ಯಾದಗಿರಿ: ಯಾದಗಿರಿ ಜಿಲ್ಲೆಯ ಗ್ರಾಮ ಪಂಚಾಯತಿ ಸದಸ್ಯ ಸ್ಥಾನಗಳ ಉಪ ಚುನಾವಣೆ ನಿಮಿತ್ಯ 2024ರ ನವೆಂಬರ್ 23ರ ಶನಿವಾರ ರಂದು ನಡೆಯುವ ಸಂತೆ, ದನಗಳ ಸಂತೆ ಮತ್ತು ಜಾತ್ರೆ ನಿಷೇಧಿಸಿ ಆದೇಶವನ್ನು ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ ಅವರು ಹೊರಡಿಸಿದ್ದಾರೆ.
ಕರ್ನಾಟಕ ಪಂಚಾಯತ ರಾಜ್ ಅಧಿನಿಯಮ, 1993ರ ನಿಯಮ 36ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ 2024ರ ನವೆಂಬರ್ 23ರ ಶನಿವಾರ ರಂದು ಶಹಾಪೂರ ತಾಲ್ಲೂಕಿನಲ್ಲಿ 11-ಕನ್ಯಾಕೋಳ್ಳೂರು, 19-ಬೀರನೂರು, ಸುರಪುರ ತಾಲ್ಲೂಕಿನ 6-ದೇವಾಪೂರ, 3-ಹೇಮನೂರು.
ಯಾದಗಿರಿ ತಾಲ್ಲೂಕಿನ 9-ಮುಂಡರಗಿ, 2-ಅರಕೇರಾ (ಬಿ), 11-ಅರಕೇರಾ (ಕೆ), 7-ಬಂದಳ್ಳಿ, 13-ಹಳಗೇರಾ, ಗುರುಮಠಕಲ್ ತಾಲ್ಲೂಕಿನ 3-ಮಾದ್ವಾರ, 11-ಕಂದಕೂರ, 8-ಯಲಸತ್ತಿ, ಹುಣಸಗಿ ತಾಲ್ಲೂಕಿನ 7-ಮಾರನಾಳ, 5-ರಾಜಕೋಳ್ಳುರ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುವ ಎಲ್ಲಾ ಗ್ರಾಮ ಪಂಚಾಯತಿಗಳ ಸ್ಥಳದಲ್ಲಿ, ಪ್ರದೇಶದಲ್ಲಿ ಅಂದು ಸಂತೆ, ದನಗಳ ಸಂತೆ ಮತ್ತು ಜಾತ್ರೆಗಳನ್ನು ನಿಷೇಧಿಸಿ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.