ಯಾದಗಿರಿ: ಕೇಂದ್ರ ಸರಕಾರ ಕೆಲ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಗಳ ದರ ಇಳಿಕೆ ಮಾಡಿದ್ದನ್ನು ಸ್ವಾಗತಿಸಿ ಬಿಜೆಪಿ ವತಿಯಿಂದ ಯಾದಗಿರಿ, ಗುರುಮಠಕಲ್ ನಲ್ಲಿ ಸಂಭ್ರಮಾಚರಣೆ ನಡೆಯಿತು.
ನಗರದ ಗಾಂಧಿ ವೃತ್ತದಲ್ಲಿ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಆಯೋಜಿಸಿದ ಜಿಎಸ್ಟಿ ಇಳಿಕೆಗೆ ಉಡುಗೊರೆ ಮೋದಿ ಸರಕಾರಕ್ಕೆ ಧನ್ಯವಾದಗಳು ಘೋಷ ವಾಕ್ಯದ ಅಡಿಯಲ್ಲಿ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಮಾತನಾಡಿ, ಕೇಂದ್ರ ಸರಕಾರ ಜಿಎಸ್ ಟಿ ಇಳಿಕೆ ಮಾಡಿ ಜನರಿಗೆ ನವರಾತ್ರಿ ಉಡುಗೊರೆ ನೀಡಿದೆ. ದೇಶದ ಇತಿಹಾಸದಲ್ಲಿ ಜಿಎಸ್ ಟಿ ಏರಿಸಿದ್ದನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಇಳಿಸಿದ ಉದಾಹರಣೆ ಇಲ್ಲ. ನರೇಂದ್ರ ಮೋದಿ ಈ ಕೆಲಸ ಮಾಡಿ ಬಡ, ಮಧ್ಯಮ ವರ್ಗದ ಜನರಿಗೆ ಅನುಕೂಲ ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಮತ್ತು ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಬಿಜೆಪಿ ಹಿರಿಯ ಮುಖಂಡೆ ನಾಗರತ್ನ ಕುಪ್ಪಿ,ಯುವ ಮುಖಂಡ ಮಹೇಶರಡ್ಡಿ ಮುದ್ನಾಳ,ದೇವೇಂದ್ರನಾಥ ನಾದ್, ಸಿದ್ದಣ್ಣಗೌಡ ಕಾಡಂನೋರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮಾ ಮತ್ತು ಪರಶುರಾಂ ಕುರಕುಂದಾ, ಜಿಲ್ಲಾ ವಕ್ತಾರ ಮತ್ತು ನಗರಸಭೆ ಸದಸ್ಯ ಹಣಮಂತ ಇಟಗಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಧರ ಆರ್ ಸಾಹುಕಾರ, ವೆಂಕಟರೆಡ್ಡಿ ಅಬ್ಬೆತೂಮಕುರ, ಬಸವರಾಜು ಸೊನ್ನದ
ಮಲ್ಲಿಕಾರ್ಜುನ ಹೊನಿಗೇರಿ, ಗುರುಮಠಕಲ್ ಅಧ್ಯಕ್ಷ ನರಸಿಂಹಲು ನೀರಟಿ, ಚಂದುಲಾಲ ಚೌಧರಿ, ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜಶೇಖರ್ ಕಾಡಂನೊರ, ನಗರಸಭೆ ಉಪಾಧ್ಯಕ್ಷೆ ರುಕೀಯ್ ಬೇಗಂ, ಸುನಿತಾ ಚೌವ್ಹಾಣ್,ನಗರಸಭೆ ಸದಸ್ಯ ಸ್ವಾಮಿದೇವ ದಾಸನಕೇರಿ, ವಿಜಯಲಕ್ಷ್ಮಿ ನಾಯಕ,ವೀಣಾ ಮೋದಿ, ಚನ್ನವೀರಯ್ಯ ಸ್ವಾಮಿ,ಶಕುಂತಲಾ ಜಿ,ಶಿವಣ್ಣ ಬಡಿಗೇರ,ಮೋನೇಶ ಬೆಳಿಗೇರಿ,ಮಲ್ಲಿಕಾರ್ಜುನ ಕಟ್ಟಿಮನಿ, ಬಾಲಪ್ಪ ಯಲ್ಲಮೋಳ, ರವೀಂದ್ರ ರೆಡ್ಡಿ ಪೋತುಲ್, ವೆಂಕಟಪ್ಪ ಅವಂಗಾಪುರ, ಲಕ್ಷ್ಮಿಪುತ್ರ ಮಾಲಿಪಾಟೀಲ,ಸಾಬು ಚಂಡ್ರಕಿ, ಮಂಜುನಾಥ ಗುತ್ತೆದಾರ,ಮಲ್ಲು ಕೊಲಿವಾಡ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
