ಗಡಿಯಲ್ಲಿ ಪೊಲೀಸರಿಂದ ಸೂಕ್ತ ಭದ್ರತಾ ಕ್ರಮ
ಯಾದಗಿರಿ: ಭಾನುವಾರ ಅ.27 ರಂದು ಗ್ರಾಮ ಆಡಳಿತ ಅಧಿಕಾರಿಗಳ ನೇರ ನೇಮಕಾತಿ ಪರೀಕ್ಷೆಗೆ ದಿನಾಂಕ ನಿಗದಿಯಾಗಿದ್ದು, ಜಿಲ್ಲೆಯ 21 ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ 10:30ರಿಂದ 12:30ರ ವರೆಗೆ ಮತ್ತು ಮಧ್ಯಾಹ್ನ 2:30ರಿಂದ 4:30ರ ವರೆಗೆ ನಡೆಯುವ ಪರೀಕ್ಷೆಗೆ 8836 ಅಭ್ಯರ್ಥಿಗಳು ನೋಂದಣಿಯಾಗಿದ್ದಾರೆ.
ಈಗಾಗಲೇ ಜಿಲ್ಲಾಡಳಿತ ಪಾರದರ್ಶಕ ಪರೀಕ್ಷೆಗೆ ಸಕಲ ರೀತಿಯಲ್ಲಿ ಸಿದ್ಧತೆ ಕೈಗೊಂಡಿದ್ದು, ನಿಯಮದಂತೆ ಪರೀಕ್ಷಾ ಕೇಂದ್ರಗಳ ಆವರಣದಲ್ಲಿಯೇ ಪೊಲೀಸರು ಅಭ್ಯರ್ಥಿಗಳಿಗೆ ನಿಯಮ ಪಾಲನೆ ಸೂಚನೆಗಳನ್ನು ನೀಡುತ್ತಿರುವುದು ಕಂಡು ಬಂತು.
ಗುರುಮಠಕಲ್ ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜುಗಳಲ್ಲಿಯೂ ಅಭ್ಯರ್ಥಿಗಳು ಪರೀಕ್ಷೆ ಬರೆದರು.
ಗಡಿ ತಾಲೂಕು ಗುರುಮಠಕಲ್ ನಲ್ಲಿ ಡಿವೈಎಸ್ಪಿ ಭಾರತ ಜಿ.ತಳವಾರ, ಸ್ಥಳೀಯ ಪಿಐ ಡಿ.ಡಿ.ಧೂಳಖೇಡ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಪೊಲೀಸ್ ಭದ್ರತೆ ಒದಗಿಸಲಾಗಿದೆ.