ಪಿಎಸ್‌ಟಿ ಮತ್ತು ಪಿಇಟಿ ಪಟ್ಟಿಯಿಂದ 1:1ರ ಅನುಪಾತದಲ್ಲಿ : ಅರ್ಹರಾದ ಅಭ್ಯರ್ಥಿಗಳ ಮೂರನೆಯ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

ಯಾದಗಿರಿ : ಎಪಿಸಿ (ಕೆಕೆ) 420 ಹುದ್ದೆಗಳಿಗೆ 1:1ರ ಅನುಪಾತದಲ್ಲಿ ಅರ್ಹಗೊಂಡ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದೆ ಎಂದು ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಅವರು ತಿಳಿಸಿದ್ದಾರೆ.

ದಿನಾಂಕ 12-09-2022 ತಿದ್ದುಪಡಿ ಅಧಿಸೂಚನೆ (ವಯೋಮಿತಿಗೆ) ದಿನಾಂಕ 09-11-2022 ರಂತೆ ಯಾದಗಿರಿ ಜಿಲ್ಲೆಯಲ್ಲಿ ಸ್ಥಳೀಯ ವೃಂದದದಲ್ಲಿ ಖಾಲಿ ಇರುವ ಸ್ಥಳೀಯ ವೃಂದದ 50 ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಅವರ (ಕೆಕೆ) ಹುದ್ದೆಗಳಿಗೆ 2023ರ ಸೆಪ್ಟೆಂಬರ್ 10 ರಂದು ಯಾದಗಿರಿ ನಗರದಲ್ಲಿ ಲಿಖಿತ ಪರೀಕ್ಷೆಯನ್ನು ನಡೆಸಲಾಗಿರುತ್ತದೆ.

ಲಿಖಿತ ಪರೀಕ್ಷೆಯಲ್ಲಿ 1:5ರ ಅನುಪಾತದಲ್ಲಿ ಅರ್ಹರಾದ ಅಭ್ಯರ್ಥಿಗಳಿಗೆ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಪಿಎಸ್‌ಟಿ ಮತ್ತು ಪಿಇಟಿ ಪರೀಕ್ಷೆಯನ್ನು 2024ರ ಫೆಬ್ರವರಿ 12 ರಂದು ನಡೆಸಲಾಗಿರುತ್ತದೆ. 1:5 ಅನುಪಾತದ ಪಿಎಸ್‌ಟಿ ಮತ್ತು ಪಿಇಟಿ ಪಟ್ಟಿಯಿಂದ 1:1ರ ಅನುಪಾತದಲ್ಲಿ ವೈದ್ಯಕೀಯ ಪರೀಕ್ಷೆ ಹಾಗೂ ದಾಖಲಾತಿಗಳ ಪರಿಶೀಲನೆಗೆ ಅರ್ಹರಾದ ಅಭ್ಯರ್ಥಿಗಳ ಮೂರನೆಯ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ತಯಾರಿಸಿ ಜಿಲ್ಲಾ ಪೊಲೀಸ್ ಕಛೇರಿ, ಯಾದಗಿರಿಯಲ್ಲಿ ಸೂಚನಾ ಫಲಕದಲ್ಲಿ ವೆಬ್‌ಸೈಟ್ www.yadgirpolice.in ನಲ್ಲಿ ಅಭ್ಯರ್ಥಿಗಳ ಗಮನಕ್ಕೆ ಪ್ರಕಟಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!