ಜಿಲ್ಲಾಡಳಿತ ನೀಡುವ ಅಧಿಕೃತ ಮಾಹಿತಿಯನ್ನು ಅವಲಂಬಿಸಿ | ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ

ಯಾದಗಿರಿ: ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯುದ್ಧ ಭೀತಿ ಉಂಟಾಗಿರುವ ಹಿನ್ನಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೂಚನೆ ಮೇರಿಗೆ ಜಿಲ್ಲೆಯಲ್ಲಿ ಸಾರ್ವಜನಿಕರು ಸುಳ್ಳು ಸುದ್ದಿಗಳಿಗೆ ಕಿವಿಕೊಡಬಾರದು ಬದಲಾಗಿ ಜಿಲ್ಲಾಡಳಿತ ನೀಡುವ ಅಧಿಕೃತವಾಗಿ ಮಾಹಿತಿ ಯನ್ನು ಅವಲಂಬಿಸಬೇಕು. ಅಲ್ಲದೆ ಸಾರ್ವಜನಿಕರಿಗೆ ಬೇಕಾಗುವ ಅಗತ್ಯ ವಸ್ತಗಳ ಬೆಲೆಯನ್ನು ಅನಗತ್ಯವಾಗಿ ಹೆಚ್ಚಳ ಮಾಡುವ ಪ್ರಯತ್ನಗಳು ಮಾಡಿದ್ದಲ್ಲಿ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು ತಿಳಿಸಿದ್ದಾರೆ.

ಸಾರ್ವಜನಿಕರು ಅನಾವಶ್ಯಕ ವಾಗಿ ಸಾಮಾಜಿಕ ಮಾಧ್ಯಮ ದಲ್ಲಿ ಸುಳ್ಳುಸುದ್ದಿ ಹರಡಕೂ ಡದು. ಒಂದು ವೇಳೆ ಹರಡಿ ದಲ್ಲಿ ಅಂತಹ ವರ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪ್ರಸ್ತುತ ಇರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾರ್ವಜನಿಕರಾಗಲಿ, ಸಂಘ-ಸಂಸ್ಥೆಗಳಾಗಲಿ ಈ ಸಂದರ್ಭವನ್ನು ದುರುಪಯೋಗ ಮಾಡಿಕೊಂಡು ಅನಾವಶ್ಯಕವಾಗಿ ಸಾರ್ವಜನಿಕರಿಗೆ ಬೇಕಾಗುವ ವಸ್ತುಗಳ ಬೆಲೆ ಹೆಚ್ಚಿಸತಕ್ಕದಲ್ಲ.

ನಾಗರಿಕರ ರಕ್ಷಣೆಯ ಭಾಗವಾಗಿ ಸಾರ್ವಜನಿಕರು ದೊಡ್ಡ ಪ್ರಮಾಣದ ಸಮಾರಂಭ ಮಾಡುವುದಾಗಲಿ, ಸಾರ್ವಜನಿ ಕ ಸ್ಥಳಗಳಿಗೆ ಹೋಗುವುದನ್ನು ಮಾಡಬಾರದು. ಅಲ್ಲದೆ ಪ್ರಸ್ತುತ ಸಂದಿಗ್ದ ಪರಿಸ್ಥಿತಿಯಲ್ಲಿ ಸಾರ್ವಜನಿಕರಿಗೆ ತೊಂದರೆಯಾದಲ್ಲಿ 24*7 ತುರ್ತು ಸಹಾಯವಾಣಿ ಸಂಖ್ಯೆ: 08473-253950ಗೆ ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!