ಯಾದಗಿರಿ; ವಿಜಯ ವಿಠಲ ಸೇವಾ ಸಂಸ್ಥೆ (ರಿ) ಶಶಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಮನೆ ಮನೆಗೆ ಮಣ್ಣಿನ ಗಣಪ ಉಚಿತ ವಿತರಣೆ ಕಾರ್ಯಕ್ರಮವನ್ನು ಆ. 25 ರಂದು ಬೆಳಿಗ್ಗೆ 10: 30 ಕ್ಕೆ ನಗರದ ಹಿಂದಿ ಪ್ರಚಾರ ಸಭಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶಶಿ ಸೂಪರ್ ಬಜಾರ್ ನ ಮಾಲೀಕ ಮಲ್ಲಿಕಾರ್ಜುನ ಶಿರಗೋಳ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಲವೀಶ್ ಒರಡಿಯಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಧಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿ ಕ್ ಶಂಕರ್, ಸಹಾಯಕ ಆಯುಕ್ತರಾದ ಶ್ರೀಧರ್ ಗೋಟೂರ, ತಹಸೀಲ್ದಾರರಾದ ಸುರೇಶ ಅಂಕಲಗಿ, ಪತಂಜಲಿ ಯೋಗ ಸಮಿತಿ ಗೌರವಧ್ಯಕ್ಷ ಅನೀಲ್ ಗುರೂಜಿ, ವಿಜಯ ವಿಠಲ ಸೇವಾ ಸಂಸ್ಥೆ ಗೌರವಾಧ್ಯಕ್ಷ ನಾಗೇಶ್ವರರಾವ್ ಕುಲಕರ್ಣಿ, ಶ್ರೀ ಸಿದ್ಧಸಂಪದ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ ಡಾ. ಸಿದ್ದರಾಜರೆಡ್ಡಿ, ಮೀನುಗಾರಿಕೆ ಉಪನಿರ್ದೇಶಕ ಶರಣಬಸವ ಶ್ರೀಹರಿ ಕಾಲೇಜಿನ ಅಧ್ಯಕ್ಷ ಸುಭಾಶ್ಚಂದ್ರ ಮಾನೇಗಾರ, ಯಾದವ್ ಸಕ್ಸಸ್ ಗ್ರಂಥಾಲಯ ಮುಖ್ಯಸ್ಥ ಮಾಳಪ್ಪ ಮಾಳಪ್ಪ ಆಗಮಿಸಲಿದ್ದಾರೆ ಎಂದು ತಿಳಿದ್ದಾರೆ.
ಶುದ್ಧ ಮಣ್ಣಿನಿಂದ ತಯಾರಿಸಿದ ಮೂರ್ತಿಗಳನ್ನೇ ಪ್ರತಿಷ್ಠಾಪಿಸಿ ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಜಯ ವಿಠ್ಠಲ ಸೇವಾ ಸಂಸ್ಥೆ ಹಾಗೂ ಶಶಿ ಚಾರಿಟೇಬಲ್ ಮತ್ತು ಎಡುಕೇಷನಲ್ ಟ್ರಸ್ಟ್ ವತಿಯಿಂದ ಮನೆ ಮನೆಗೂ ಮಣ್ಣಿನ ಗಣಪ ಎಂಬ ಕಾರ್ಯಕ್ರಮವನ್ನು ಪ್ರತಿ ವರ್ಷ ಹಮ್ಮಿಕೊಂಡು ಬರುತ್ತಿದೆ ಎಂದರು.
ಈ ಬಾರಿ 1000 ಮಣ್ಣಿನ ಗಣೇಶ ಪ್ರತಿಮೆಗಳನ್ನು ವಿತರಣೆ ಮಾಡುವ ಉದ್ದೇಶ ಹೊಂದಲಾಗಿದೆ ಇದಕ್ಕಾಗಿ ಈಗಾಗಲೇ ಉಚಿತವಾಗಿ ಪಡೆಯಬೇಕೆನ್ನುವವರು ಮೊಬೈಲ್ ಸಂಖ್ಯೆ 9739519803 ನೋಂದಣಿ ಮಾಡಿಸಿಕೊಳ್ಳಬೇಕು ವಾಟ್ಸಪ್ ಮುಖಾಂತರ ನೋಂದಣಿ ಮಾಡಿಕೊಳ್ಳಬಹುದು.
ವಿತರಣೆ ಮಾಡುವ ಪ್ರತಿ ಗಣೇಶನ ಒಡಲಲ್ಲಿ ಬೀಜಗಳನ್ನು ಇಟ್ಟು ತಯಾರಿಸಲಾಗಿದ್ದು, ಭಕ್ತಾದಿಗಳು ತಮ್ಮ ಮನೆಯ ಮುಂದೆ ಪಾಟ್ ಗಳಲ್ಲಿಯೂ ಗಣೇಶನನ್ನು ವಿಸರ್ಜಿಸುವ ಮೂಲಕ ಹಬ್ಬ ಪೂರ್ಣಗೊಳಿಸಬೇಕು. ತದನಂತರ 15 ದಿನಗಳಲ್ಲಿ ಗಣೇಶನಿಂದ ಒಂದು ಸಸಿ ಹುಟ್ಟಲಿದ್ದು, ಆ ಮೂಲಕ ಪರಿಸರಕ್ಕೆ ಸಸಿಯೊಂದರ ಕೊಡುಗೆಯೂ ಆಗಲಿದೆ ಎಂದು ಅವರು ತಿಳಿಸಿದರು.
ವಿಜಯ ವಿಠಲ್ ಸೇವಾ ಸಂಸ್ಥೆ ಅಧ್ಯಕ್ಷ ವಿಠಲ್ ಕುಲಕರ್ಣಿ ಮಾತನಾಡಿ, ಕಳೆದ ವರ್ಷ 750 ಅದಕ್ಕೂ ಮುನ್ನ 600 ಅದಕ್ಕೂ ಮುನ್ನ 160 ಮಣ್ಣಿನ ಗಣೇಶ ಮೂರ್ತಿಗಳನ್ನು ಉಚಿತವಾಗಿ ವಿತರಿಸುತ್ತಾ ಬರಲಾಗುತ್ತಿದೆ ಎಂದರು.
