ನವೆಂಬರ್ 9, 10 ಮತ್ತು ನ.23, 24 ರಂದು ವಿಶೇಷ ಅಭಿಯಾನ…

ಯಾದಗಿರಿ : ಚುನಾವಣೆ ಆಯೋಗದ ನಿರ್ದೇಶನದ ಮೇರೆಗೆ, 2025ರ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2024ರ ನವೆಂಬರ್ 9ರ ಶನಿವಾರ ರಂದು ನ.10ರ ಭಾನುವಾರ ರಂದು ಹಾಗೂ ನ.23ರ ಶನಿವಾರ ರಂದು ಮತ್ತು ನ.24ರ ಭಾನುವಾರ ರಂದು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಯಾದಗಿರಿ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ ಅವರು ತಿಳಿಸಿದ್ದಾರೆ.

ಯಾದಗಿರಿ ಜಿಲ್ಲೆಯ ತಹಸೀಲ್ದಾರರ ಕಾರ್ಯಾಲಯ ಯಾದಗಿರಿ, ಶಹಾಪೂರ, ಸುರಪುರ, ವಡಗೇರಾ, ಗುರುಮಠಕಲ್ ಮತ್ತು ಹುಣಸಗಿ ಹಾಗೂ ಜಿಲ್ಲೆಯ ಎಲ್ಲಾ 1134 ಮತಗಟ್ಟೆ ಮಟ್ಟದ ಅಧಿಕಾರಿಗಳ ಕಾರ್ಯಾಲಯಗಳಲ್ಲಿ ಸದರಿ ದಿನಗಳಂದು ನಮೂನೆ 6, 7, 8 ಗಳನ್ನು ಸಲ್ಲಿಸಬೇಕು.

ಹೊಸದಾಗಿ ಹೆಸರು ಸೇರ್ಪಡೆಗಾಗಿ ನಮೂನೆ 6ರಲ್ಲಿ ಅರ್ಜಿಸಲ್ಲಿಸಬೇಕು, ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಅವರುಗಳು ಸ್ಥಳಾಂತರ ಹೊಂದಿದ್ದಲ್ಲಿ, ಮೃತ ಹೊಂದಿದ್ದಲ್ಲಿ, ಹೆಸರು ಪುನರಾವರ್ತನೆಯಾಗಿದ್ದಲ್ಲಿ ಅವರುಗಳ ಹೆಸರನ್ನು ತೆಗೆದು ಹಾಕಲು ನಮೂನೆ 7 ರಲ್ಲಿ ಮತ್ತು ಹೆಸರು ಇತ್ಯಾದಿ ತಿದ್ದುಪಡಿ ಬಯಸಿದ್ದಲ್ಲಿ ನಮೂನೆ 8ರಲ್ಲಿ ಸೂಕ್ತ ದಾಖಲೆ ಯೊಂದಿಗೆ ಅರ್ಜಿಗಳನ್ನು ಸಂಬಂಧಪಟ್ಟ ಮತಗಟ್ಟೆ ಮಟ್ಟದ ಅಧಿಕಾರಿ (ಬಿ.ಎಲ್.ಓ) ಅವರಿಗೆ ಮತ್ತು ತಹಸೀಲ್ದಾರರ ಕಛೇರಿಗಳಲ್ಲಿ ಹಾಗೂ ಸಹಾಯಕ ಆಯುಕ್ತರ ಕಛೇರಿಗೆ ಅರ್ಜಿಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!