ಶಹಾಪೂರ ತಾಲೂಕಿನ ಗೋಗಿ ಗ್ರಾಮದ ಪೊಲೀಸರ ಕಾರ್ಯಚರಣೆ | ಪಿಎಸ್ಐ ದೇವೆಂದ್ರರೆಡ್ಡಿ ಸೇರಿ ಸಿಬ್ಬಂದಿ ಭಾಗಿ
ಯಾದಗಿರಿ: ದ್ವಿಚಕ್ರ ವಾಹನದ ಮೇಲೆ ಇಬ್ಬರು ವ್ಯಕ್ತಿಗಳು ಗಾಂಜಾ ಸಾಗಿಸುತ್ತಿರುವ ಖಚಿತ ಮಾಹಿತಿ ಆಧರಿಸಿ ಮೇಲಾಧಿಕಾ ರಿಗಳ ಮಾರ್ಗದರ್ಶನದಂತೆ ಜಿಲ್ಲೆಯ ಗೋಗಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಅಂದರ್ ಮಾಡಿದ್ದಾರೆ.
ಇತ್ತೀಚೆಗೆ KA 36 EG 5129 ಮೋಟಾರ್ ಸೈಕಲ್ ಮೇಲೆ ಇಬ್ಬರು ವ್ಯಕ್ತಿಗಳು ಜೇವರ್ಗಿ ತಾಲೂಕಿನ ಬಿರಾಳ (ಕೆ) ಗ್ರಾಮದ ಕಡೆಯಿಂದ ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲದಲ್ಲಿ ಗಾಂಜಾವನ್ನು ತುಂಬಿಕೊಂಡು ತಮ್ಮ ಹತ್ತಿರ ಇಟ್ಟುಕೊಂಡು ಅಕ್ರಮ ಮಾರಾಟ ಮಾಡುವ ಉದ್ದೇಶದಿಂದ ಕೊಡಂನಳ್ಳಿ, ಕಂಚಲಕವಿ, ಕಂಚಲಕವಿ ಕ್ರಾಸ್ ಗೋಗಿ ಮೂಲಕ ಸಿಂದಗಿ ಕಡೆಗೆ ಹೋಗುವ ಖಚಿತ ಮಾಹಿತಿ ಮೇರೆಗೆ ಯಾದಗಿರಿ ಎಸ್ಪಿ ಪೃಥ್ವಿಕ ಶಂಕರ, ಎಎಸ್ಪಿ ಧರಣೀಶ, ಡಿವೈಎಸ್ಪಿ ಜಾವೀದ್ ಇನಾಮದಾರ, ಪಿಚ್ ಶರಣಗೌಡ ನ್ಯಾಮಣ್ಣವರ ಮಾರ್ಗದರ್ಶ ನದಲ್ಲಿ ದೇವೆಂದ್ರರೆಡ್ಡಿ ಪಿ.ಎಸ್.ಐ ಗೋಗಿ ರವರು ತಮ್ಮ ಸಿಬ್ಬಂದಿಗಳಾದ ದೇವಿಂದ್ರಪ್ಪ ಹೆಚ್.ಸಿ-80, ಶರಣಗೌಡ ಹೆಚ್.ಸಿ-159, ಬಂದೇನವಾಜ ಹೆಚ್.ಸಿ 136, ನಾಗರಾಜ ಪಿಸಿ-177, ಬಸನಗೌಡ ಪಿಸಿ-396, ಚಂದ್ರಶೇಖರ ಪಿಸಿ-233, ಜೀಪ ಚಾಲಕ ಮಾಳಿಂಗರಾಯ ಎಪಿಸಿ-29 ಹಾಗು ಪತ್ರಾಂಕಿತ ಅಧಿಕಾರಿಗಳು ಹಾಗು ಸರಕಾರಿ ಪಂಚರೊಂದಿಗೆ ದಾಳಿ ನಡೆಸಿದ್ದಾರೆ.
24 ವರ್ಷದ ಸಂತೋಷ ಬಸವರಾಜ ನಾಯಕ್. ಸಾಕೀನ್ ದೇವರಗುಡ್ಡ,ತಾ:ದೇವದುರ್ಗ, ಹಾ.ವ: ಬಿರಾಳ(ಕೆ), ತಾ:ಜೇವರ್ಗಿ ಹಾಗೂ 32 ವರ್ಷದ ರವಿ ಸಿದ್ದಪ್ಪ ಮರಮಕಲ್ ಫಿಲ್ಟರ್ ಬೆಡ್ ಶಹಾಪೂರ ಎಂಬುವರನ್ನು ವಶಕ್ಕೆ ಪಡೆದು 01 ಕೆಜಿ 835ಗ್ರಾಂ ಸಂಪೂರ್ಣ ಒಣಗಿರದ ಅಂದರೆ ಸ್ವಲ್ಪ ಹಸಿಯಾಗಿರುವ ಒಟ್ಟು 55050 ಮೌಲ್ಯದ ಗಾಂಜಾವನ್ನು ಹಾಗೂ ಗಾಂಜಾ ಸಾಗಾಟಕ್ಕಾಗಿ ಬಳಸಿದ ಮೋ/ಸೈಕಲ್ ಅ.ಕಿ: 10000/- ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿತರ ವಿರುದ್ಧ ಚಂದ್ರನಾಥ ಪಿ.ಎಸ್.ಐ(ತನಿಖಾ) ಗೋಗಿ ಠಾಣೆ ರವರು ಠಾಣೆಯ ಅಪರಾಧ ಸಂ. 12/2025 ಕಲಂ 20(ಎ), 20(ಬಿ)(2)(ಸಿ) ಎನ್.ಡಿ.ಪಿ.ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡದವರು ಕಾರ್ಯಚರಣೆ ನಡೆಸಿದ್ದಾರೆ ಎಂದು ಗೋಗಿ ಪಿಎಸ್ಐ ದೇವೇಂದ್ರರೆಡ್ಡಿ ಉಪ್ಪಳ ತಿಳಿಸಿದ್ದಾರೆ.
