ಯಾದಗಿರಿ :  ಜಿಲ್ಲೆಯ ಯಾದಗಿರಿ, ಶಹಾಪೂರ, ಸುರಪುರ, ಗುರುಮಠಕಲ್, ಹಾಗೂ ಹುಣಸಗಿ, ತಾಲ್ಲೂಕುಗಳ ಕೆಲವು ಗ್ರಾಮ ಪಂಚಾಯತಗಳ ಉಪ ಚುನಾವಣೆಯು ಜರುಗಲಿರುವ ಹಿನ್ನೆಲೆ 2024ರ ನವೆಂಬರ್ 6 ರಿಂದ ನವೆಂಬರ್ 27ರ ವರೆಗೆ ಆಯುಧಗಳನ್ನು ವಶಪಡಿಸಿಕೊಳ್ಳಲು ಪೊಲೀಸ್ ಠಾಣೆಯಲ್ಲಿ ಠೇವಣಿ ಮಾಡಿಕೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ ಅವರು ಆದೇಶಿಸಿದ್ದಾರೆ.

ಗ್ರಾಮ ಪಂಚಾಯತಗಳಲ್ಲಿ ಸದಸ್ಯರ ರಾಜೀನಾಮೆ, ನಿಧನ ಇತ್ಯಾದಿ ಕಾರಣಗಳಿಂದ ತೆರವಾಗಿರುವ ಸ್ಥಾನಗಳಿಗೆ ಉಪ ಚುನಾವಣೆ ನಿಮಿತ್ಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈ ಗ್ರಾಮ ಪಂಚಾಯತ ಚುನಾವಣೆಯು ಶಾಂತಿಯುತವಾಗಿ ಮುಕ್ತವಾಗಿ ಹಾಗೂ ಯಾವುದೇ ಅಹಿತಕರ ಘಟನೆ ಜರುಗದಂತೆ ಶಾಂತಿಯುತವಾಗಿ ಜರುಗಲು ಮುಂಜಾಗ್ರತೆ ಕ್ರಮವಾಗಿ ವಶಕ್ಕೆ ಪಡೆಯಲಾಗುತ್ತದೆ.

ಶಸ್ತ್ರಾಸ್ತ್ರ ಕಾಯ್ದೆ 1959ರ ಕಲಂ 24-ಬಿ (1) ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ 2024ರ ನವೆಂಬರ್ 6 ರಿಂದ ನವೆಂಬರ್ 27ರ ವರೆಗೆ ಗ್ರಾಮ ಪಂಚಾಯತಗಳ ಉಪ ಚುನಾವಣೆ ನಿಮಿತ್ಯ ಈ ಗ್ರಾಮ ಪಂಚಾಯತಗಳ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗ್ರಾಮವೂ ಸೇರಿದಂತೆ ಸಾರ್ವಜನಿಕರು ಹೊಂದಿದ ರಾಷ್ಟ್ರಿಕೃತ ಬ್ಯಾಂಕ್‌ಗಳನ್ನು ಹೊರತುಪಡಿಸಿ ಶಸ್ತ್ರಾಸ್ತ್ರ, ಆಯುಧಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಠೇವಣಿ ಮಾಡಿಕೊಳ್ಳಲು ಸೂಚಿಸಿದ್ದಾರೆ.

ಜಿಲ್ಲೆಯ ಯಾದಗಿರಿ ತಾಲ್ಲೂಕಿನ 9 ಮುಂಡರಗಿ ಗ್ರಾಮ ಪಂಚಾಯತ್‌ದಲ್ಲಿ 6 ಅಶೋಕ ನಗರ ಚುನಾವಣೆ ಕ್ಷೇತ್ರ, 2 ಅರಕೇರಾ (ಬಿ) ಗ್ರಾಮ ಪಂಚಾಯತದಲ್ಲಿ 3 ಅಚ್ಛೋಲಾ ಚುನಾವಣೆ ಕ್ಷೇತ್ರ, 7 ಬಂದಳ್ಳಿ ಗ್ರಾಮ ಪಂಚಾಯತದಲ್ಲಿ 4 ಯಡ್ಡಳ್ಳಿ ಚುನಾವಣೆ ಕ್ಷೇತ್ರ, 11 ಅರಕೇರಾ (ಕೆ) ಗ್ರಾಮ ಪಂಚಾಯತದಲ್ಲಿ 4 ಪಂಚಶೀಲನಗರ ಚುನಾವಣೆ ಕ್ಷೇತ್ರ, 13 ಹಳಗೇರಾ ಗ್ರಾಮ ಪಂಚಾಯತದಲ್ಲಿ 1 ಹಳಗೇರಾ ಚುನಾವಣೆ ಕ್ಷೇತ್ರ ಇದೆ.

ಶಹಾಪೂರ ತಾಲ್ಲೂಕಿನ 11 ಕನ್ಯಾಕೋಳ್ಳುರು ಗ್ರಾಮ ಪಂಚಾಯತದಲ್ಲಿ 5 ತಿಪ್ಪನಹಳ್ಳಿ ಚುನಾವಣೆ ಕ್ಷೇತ್ರ, 11 ಕನ್ಯಾಕೋಳ್ಳೂರು ಗ್ರಾಮ ಪಂಚಾಯತದಲ್ಲಿ 1 ಕನ್ಯಾಕೋಳ್ಳುರು ಚುನಾವಣೆ ಕ್ಷೇತ್ರ, 19 ಬೀರನೂರು ಗ್ರಾಮ ಪಂಚಾಯತದಲ್ಲಿ 5 ನಂದಿಹಳ್ಳಿ (ಜೆ) ಚುನಾವಣೆ ಕ್ಷೇತ್ರ ಇದೆ.

ಸುರಪುರ ತಾಲ್ಲೂಕಿನ 6 ದೇವಾಪೂರ ಗ್ರಾಮ ಪಂಚಾಯತದಲ್ಲಿ 2 ದೇವಾಪೂರ ಚುನಾವಣೆ ಕ್ಷೇತ್ರ, 3 ಹೇಮನೂರು ಗ್ರಾಮ ಪಂಚಾಯತದಲ್ಲಿ 1 ಹೇಮನೂರು ಚುನಾವಣೆ ಕ್ಷೇತ್ರ ಇದೆ.

ಹುಣಸಗಿ ತಾಲ್ಲೂಕಿನ 7 ಮಾರನಾಳ ಗ್ರಾಮ ಪಂಚಾಯತದಲ್ಲಿ 6 ಮದಲಿಂಗನಾಳ ಚುನಾವಣೆ ಕ್ಷೇತ್ರ, 7 ಮಾರನಾಳ ಗ್ರಾಮ ಪಂಚಾಯತದಲ್ಲಿ 3 ಯಣ್ಣಿವಡಗೇರಾ ಚುನಾವಣೆ ಕ್ಷೇತ್ರ, 5 ರಾಜನಕೋಳ್ಳುರ ಗ್ರಾಮ ಪಂಚಾಯತದಲ್ಲಿ 5 ರಾಜನಕೋಳ್ಳರ ಚುನಾವಣೆ ಕ್ಷೇತ್ರ ಇದೆ.

ಗುರುಮಠಕಲ್ ತಾಲ್ಲೂಕಿನ 3 ಮಾದ್ವಾರ ಗ್ರಾಮ ಪಂಚಾಯತದಲ್ಲಿ 4 ಗುಡ್ಲಗುಂಟಾ ಚುನಾವಣೆ ಕ್ಷೇತ್ರ, 11 ಕಂದಕೂರ ಗ್ರಾಮ ಪಂಚಾಯತದಲ್ಲಿ 4 ಚಿಂತನಪಲ್ಲಿ ಚುನಾವಣೆ ಕ್ಷೇತ್ರ, 8 ಯಲಸತ್ತಿ ಗ್ರಾಮ ಪಂಚಾಯತದಲ್ಲಿ 2 ಯಲಸತ್ತಿ ಚುನಾವಣೆ ಕ್ಷೇತ್ರದಲ್ಲಿ ಇದೆ.

ಯಾವುದೇ ಆಯುಧ ಲೈಸೆನ್ಸ್ದಾರರು ತಮ್ಮ ಆಯುಧವನ್ನು ಸಾರ್ವಜನಿಕ ಸ್ಥಳದಲ್ಲಿ ಹೊತ್ತಯ್ಯುವುದನ್ನು ಮತ್ತು ಪ್ರದರ್ಶನ ಮಾಡುವುದನ್ನು ನಿಷೇಧಿಸಿ ಆದೇಶಿಸಲಾಗಿದೆ.

Spread the love

Leave a Reply

Your email address will not be published. Required fields are marked *

error: Content is protected !!