ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಚುನಾವಣೆ | ಜಿದ್ದಾಜಿದ್ದಾಗಿ ಏರ್ಪಟ್ಟ ಕಣ | 2 ಬಾರಿಗೆ ವಿಜಯ ಪತಾಕೆ ಹಾರಿಸಿದ ಸಂಕಿನ್ | ವಿವಿಧ ಪದಾಧಿಕಾರಿಗಳು ಅವಿರೋಧ ಆಯ್ಕೆ
ಯಾದಗಿರಿ: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನ.9ರಂದು ಜರುಗಿದ ಚುನಾವಣೆಯಲ್ಲಿ 2 ನೇ ಬಾರಿಗೆ ಮಲ್ಲಪ್ಪ ಸಂಕಿನ್ 9 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
2025-28ರ ಅವಧಿಯ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಈ ಹಿಂದಿನ ಅಧ್ಯಕ್ಷರಾಗಿದ್ದ ಮಲ್ಲಪ್ಪ ಸಂಕಿನ್ ಹಾಗೂ ದಿನೇಶ ವಿ.ಸಿ ಅಘಾಡದಲ್ಲಿದ್ದರು. ತೀವ್ರ ಜಿದ್ದಾಜಿದ್ದಿನ ಕಣವಾಗಿ ಏರ್ಪಟ್ಟಿದ ಚುನಾವಣೆ, ತೀವ್ರ ಸಂಚಲನ ಮೂಡಿಸಿತ್ತು. ಒಟ್ಟು 142 ಮತಗಳಲ್ಲಿ 137 ಮಾತು ಚಲಾವಣೆಯಾಗಿದ್ದು, 5 ಮತದಾರರು ಚುನಾವಣೆಯಲ್ಲಿ ಭಾಗಿಯಾಗಿಲ್ಲ. ಮಲ್ಲಪ್ಪ ಸಂಕಿನ್ ಅವರು 73 ಮತ ಪಡೆದರೆ ಪ್ರತಿಸ್ಪರ್ಧಿ ದಿನೇಶ ವಿ.ಸಿ ಅವರು 64 ಮತಗಳನ್ನು ಪಡೆದಿದ್ದಾರೆ. 9 ಮತಗಳಿಂದ ಸಂಕಿನ್ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿ ನರಸಪ್ಪ ನಾರಾಯಣೋರ ಮಾಹಿತಿ ನೀಡಿದ್ದಾರೆ. ಫಲಿತಾಂಶ ಪ್ರಕಟವಾದ ಕ್ಷಣದಲ್ಲೇ ಮಲ್ಲಪ್ಪ ಸಂಕೀನ್ ಅವರ ಬೆಂಬಲಿಗರು ಸಂಭ್ರಮಾಚರಣೆ ನಡೆಸಿ ಸಿಹಿ ಹಂಚಿ, ಪರಸ್ಪರ ಗುಲಾಲ್ ಎರಚಿ ಸಂಭ್ರಮಿಸಿದರು.
ಗೆಲುವಿನ ಬಳಿಕ ಮಲ್ಲಪ್ಪ ಸಂಕೀನ್ ಮಾತನಾಡಿ, “ಇದು ನನ್ನ ವೈಯಕ್ತಿಕ ಜಯವಲ್ಲ, ಪತ್ರಕರ್ತರ ಏಕತೆ ಮತ್ತು ವಿಶ್ವಾಸದ ಫಲ. ಸಂಘದ ಹಿತಾಸಕ್ತಿಗಾಗಿ ನಿರಂತರವಾಗಿ ಕೆಲಸ ಮಾಡುತ್ತೇನೆ,” ಎಂದು ಹೇಳಿದರು. ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಹಿರಿಯ ಸದಸ್ಯರು ಹಾಗೂ ಚುನಾವಣಾ ಅಧಿಕಾರಿಗಳು ಶ್ಲಾಘನೆಗೆ ಪಾತ್ರರಾದರು.
ಅವಿರೋಧವಾಗಿ ಆಯ್ಕೆಯಾದ ಪದಾಧಿಕಾರಿಗಳು : ರಾಜ್ಯ ಕಾರ್ಯಕರಿಣಿ ಸ್ಥಾನಕ್ಕೆ ಸಾಗರ ದೇಸಾಯಿ, ಜಿಲ್ಲಾ ಉಪಾಧ್ಯಕ್ಷರಾಗಿ ಕುಮಾರ ಸ್ವಾಮಿ ಕಲಾಲ್, ವಿಶಾಲ ದೋರನಳ್ಳಿ. ವೀರಣ್ಣ ಮೌರ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸಿದ್ದಪ್ಪ ಕಾರ್ಯದರ್ಶಿ ಸ್ಥಾನಕ್ಕೆ ಗುಂಡಭಟ ಜೋಶಿ, ಜಿಲ್ಲಾ ಖಜಾಂಚಿ ಸ್ಥಾನಕ್ಕೆ ರಾಜ ಕುಮಾರ ನಳ್ಳಿಕರ್ ಆಯ್ಕೆಯಾಗಿದ್ದಾರೆ. ಇನ್ನು ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಸವರಾಜ ಕರೇಗಾರ, ಡಿ.ಸಿ.ಪಾಟೀಲ್, ಆನಂದ ಗೋರ್ಕಲ್, ದೇವರಾಜ ನಾಯಕ್, ಮಲ್ಲಿಕಾರ್ಜುನ ಕೆ., ಮಂಜುನಾಥ ಬಿರಾದಾರ, ಕೆ.ಬಿ. ರಾಘವೆಂದ್ರ, ಸೈಯದ್ ಸಾಜಿದ್ ಹಯಾತ್, ಪರಶುರಾಮ್, ಮಲ್ಲಣ್ಣ ಗೌಡ ಪಾಟೀಲ್, ಬಸವರಾಜ ಶಾರದಳ್ಳಿ, ಮಲ್ಲಿಕಾರ್ಜುನ್, ತೋಟೇಂದ್ರ, ಪ್ರೀತಿ ರಾಠಿ ಮತ್ತು ರಾಜೇಂದ್ರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
