ಯಾದಗಿರಿ : ಉಪವಿಭಾಗದಲ್ಲಿ 2020-21ರಲ್ಲಿ ನೋಂದಾಣಿಯಾದ ನವೀಕರಿಸಿದ ಎಲ್ಲಾ ಹಣಕಾಸು ಸಂಸ್ಥೆಗಳು ಮತ್ತು ಗಿರಿವಿದಾರರು ಹಾಗೂ ಲೇವದೇವಿಗಾರರ ಲೈಸೆನ್ಸ್ಗಳನ್ನು 2025ರ ಎಪ್ರಿಲ್ 1 ರಿಂದ 2030ರ ಮಾರ್ಚ್ 31ರ ವರೆಗೆ ಅವಧಿಗಾಗಿ ನವೀಕರಣಗೊಳಿಸಬೇಕು ಎಂದು ಯಾದಗಿರಿ ಉಪ ವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶೀಮಾ ತಿಳಿಸಿದ್ದಾರೆ.

ಲೇವಾದೇವಿ ಲೈಸನ್ಸ್ ಫೀ 5000 ರೂ.ಗಳ ಮತ್ತು ಗಿರಿವಿದಾರ ರಿಗೆ ಲೈಸನ್ಸ್ ಫೀ 5000 ರೂ.ಗಳ ( 5ವರ್ಷ ಅವಧಿಗಾಗಿ) ಲೆಕ್ಕ ಶೀರ್ಷಿಕೆ 1475-00-200-01ರಡಿ ಚಾಲನ ಮೂಲಕ ಕರ್ನಾಟಕ ಎಸ್.ಬಿ.ಐ ಯಾದಗಿರಿಯಲ್ಲಿ 2025ರ ಜನವರಿ 31ರ ಒಳಗೆ ನವೀಕರಣ ತುಂಬಿ, ಚಲನಿನ ಪ್ರತಿ ನವೀಕರಣ ಪ್ರಸ್ತಾವನೆಯೊಂದಿಗೆ ಈ ಕಛೇರಿಗೆ ಮುದ್ದಾಂ ಸಲ್ಲಿಸಬೇಕು. ಶಾಖೆಗಳನ್ನು ಹೊಂದಿದ ಹಣಕಾಸು ಸಂಸ್ಥೆಯವರು 5000 ರೂ.ಗಳ ಲೈಸನ್ಸ್ ಫೀಯನ್ನು ಪ್ರತ್ಯೇಕವಾಗಿ ಭರಿಸಬೇಕು.

2025ರ ಜನವರಿ 31ರ ನಂತರ ಲೈಸನ್ಸ್ ಫೀ ತುಂಬಲುಬಂದ ಅರ್ಜಿಗಳನ್ನು ಕಲಂ 6(4)ರ ಪ್ರಕಾರ 10,000 ರೂ.ಗಳ ದಂಡ ಶುಲ್ಕ ವಸೂಲಿ ಮಾಡಲಾಗುವುದು. (ಅಂದರೆ 5000 ಲೈಸನ್ಸ್ ಫೀ ಹಾಗೂ 5000 ರೂ.ಗಳ ದಂಡ). ಸಂಸ್ಥೆಯ ಮೂಲ ಲೇವಾದೇವಿ ಲೈಸನ್ಸ್ ಮತ್ತು ಝರಾಕ್ಸ್ ಪ್ರತಿ ಸಲ್ಲಿಸಬೇಕು, ಪಾಲುದಾರರ ಡೀಡ್ ಬದಲಾವಣೆಗೊಂಡಿದ್ದಲ್ಲಿ ಝರಾಕ್ಸ್ ಪ್ರತಿ ಮತ್ತು 2025ರ ಮಾರ್ಚ್ 31ರ ವರೆಗೆ ಆಡಿಟ್ ವರದಿಯನ್ನು ಲಗತ್ತಿಸಬೇಕು.

2024ರ ಎಪ್ರಿಲ್ ರಿಂದ 2025ರ ಜನವರಿ ವರೆಗಿನ 5 ವರ್ಷ ವಾರು ಸಾಲ ವಿತರಣೆ, ಸಾಲ ವಸೂಲಿ ಹಾಗೂ ಪ್ರತಿ ತಿಂಗಳ ಕೊನೆಯಲ್ಲಿ ಬಾಕಿ ಉಳಿದಿರುವ ಬಗ್ಗೆ ತಃಖ್ತೆಯನ್ನು ದ್ವಿ ಪ್ರತಿಗಳಲ್ಲಿ ಲಗತ್ತಿಸಬೇಕು, (ನಮೂನೆ ಲಗತ್ತಿಸಿದ). ಇದಕ್ಕೆ ತಪ್ಪಿದಲ್ಲಿ ಲೇವಾ ದೇವಿ ಕಾಯ್ದೆ ಪ್ರಕಾರ ನಿಮ್ಮ ಹಣಕಾಸು ಸಂಸ್ಥೆಯ ಪರವಾನಿಗೆ ಯನ್ನು ರದ್ದುಪಡಿಸಲು ಪ್ರಸ್ತಾವನೆ ಮೇಲಾಧಿಕಾರಿಗಳಿಗೆ ಸಲ್ಲಿಸಲಾಗುವುದು.

ಯಾದಗಿರಿ ಉಪ ವಿಭಾಗದಲ್ಲಿ 2020-21ರಲ್ಲಿ ನೊಂದಣಿಯಾದ ನವೀಕರಿಸಿದ ಎಲ್ಲಾ ಹಣಕಾಸು ಸಂಸ್ಥೆಗಳ ಲೇವಾದೇವಿಗಾರರು ಮತ್ತು ಗಿರಿವಿದಾರರ ಲೈಸನ್ಸ್ಗಳನ್ನು ದಿನಾಂಕ 01-04-2025 ರಿಂದ 31-03-2030ರ ಅವಧಿಗಾಗಿ ನವೀಕರಣ ಅರ್ಜಿಗಳನ್ನು ಕರ್ನಾಟಕ ಮನಿಲೆಂಡಿಂಗ್ (Karnataka money lending) ಕಾಯ್ದೆ 1961 ನಿಯಮ 5(2)ರನ್ವಯ ಎಲ್ಲಾ ಲಗತ್ತಗಳೊಂದಿಗೆ ದಿನಾಂಕ 31-01-2025ರ ಒಳಗೆ ಈ ಕಛೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊ.ನಂ.9886014278, 9972246622ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!