ಶಾಂತವೀರ ಶ್ರೀಗಳ ಸಮ್ಮುಖ| ನ್ಯಾಯವಾದಿಗಳ ಪೂರ್ವಭಾವಿ ಸಭೆ | ಡಿ.23ರಂದು ನ್ಯಾಯಾಲಯ ಕ್ಕಾಗಿ ಮನವಿ ಸಲ್ಲಿಕೆಗೆ ನಿರ್ಧಾರ
ಗುರುಮಠಕಲ್ : ಪಟ್ಟಣವು ತಾಲೂಕ ಕೇಂದ್ರವಾಗಿ ಘೋಷಣೆ ಯಾಗಿ ವರ್ಷಗಳೇ ಕಳೆದರೂ ಅಗತ್ಯ ಸರ್ಕಾರಿ ಕಚೇರಿಗಳು ಇಲ್ಲ. ಇಲ್ಲಿನ ಜನರು ಪ್ರತಿಯೊಂದು ಸಣ್ಣ ಕೆಲಸ ಕ್ಕೂ 40 ಕಿ. ಮೀ ದೂರದ ಜಿಲ್ಲಾ ಕೇಂದ್ರಕ್ಕೆ ತೆರಳಬೇಕು. ಇದು ಗಡಿ ತಾಲೂಕು ಗುರುಮಠಕಲ್ ಸಾರ್ವಜನಿಕರ ಅಳಲು…
ತಾಲೂಕಿಗೆ ದಶಕಗಳೇ ಕಳೆದರು ಇನ್ನು ಸಂಬಂಧ ಪಟ್ಟ ಇಲಾಖೆಗಳು ಹಾಗೂ ನ್ಯಾಯಾಲಯ ಬರದೇ ಇರುವದಕ್ಕೆ ಜಿಲ್ಲಾ ವಕೀಲ ಸಂಘದ ಅಧ್ಯಕ್ಷ ಸಿ. ಎಸ್. ಮಾಲಿಪಾಟೀಲ್ ವಿಷಾಧ ವ್ಯಕ್ತಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಡಿಸೆಂಬರ್ 23 ರಂದು ಗಾಂಧಿ ಮೈದಾನದಿಂದ ಬಸವೇಶ್ವರ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ಮನವಿ ಪತ್ರ ಸಲ್ಲಿಸಲಾಗುವುದು.
ಕಳೆದ 2012 ರಿಂದ ನ್ಯಾಯಾಲಯದ ಬೇಡಿಕೆಯಿಟ್ಟಿದ್ದೇವೆ, ಮಾನದಂಡದ ಪ್ರಕಾರ ತಾಲೂಕಿನಿಂದ 1200 ಪ್ರಕರಣಗಳು ದಾಖಲಾಗುತ್ತಿದ್ದರು. ನೆಪ ಹೇಳಿ ಮುಂದೂಡುತ್ತಿರುವುದು ಸಹಿಸಲಾಗದು, ಪ್ರಯುಕ್ತ ಮುಂದಿನ ದಿನಗಳಲ್ಲಿ ನ್ಯಾಯಯುತ ಬೇಡಿಕೆಗಳಿಗಾಗಿ ಹೋರಾಟ ಮಾಡುತ್ತೇವೆ ಎಂದರು.
ಇದೇ ಸಂಧರ್ಭದಲ್ಲಿ ವಕೀಲ ಆನಂದ ರಾವ್ ನೀರೇಟಿ ಮಾತನಾಡಿ, ಸುತ್ತಮುತ್ತಲಿನ ಗ್ರಾಮಗಳಿಂದ ನಯವಾಧಿಗಳು ಸೇರಿದಂತೆ ಅರ್ಜಿದಾರರು ದೂರದ ಯಾದಗಿರಿಗೆ ಅಲೆಡದಾಡ ಬೇಕಾಗಿದೆ, ಸಮಯ ಸೇರಿದಂತೆ ಆರ್ಥಿಕ ಹೊರೆಯಾಗುತ್ತಿದೆ.
ಪುರಸಭೆ ಕಾರ್ಯಾಲಯವು ಬೇಡಿಕೆಗೆ ಸ್ಪಂಧಿಸಿ ಟೌನ್ ಹಾಲ್ ಅನ್ನು ಬಳಕೆಗೆ ನೀಡಿದ್ದು ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ತಾಲೂಕ ಕೇಂದ್ರದಲ್ಲಿ ನ್ಯಾಯಾಲಯ ಪ್ರಾರಂಭಿಸಲು ಸಾಧ್ಯವಾ ಗುತ್ತಿಲ್ಲ. ಈ ಕೂಡಲೇ ಸಂಬಂಧ ಪಟ್ಟವರು ಮುತುವರ್ಜಿ ವಹಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುತ್ತದೆ ಎಂದರು.
ಪ್ರತಿಭಟನೆಗೆ ಖಾಸಾಮಠದ ಶ್ರೀ ಶಾಂತವೀರ ಗುರು ಮುರುಘ ರಾಜೇಂದ್ರ ಸ್ವಾಮೀಜಿ ಬೆಂಬಲ ನೀಡಿ ಸಭೆಯಲ್ಲಿ ಭಾಗವಹಿ ಸಿದ್ದರು. ಅವರು ಇಲ್ಲಿನ ಜನರು ತಾಲ್ಲೂಕು ಕೇಂದ್ರವಾದರೂ ಜಿಲ್ಲಾ ಕೇಂದ್ರಕ್ಕೆ ಅಲೆದಾಡುವುದು ತಪ್ಪುತ್ತಿಲ್ಲ. ಇಲ್ಲಿಯೇ ನ್ಯಾಯಾಲಯವಾದಲ್ಲಿ ಜನರ ಸಮಸ್ಯೆಗೆ ಇಲ್ಲಿಯೇ ಪರಿಹಾರ ಸಿಗುವುದು ಅನುಕೂಲವಾಗುವುದು ಎಂದು ಹೇಳಿದರು. ಈ ವೇಳೆ ಪಟ್ಟಣದ ಗಣ್ಯರು, ಮುಖಂಡರು ಇದ್ದರು.