ಯಾದಗಿರಿ: ಮಾಜಿ ಮುಖ್ಯ ಸಚೇತಕ ದಿ.ವಿಠಲ್ ಹೇರೂರ ಅವರ ಪುಣ್ಯ ಸ್ಮರಣೆ ಹಿನ್ನೆಲೆ ನ.10ರಂದು ಬೆಳಗ್ಗೆ 8:30ಕ್ಕೆ ದೋರನಹಳ್ಳಿಯ ಅಂಬಿಗರ ಚೌಡಯ್ಯ ನ ಮಠದಲ್ಲಿ ಶಾಂತಗಂಗಾಧರ, ರಾಜುಗುರು ಸ್ವಾಮಿಜೀ ಅವರ ನೇತೃತ್ವದಲ್ಲಿ ಪೂರ್ವ ಭಾವಿಸಭೆ ಕರೆಯಲಾಗಿದೆ ಎಂದು ಕರ್ನಾಟಕ ಪ್ರಾದೇಶಿಕ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ ಮುದ್ನಾಳ ತಿಳಿಸಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಡಿ.3 ರಂದು 11ನೇ ವರ್ಷದ ಪುಣ್ಯ ಸ್ಮರಣೆ ನಡೆಯಲಿದೆ. ಕೋಲಿ ಸಮಾಜದ ಅಭಿವೃದ್ಧಿಗೆ ತಮ್ಮ ಜೀವಮಾನವನ್ನೇ ಅರ್ಪಣೆ ಮಾಡಿದ ವಿಠಲ್ ಹೇರೂರು ಅವರ ಹೆಸರನ್ನು ಅಮರವಾಗಿರಿಸಬೇಕಿದೆ.
ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿಠ್ಠಲ್ ಹೇರೂರ ಅವರ ಹೋರಾಟ ಸಮಿತಿ ರಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. ಸಮಾಜ ಸೇವಾ ಮಾಡುಲು ಬಯಸುವವರು ತಾಲ್ಲೂಕು ಮತ್ತು ಜಿಲ್ಲಾ ಘಟಕ ಹೋರಾಟ ಸಮಿತಿಯೊಂದಿಗೆ ಸೇರಲು ತಿಳಿಸಿದ್ದಾರೆ.