ಗ್ರಾಮ ಪಂಚಾಯತಿಗಳ ವಿಶೇಷ ಕರ ವಸೂಲಿ ಅಭಿಯಾನ | 23 ದಿನಗಳಲ್ಲಿ 2.02 ಕೋಟಿ ರೂ.ಗಳ ಕರ ಸಂಗ್ರಹ
ಯಾದಗಿರಿ : ಗ್ರಾಮ ಪಂಚಾಯತಿಗಳಿಂದ ವಿಶೇಷ ಕರ ವಸೂಲಿ ಅಭಿಯಾನ 23 ದಿನಗಳಲ್ಲಿ 2.02 ಕೋಟಿ ರೂ.ಗಳ ಕರ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ.
ಗ್ರಾಮ ವ್ಯಾಪ್ತಿಯ ಮನೆ, ಖುಲ್ಲಾ ಜಾಗ, ಲೇಔಟ್, ಅಂಗಡಿಗಳ, ವಾಣಿಜ್ಯ ಮಳಿಗೆಗಳು, ಹೋಟೆಲ್, ಕೆಲವೆಡೆ ಕೈಗಾರಿಕೆಗಳಿಂದ ಕರ (ಆಸ್ತಿ, ತೆರಿಗೆ ಮತ್ತು ನೀರಿನ ಕರ) ವಸೂಲಾತಿ ಬಾಕಿ ಇದ್ದು, ಪಂಚಾಯತಿಗಳು ಸಂಪನ್ಮೂಲ ಕ್ರೋಢೀಕರಣ ಮಾಡಿಕೊಳ್ಳಲು ಯಾದಗಿರಿ ಜಿಲ್ಲೆಯಲ್ಲಿ ವಿಶೇಷ ಕರ ವಸೂಲಿ ಅಭಿಯಾನ ನಡೆಸುವಂತೆ ಜಿಲ್ಲಾ ಪಂಚಾಯತ ಕಛೇರಿಯಿಂದ ಆದೇಶಿಸಲಾಗಿತ್ತು.
ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳು ವಿಶೇಷ ಕರ ವಸೂಲಿ ಅಭಿಯಾನ ನಡೆಸಿ ಜಿಲ್ಲಾ ಪಂಚಾಯತ ಆದೇಶಕ್ಕೆ ಉತ್ತಮ ಸ್ಪಂದನೆ ನೀಡಿ, 23 ದಿನಗಳಲ್ಲಿ 122 ಗ್ರಾಮ ಪಂಚಾಯತಿ ಗಳಿಂದ ₹ 2.02 ಕೋಟಿ ಕರ ವಸೂಲಿ ಮಾಡಲಾಗಿರುತ್ತದೆ ಎಂದು ಯಾದಗಿರಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹ ಣ ಅಧಿಕಾರಿ ಲವೀಶ್ ಒರಡಿಯಾ ತಿಳಿಸಿದ್ದಾರೆ.
ಗ್ರಾಮ ಪಂಚಾಯತಿಗಳಲ್ಲಿ ಕರವಸೂಲಿ ಅಭಿಯಾನದಲ್ಲಿ ಕರ ವಸೂಲಿಗಾರರು, ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು (ಪಂ.ರಾಜ್), ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತ ಕಾರ್ಯದರ್ಶಿ, ಅಧ್ಯಕ್ಷ-ಉಪಾಧ್ಯಕ್ಷ ಹಾಗೂ ಸದಸ್ಯರನ್ನು ಒಳಗೊಂಡ ತಂಡ ಮನೆಮನೆಗೆ ತೆರಳಿ ತೆರಿಗೆ ವಸೂಲಾತಿ ಮಾಡಿರುತ್ತಾರೆ. ಚುನಾಯಿತ ಪ್ರತಿನಿಧಿಗಳು ಸಹ ಸಹಕಾರ ನೀಡಿರುವುದರಿಂದ ಸಾರ್ವಜನಿಕರು ಕರ ತುಂಬಿರುತ್ತಾರೆ.
ಹೀಗೆ ವಸೂಲಿಯಾದ ಕರದ ಕೆಲ ಪ್ರಮಾಣವನ್ನು ಗ್ರಾಮ ಪಂಚಾಯತ ಸಿಬ್ಬಂದಿಗಳ ವೇತನ ಪಾವತಿ, ಬೀದಿದೀಪ ನಿರ್ವಹಣೆ, ವಿದ್ಯುತ್ ಸಲಕರಣೆ ಖರೀದಿ, ರಸ್ತೆ ಮತ್ತು ಚರಂಡಿ ನೈರ್ಮಲೀಕರಣ, ಇಂಟರನೆಟ್ ಬಿಲ್ ಪಾವತಿಗೆ ಬಳಸಿಕೊಳ್ಳಬ ಹುದಾಗಿದೆ.
2024-25ನೇ ಸಾಲಿನ ಚಾಲ್ತಿ ಬೇಡಿಕೆ ರೂ.20.84 ಕೋಟಿ ಇದ್ದು, ಏಪ್ರೀಲ್ 1 ರಿಂದ ಡಿಸೆಂಬರ್ 23ರ ವರೆಗೆ (ವಿಶೇಷ ಅಭಿಯಾನ ಸೇರಿ) ರೂ.5.81 ಕೋಟಿ ಕರ ವಸೂಲಿಯಾಗಿದ್ದು, ಶೇ.27.87 ರಷ್ಟು ಪ್ರಗತಿ ಸಾಧಿಸಲಾಗಿದೆ. ತಾಲ್ಲೂಕುವಾರು ಕರ ವಸೂಲಿ ವಿವರ ಯಾದಗಿರಿ ತಾಲ್ಲೂಕಿನ ಗ್ರಾ.ಪಂ.ಗಳ ಸಂಖ್ಯೆ 22ರಲ್ಲಿ 45,52,429. ರೂ.ಗಳ ಕರ ವಸೂಲಿ ಮಾಡಲಾಗಿದೆ. ಗುರುಮಠಕಲ್ ತಾಲ್ಲೂಕಿನ ಗ್ರಾ.ಪಂ.ಗಳ ಸಂಖ್ಯೆ 18 ರಲ್ಲಿ 30,88,899.00 ರೂ.ಗಳ ಕರ ವಸೂಲಿ ಮಾಡಲಾಗಿದೆ.
ಶಹಾಪೂರ ತಾಲ್ಲೂಕಿನ ಗ್ರಾ.ಪಂ.ಗಳ ಸಂಖ್ಯೆ 24 ರಲ್ಲಿ 36,21,553.00 ರೂ.ಗಳ ಕರ ವಸೂಲಿ ಮಾಡಲಾಗಿದೆ. ವಡಗೇರಾ ತಾಲ್ಲೂಕಿನ ಗ್ರಾ.ಪಂ.ಗಳ ಸಂಖ್ಯೆ 17 ರಲ್ಲಿ 23,18,326.00 ರೂ.ಗಳ ಕರ ವಸೂಲಿ ಮಾಡಲಾಗಿದೆ. ವಡಗೇರಾ ತಾಲ್ಲೂಕಿನ ಗ್ರಾ.ಪಂ.ಗಳ ಸಂಖ್ಯೆ 17 ರಲ್ಲಿ 23,18,326.00 ರೂ.ಗಳ ಕರ ವಸೂಲಿ ಮಾಡಲಾಗಿದೆ.
ಸುರಪೂರ ತಾಲ್ಲೂಕಿನ ಗ್ರಾ.ಪಂ.ಗಳ ಸಂಖ್ಯೆ 23 ರಲ್ಲಿ 41,19,076.00 ರೂ.ಗಳ ಕರ ವಸೂಲಿ ಮಾಡಲಾಗಿದೆ. ಹುಣಸಗಿ ತಾಲ್ಲೂಕಿನ ಗ್ರಾ.ಪಂ.ಗಳ ಸಂಖ್ಯೆ 18 ರಲ್ಲಿ 25,56,963.00 ರೂ.ಗಳ ಕರ ವಸೂಲಿ ಮಾಡಲಾಗಿದೆ.
ಯಾದಗಿರಿ ಜಿಲ್ಲೆಯಾದ್ಯಂತ ಗ್ರಾ.ಪಂ.ಗಳ ಸಂಖ್ಯೆ 122 ರಲ್ಲಿ 2,02,57,249.00 ರೂ.ಗಳ ಕರ ವಸೂಲಿ ಮಾಡಲಾಗಿದೆ.
ಹೆಚ್ಚು ಕರ ಸಂಗ್ರಹಿಸಿದ ಗ್ರಾ.ಪಂ. ವಿವರ : ಯಾದಗಿರಿ ತಾಲ್ಲೂಕಿನ ಕಿಲ್ಲನಕೇರಾ ಗ್ರಾ.ಪಂ. 6,00,064.00 ಕರ ವಸೂಲಿ ಮಾಡಲಾಗಿದೆ. ಗುರುಮಠಕಲ್ ತಾಲ್ಲೂಕಿನ ಅಜಲಾಪೂರ ಗ್ರಾ.ಪಂ. 2,67,932.00 ಕರ ವಸೂಲಿ ಮಾಡಲಾಗಿದೆ. ಶಹಾಪೂರ ತಾಲ್ಲೂಕಿನ ನಾಗನಟಗಿ ಗ್ರಾ.ಪಂ. 3,25,041.00 ಕರ ವಸೂಲಿ ಮಾಡಲಾಗಿದೆ. ವಡಗೇರಾ ತಾಲ್ಲೂಕಿನ ಬೆಂಡೆಬೆಂಬಳಿ ಗ್ರಾ.ಪಂ.3,95,472.00 ಕರ ವಸೂಲಿ ಮಾಡಲಾಗಿದೆ.
ಸುರಪೂರ ತಾಲ್ಲೂಕಿನ ಯಾಳಗಿ ಗ್ರಾ.ಪಂ. 5,07,288.00 ಕರ ವಸೂಲಿ ಮಾಡಲಾಗಿದೆ. ಹುಣಸಗಿ ತಾಲ್ಲೂಕಿನ ಅರಕೇರಾ.ಜೆ ಗ್ರಾ.ಪಂ. 3,50,490.00 ಕರ ವಸೂಲಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.