ಯಾದಗಿರಿ: ಇತ್ತೀಚೆಗೆ ಕಲಬುರಗಿ ಎನ್. ವಿ ಮೈದಾನದಲ್ಲಿ (KSCA) ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ವತಿಯಿಂದ ಅಂತರ ಜಿಲ್ಲೆಯ ಕ್ರಿಕೆಟ್ ತಂಡಗಳ ಆಯ್ಕೆಯಲ್ಲಿ ಕಲಬುರಗಿ ಜಿಲ್ಲಾ ತಂಡಕ್ಕೆ ಚಿರಾಗ್ ಸೋಲಂಕಿ ಆಯ್ಕೆಯಾಗಿದ್ದಾರೆ.
ನ.14 ರಿಂದ 18 ರ ವರೆಗೆ ರಾಯಚೂರು ಜಿಲ್ಲೆಯಲ್ಲಿ ನಡೆಯುವ ವಲಯದ ಅಂತರ್ ಜಿಲ್ಲೆಗಳ ವಯೋಮಿತಿ 14 ಬಳಗದ ಕ್ರಿಕೆಟ್ ಪಂದ್ಯಗಳಲ್ಲಿ ಯಾದಗಿರಿಯ ನವನಂದಿ ವಿಂಗ್ ಕ್ರಿಕೆಟ್ ಅಕಾಡೆಮಿ ತರಬೇತಿ ಪಡೆದ ಗಿರಿನಾಡ ಯುವ ಪ್ರತಿಭೆ ಚಿರಾಗ್ ಸೋಲಂಕಿ ಆಯ್ಕೆ ಆಗಿದ್ದಕ್ಕೆ ನವನಂದಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಬಸವರಾಜ್ ಶಿವರಾಯ ಎಲ್ಹೇರಿ, ಮಾದೇವಪ್ಪ ಎಲಸತ್ತಿ, ನವನಂದಿ ವಿಂಗ್ ಕ್ರಿಕೆಟ್ ಅಕಾಡೆಮಿಯ ಕೆ. ವಿಶ್ವನಾಥ್, ಸುಬ್ಬಯ್ಯ ಗುತ್ತೇದಾರ್, ಮುಖ್ಯ ತರಬೇತಿದಾರ ಆರ್.ಎಮ್. ರುಕ್ಮಣ್ಣ ಬೇನೂರ, ಸಹ ತರಬೇತಿದಾರ ಭರತ್ ರೆಡ್ಡಿ ಪಾಲಕರಾದ ಚೆನ್ನಾರೆಡ್ಡಿ ಗೌಡ ಬಿಳಾರ್, ಮಲ್ಲಿಕಾರ್ಜುನ್ ತೇಲ್ಗರ್, ಅಂಬರೀಷ್ ಹತ್ತಿಮನಿ, ಅಶೋಕ್ ಹುಣಸಿಗಿ, ಕಮಲ ಸೋಲಂಕಿ, ಚಂದ್ರಕಾಂತ್ ಕಡೇಚೂರ್, ಮಲ್ಲೇಶ್ ಗೋಡ್ಯಾಳ, ಡಾ. ರಾಘವೇಂದ್ರ, ಮಲ್ಲಿಕಾರ್ಜುನ್ ಐಕೂರ್, ಮಲ್ಲನಗೌಡ, ಶ್ರೀನಿವಾಸ್ ಕಲಾಲ್, ಮರ್ಗಪ್ಪ ಸಾಲಿಕೆರಿ ಸೇರಿದಂತೆ ಅನೇಕ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಯಾದಗಿರಿಯಲ್ಲಿ ಈಗಾಗಲೇ ಅನೇಕ ಹಿರಿಯ ಕ್ರಿಕೆಟ್ ಕ್ರೀಡಾಪಟುಗಳು ಗಿರಿನಾಡಿನ ಕೀರ್ತಿ ತರುವುದರ ಜೊತೆಗೆ ಈ ಮಣ್ಣಿನ ಗುಣ ಧರ್ಮದಂತೆ ಹಿಂದೆ ರಾಜಕುಮಾರ್, ಮಾಜಿದ್, ಗೌತಮ್ ಮತ್ತು ಅವಿನಾಶ್ ಡಿ ಅವರಂಥ ಅದ್ಭುತ ಆಟಗಾರರು ಕೊಟ್ಟಂತಹ ಗಿರಿ ನಾಡು, ಅದೆ ಹಾದಿಯಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಮತ್ತೊಂದು ಹೊಸ ಮುಖ ಚಿಗುರು ಓಡೆಯುತ್ತಿದೆ.
ಚಿರಾಗ್ ಸೋಲಂಕಿ ಒಳ್ಳೆಯ ಆಟಗಾರ ಈಗಾಗಲೇ ವಿಕೆಟ್ ಕೀಪರ್ ಬ್ಯಾಟಿಂಗ್ ನಲ್ಲಿ ತನ್ನದೇ ಆದ ಚಾಪು ಮೂಡಿಸುವದರ ಜೊತೆಗೆ ಅವನಲ್ಲಿ ಇದೇ ವರ್ಷ ರಾಜ್ಯ ತಂಡದಲ್ಲಿ ಪ್ರತಿನಿಧಿಸುವ ಸಾಮರ್ಥ್ಯವಿದ್ದು, ಆ ಸಮಯವನ್ನು ಎದುರು ನೋಡುತ್ತಿದ್ದೇವೆ. – ಆರ್.ಎಮ್. ರುಕ್ಮಣ್ಣ ಬೇನೂರ, ತರಬೇತಿದಾರ.