ಶ್ರಮಿಸಿದ ವ್ಯಕ್ತಿಗೆ ಅಧಿಕಾರ ಹರ್ಷ

ಯಾದಗಿರಿ: ಯಾದಗಿರಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಚಾಂದಪಾಷ ಇವರನ್ನು ನೇಮಿಸಿ, ಕೆ.ಪಿ.ಸಿ.ಸಿ. ರಾಜ್ಯ ಅಧ್ಯಕ್ಷ ಡಿ.ಕೆ. ಶಿವಕುಮಾರ ಆದೇಶದ ಮೇರೆಗೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಬಸರೆಡ್ಡಿ ಎಂ.ಪಾಟೀಲ್ ಇವರು ಆದೇಶ ಹೊರಡಿಸಿದ್ದಾರೆ.  ತಮಗೆ ವಹಿಸಲಾದ ಹೊಣೆಯನ್ನು ನಿಷ್ಠೆಯಿಂದ ನಿರ್ವಹಿಸಿ, ಹಿರಿಯರ ಮಾರ್ಗದರ್ಶನ ಮತ್ತು ಕಿರಿಯರ ಸಹಕಾರದೊಂದಿಗೆ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಮತ್ತು ಕಾರ್ಯಗಳನ್ನು ಅನುಷ್ಠಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪಕ್ಷ ಸಂಘಟನೆ ಮತ್ತು ಪಕ್ಷ ಬಲವರ್ಧನೆಗೆ ಶಮಿಸಬೇಕೆಂದು ತಿಳಿಸಿದ್ದಾರೆ. ಇತ್ತೀಚೆಗೆ ನೂತನ ಕಾರ್ಯದರ್ಶಿಗೆ ಗುರುಮಠಕಲ್ ನಲ್ಲಿ ಪ್ರಮುಖರಾದ ಫಯಾಜ್ ಅಹ್ಮದ, ಮಾಣಿಕ ಮುಕಡಿ, ಕಿಷ್ಟಪ್ಪ, ಯುನೂಸ್ ಇತರರು ಸನ್ಮಾನಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!