ಮಾದಿಗ ದಂಡೋರ ಎಂ.ಆರ್.ಪಿ.ಎಸ್ ಜಿಲ್ಲಾಧ್ಯಕ್ಷ ಕಾಶಪ್ಪ ಹೆಗ್ಗಣಗೇರಾ ನೇತೃತ್ವದಲ್ಲಿ ಗೃಹ ಸಚಿವರಿಗೆ ಮನವಿ | ಕಠಿಣ ಶಿಕ್ಷೆಗೆ ಒಳಪಡಿಸಲು ಒತ್ತಾಯ

ಯಾದಗಿರಿ: ಜಿಲ್ಲೆಯಲ್ಲಿ ನಡೆದ ದೌರ್ಜನ್ಯ ಪ್ರಕರಣಗಳಡಿ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರಿಗೆ ತ್ವರಿತವಾಗಿ ಪರಿಹಾರ ಒದಗಿಸಲು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರಿಗೆ ದಂಡೋರ ಸಮಿತಿಯಿಂದ ಮನವಿ ಸಲ್ಲಿಸಲಾಗಿದೆ.

ಜಿಲ್ಲೆಯ ಹುಣಸಗಿ ತಾಲೂಕಿನ ಬಪ್ಪರಗಾ ಮತ್ತು ಕೊಡೇಕಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಇನ್ನೂ ಪರಿಹಾರ ಕೊಟ್ಟಿಲ್ಲ. ಐದು ಎಕರೆ ಭೂಮಿ, ಸರ್ಕಾರಿ ನೌಕರ ಕೊಡಬೇಕು ಎಂದು ಗಮನಕ್ಕೆ ತಂದರು.

ವಿಜಯಪುರ ಜಿಲ್ಲೆಯ ಇಟ್ಟಂಗಿ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಮಾರಣಾಂತ ಹಲ್ಲೆ ಒಳಗಾದ ಪರಿಹಾರ ಸರ್ಕಾರಿ ನೌಕರಿ ಹಾಗೂ ಭೂಮಿ ಕೊಡಿಸುಬೇಕು ಎಂದು ಒತ್ತಾಯಿಸಿದ್ದಾರೆ.

ದೌರ್ಜನ್ಯ ಎಸಗಿದವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಒಂದು ವೇಳೆ ನಿರ್ಲಕ್ಷ ಮಾಡಿದರೆ ಇಡಿ ರಾಜ್ಯದಂತ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದಿದ್ದಾರೆ.

ಈ ವೇಳೆ ಜಿಲ್ಲಾ ಉಪಾಧ್ಯಕ್ಷ ಮಲ್ಲು ಬೆಳಗೇರಿ ಯಾದಗಿರ, ತಾ.ಅಧ್ಯಕ್ಷ ಅನಿಲ್ ದಾಸನಕೆರಿ, ಶರಣಪ್ಪ ವಡಿಗೇರಾ, ವಿಲ್ಸನ್ ಹಾಲ್ಗೇರಾ, ರವಿಕುಮಾರ್ ಯಾದಗಿರಿ, ತಿಪ್ಪಣ್ಣ ಗೊಂದೆನೂರು,  ಮರಿಯಪ್ಪ ವಡಿಗೇರಾ, ಶರಣಪ್ಪ, ಮರೆಪ್ಪ ಬೀಳಾರ, ದುರಗಪ್ಪ,  ಸಾಬಣ್ಣ, ಯೇಸು ಇನ್ನಿತರರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!