ಕಾಡು ಹಂದಿ ಹಾವಳಿ | ರೈತ ಕಂಗಾಲು| ಸಾಲ ಸೂಲ ಮಾಡಿ ಬಿತ್ತನೆ ಮಾಡಿದ ಬೆಳೆ ರಕ್ಷಣೆಯೇ ರೈತರಿಗೆ ಸವಾಲು| ಸರ್ಕಾರ ನೆರವಿಗೆ ಬರಲು ಒತ್ತಾಯ
ಯಾದಗಿರಿ: ಕಾಡು ಹಂದಿ ಹಾವಳಿಯಿಂದ ಬೆಳೆ ರಕ್ಷಿಸುವುದು ರೈತರಿಗೆ ಸವಾಲಾಗಿದೆ. ಸಾಲ ಸೂಲ ಮಾಡಿ ಬಿತ್ತನೆ ಮಾಡಿದ್ದು ಹೇಗಾದರೂ ಮಾಡಿ ಫಸಲು ಉಳಿಸಿಕೊಳ್ಳಬೇಕು ಎಂದು ರೈತರು ಹಳೆ ಸೀರೆ(ಕಡಿಮೆ ಬೆಲೆ) ಸಿಗದೇ ಇರುವುದು ಈಗ ಹೆಚ್ಚಿನ ಬೆಲೆಯ ಸೀರೆಗಳ ಖರೀದಿ ಮಾಡುವ ಅನಿವಾರ್ಯತೆ ಎದುರಾಗಿದೆ.
ಅತಿವೃಷ್ಟಿ, ಬರ ಪರಿಸ್ಥಿತಿಯಲ್ಲಿ ಇಂದಿನ ದಿನಗಳಲ್ಲಿ ಅಳಿದುಳಿದ ಬೆಳೆ ರಕ್ಷಿಸಿಕೊಳ್ಳಲು ರೈತರು ಹೊಸ ಸೀರೆಗಳಿಗೆ ಮೊರೆ ಹೋಗಿತ್ತಿ ದ್ದು ಇನ್ನಷ್ಟು ಆರ್ಥಿಕ ಹೊರೆ ಅನುಭವಿಸುವಂತಾಗಿದೆ.
ಗಡಿ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ರೈತರು ಈ ತಂತ್ರಗಾರಿಕೆ ಬಳಸುತ್ತಿದ್ದು , ರೈತರು ಈ ಮೊದಲು ಬೆಳೆ ರಕ್ಷಣೆಗೆ ಮುಳ್ಳು ಕಂಟಿಗಳ ಬೇಲಿ ಹಾಕುತ್ತಿದ್ದರು. ಆದರೆ ಇತ್ತಿಚೆಗೆ ಕಾಡು ಹಂದಿಗಳ ಹಾವಳಿ ಹೆಚ್ಚಾಗಿದ್ದು ಮುಳ್ಳು ಕಂಟಿಗಳನ್ನು ಕಿತ್ತಿಹಾಕಿ ಹೊಲಕ್ಕೆ ನುಗ್ಗಿ ರೈತ ಬೆಳೆ ಶೇಂಗಾ ಮತ್ತು ಜೋಳ ತಿಂದು ಹಾಕತೊಡಗಿದವು.
ಇದರಿಂದ ರಕ್ಷಣೆ ಪಡೆಯಲು ರೈತರಿಗೆ ಹೊಳೆದಿದ್ದೇ ಹಳೆ ಸೀರೆಗಳನ್ನು ಹೊಲದ ಬದುವಿಗೆ ಕಟ್ಟುವ ತಂತ್ರ. ಈ ತಂತ್ರದಿಂದ ಹಂದಿಗಳು ರಾತ್ರಿ ಹೊಲದ ಬಳಿ ಸುಳಿಯದಂತೆ ರಕ್ಷಣೆ ದೊರೆಯತೊಡಗಿತು. ಸೀರೆಗಳ ಕಟ್ಟುವುದರಿಂದ ರಾತ್ರಿ ವೇಳೆ ಸೀರೆಗಳು ಗಾಳಿಯ ಶಬ್ದದಿಂದ ಹಂದಿಗಳು ಬೆದರತೊಡಗಿದವು ಜೊತೆಗೆ ಸೀರೆಯ ಬಟ್ಟೆಯ ವಾಸನೆಗೆ ಹತ್ತಿರ ಬಾರದೆ ದೂರ ಹೋಗುತ್ತಿರುವುದನ್ನು ರೈತರೇ ಕಂಡುಕೊಂಡು ಅದನ್ನೇ ಮುಂದುವರೆಸಿದ್ದಾರೆ.
ರೈತರು ತಾವು ಹೆಚ್ಚಾಗಿ ಬೆಳೆಯುವ ಶೇಂಗಾ, ಬಿಳಿ ಜೋಳ ಇನ್ನಿತರ ಬೆಳೆಗಳನ್ನು ರಕ್ಷಿಸಿಕೊಳ್ಳಲು ಪ್ರತಿವರ್ಷ ಈ ತಂತ್ರ ಹೆಚ್ಚು ಜನಪ್ರಿಯವಾಗುತ್ತಿದ್ದಂತೆ. ರೈತರಿಗೆ ಹಳೆ ಸೀರೆಗಳು ಸಿಗದಂತೆ ಸಮಸ್ಯೆಯಾಗಿ ಈದೀಗ ಹೊಸ ಸೀರೆಗಳನ್ನು ತಂದು ಕಟ್ಟುವ ಅನಿವಾರ್ಯತೆಗೆ ಸಿಲುಕಿದ್ದಾರೆ.
ಬೆಳೆ ರಕ್ಷಣೆಗೆ ಕಡಿಮೆ ಬೆಲೆಗೆ ಸೀರೆ ಸಿಗುತ್ತಿಲ್ಲ. ಹಾಗಾಗಿ ಹೆಚ್ಚಿನ ದರಕ್ಕೆ ತರಬೇಕಾ ಗಿದೆ. ರೈತರ ಸಮಸ್ಯೆಯನ್ನು ಆಲಿಸಿ, ಸರ್ಕಾರ ಬೆಳೆ ಸಂರಕ್ಷಣೆಗೆ ಯೋಜನೆ ಮಾಡಬೇಕು – ಸೋಮಪ್ಪ ರೈತ.
ಸೀರೆಯನ್ನು ಕಟ್ಟುವುದು ಒಂದು ಕೃಷಿಯ ಭಾಗವೇ ಆಗಿ ಹೋಗಿದ್ದು ಒಂದು ಕಡೆ ರೈತರು ವ್ಯವಸಾಯಕ್ಕೆ ಹಣ ವ್ಯಯಿಸುವುದರೊಂದಿಗೆ ಈದೀಗ ಬೆಳೆ ರಕ್ಷಣೆಗೆ ಸೀರೆ ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಅದೂ ನೆರೆಯ ತೆಲಂಗಾಣದ ನಾರಾಯಣಪೆಟೆ, ಹೈದ್ರಾಬಾದ ಹೋಗಿ ಹೊಸ ಸೀರೆಗಳನ್ನು ಖರೀದಿಸಿ ಹೊಲದ ಬದುವುಗಳಿಗೆ ವಿವಿಧ ಬಣ್ಣಗಳ ಸೀರೆಗಳನ್ನು ನೋಡಿದರೆ ಸಿರಿಧಾನ್ಯ ಲಕ್ಷ್ಮಿ ಗೆ ಸೀರೆ ಉಡಿಸಿದಂತೆ ಕಾಣುತ್ತಿದ್ದರೆ ಇನ್ನೊಂದುಕಡೆ ರೈತರು ತಮ್ಮ ಮನೆಯ ಹೆಂಡರು, ಮಕ್ಕಳಿಗೆ ಹಬ್ಬ ಹರಿದಿನಗಳಲ್ಲಿ ಒಂದು ಜೊತೆ ಸೀರೆ ಬಟ್ಟೆ ತರಲು ಯೋಚಿಸುವ ಪರಿಸ್ಥಿತಿ ಇರುವಾಗ ಲಾಟುಗಟ್ಟಲೆ ಸೀರೆಗಳನ್ನು ತಂದು ತಮ್ಮ ಹೊಲಗಳ ಬೆಳೆಗಳ ರಕ್ಷಣೆಗಾಗಿ ಕಟ್ಟುತ್ತಿದ್ದಾರೆ.
“ಸುರಕ್ಷಿತ ಪ್ರಯಾಣಕ್ಕೆ ಪ್ರತಿಯೊಬ್ಬರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ”
ಬರಗಾಲ ಅತಿವೃಷ್ಟಿ ಪರಿಸ್ಥಿತಿಯಲ್ಲಿ ಎಲ್ಲರೂ ಬಡ ರೈತರು ಬೆಳೆದ ಅನ್ನವನ್ನೇ ಉಣ್ಣಬೇಕೆ ಹೊರತು ಹಣ ತಿನ್ನಲು ಸಾಧ್ಯವಿಲ್ಲ ಎಂಬುದು ಅರಿತುಕೊಂಡು ಅಧಿಕಾರಿಗಳು ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.
ಕೃಷಿ ಉಪಕರಣಗಳ ಭಾಗವಾಗಿರುವ ಸೀರೆಗಳು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಿ ಎಂದು ಅವರು ಆಗ್ರಹಿಸಿದ್ದಾರೆ. ಈಗಾಗಲೇ ಸೀರೆಗಳ ಬಳಕೆಯ ಕುರಿತು ವರದಿಯೂ ಆಗಿದೆ. ಆದರೆ ಜನಪ್ರತಿನಿಧಿಗಳು, ಅಧಿಕಾರಿಗಳು ಇದರ ಬಗ್ಗೆ ಯೋಚನೆ ಏಕೆ ಮಾಡಿಲ್ಲ? ಎಷ್ಟು ರೈತರಿಗೆ ಸೀರೆಗಳಿಂದ ಉಪಯೋಗವಾಗಿದೆ ಅದಕ್ಕೆ ಎಷ್ಟು ವ್ಯಯವಾಗುತ್ತಿದೆ ಎಂಬುದನ್ನು ಅರಿತು ಕೃಷಿ ಇಲಾಖೆಯ ಯೋಜನೆಯಲ್ಲಿ ಇದನ್ನು ಸೇರ್ಪಡೆ ಮಾಡಿ ಸೀರೆಗಳನ್ನು ಒದಗಿಸಿಕೊಡುವ ಕಾರ್ಯ ಸರ್ಕಾರ, ಕೃಷಿ ಇಲಾಖೆ ಮಾಡಲಿ ಎಂದು ರೈತರಾದ ಮಲ್ಲು, ಭೀಮು, ಸೋಮಪ್ಪ, ಮಲ್ಲಪ್ಪ, ಕಾಶಪ್ಪ, ಮಲ್ಲಿಕಾರ್ಜುನ, ಅನಂತರೆಡ್ಡಿ, ಶರಣಪ್ಪ, ನಾಗರಡ್ಡಿ ಜಲಾಲಸಾಬ ಸೇರಿದಂತೆ ರೈತರು ಒತ್ತಾಯಿಸಿದ್ದಾರೆ.
ಅತಿವೃಷ್ಟಿ, ಬರ ಪರಿಸ್ಥಿತಿಯಲ್ಲಿ ಇಂದಿನ ದಿನಗಳಲ್ಲಿ ಅಳಿದುಳಿದ ಬೆಳೆ ರಕ್ಷಿಸಿಕೊಳ್ಳಲು ರೈತರು ಹೊಸ ಸೀರೆಗಳಿಗೆ ಮೊರೆ ಹೋಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕು ವಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ರೈತರ ನೆರವಿಗೆ ಬರಬೇಕು. ಸರ್ಕಾರ ಬೆಳೆ ರಕ್ಷಣೆ ದೃಷ್ಟಿಯಿಂದ ಕೃಷಿಯ ಭಾಗವಾದ ಸೀರೆಗಳನ್ನು ಕಡಿಮೆ ಬೆಲೆಗೆ ವಿತರಣೆ ಮಾಡಲು ಮುಂದಾಗ ಬೇಕು. ಸರ್ಕಾರ ರೈತರ ನೆರವಿಗೆ ಮುಂದಾಗಲಿ – ಉಮೇಶ್ ಕೆ.ಮುದ್ನಾಳ ಸಾಮಾಜಿಕ ಹೋರಾಟಗಾರ.