ಬಳಿಚಕ್ರ ಪ್ರೌಢ ಶಾಲೆಯಲ್ಲಿ ಜೀವನ ಕೌಶಲ್ಯ ಶಿಕ್ಷಣದ ಕುರಿತು ಜಾಗೃತಿ ಕಾರ್ಯಕ್ರಮ

ಗುರುಮಠಕಲ್: ಮಕ್ಕಳಿಗೆ ಶಿಕ್ಷಣದ ಜೊತೆಗೆ ಆರೋಗ್ಯ ಕಾಳಜಿಯೂ ಮುಖ್ಯವಾಗಿದೆ ಎಂದು ಬಳಿಚಕ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮುದಾಸಿರ್ ಅಹ್ಮದ್ ಹೇಳಿದರು.

ಬಳಿಚಕ್ರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ ಕಲಿಕೆ ಟಾಟಾ ಟ್ರಸ್ಟ್ ಸಂಸ್ಥೆ ವತಿಯಿಂದ ಟೈಟನ್ ಕನ್ಯಾ ಸಂಪೂರ್ಣ ಕಾರ್ಯಕ್ರ ಮದಡಿ ಆಯೋಜಿಸಿದ್ದ ಜೀವನ ಕೌಶಲ್ಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಶಾಲೆಗಳಲ್ಲಿ ಹಾಲು, ಮೊಟ್ಟೆ ವಿತರಣೆ ಮಾಡಲಾಗುತ್ತಿದೆ ಎಂದರು.

ಮುಖ್ಯಗುರು ಅನ್ನಪೂರ್ಣ ಬಂಡಾರಿಕರ್ ಮಾತನಾಡಿ, ಜೀವನದಲ್ಲಿ ಗುರಿ ಸಾಧಿಸಲು ಶಿಕ್ಷಣವೇ ಪ್ರಮುಖ ಅಸ್ತ್ರವಾಗಿದೆ. ಬಡವರು, ಶ್ರೀಮಂತರು ಎನ್ನದೇ ಯಾರಲ್ಲಿ ಪ್ರತಿಭೆ, ಚತುರತೆ ಯಿದೆಯೇ ಅವರು ಸಾಧನೆ ಮಾಡಬಹುದು ಎಂದು ಶಿಕ್ಷಣದ ಮಹತ್ವ ವಿವರಿಸಿದರು.

ನಂತರ ಮಾನವ ಹಕ್ಕುಗಳು ಕುರಿತು ಪ್ರಾಥಮಿಕ ಶಾಲೆ ಮುಖ್ಯ ಗುರು ವಿಶ್ವರಾದ್ಯ ಮಾತನಾಡಿದರು.

ರಸ್ತೆ ಸುರಕ್ಷತೆ, ಬಾಲ್ಯ ವಿವಾಹ, ಪೋಸ್ಕೊ ಕಾಯ್ದೆ, ಬಾಲ ಕಾರ್ಮಿ ಕ ಪದ್ಧತಿ ಇತರೆ ಕಾನೂನಿನ ನಿಯಮಗಳು ಕುರಿತು ಸೈದಾಪೂರ ಪಿಎಸ್ಐ ಭೀಮರಾಯ ಕಾನೂನು ಅರಿವು ನೀಡಿದರು. ಮಕ್ಕಳು ಕೆಲವು ಪ್ರಶ್ನೆಗಳನ್ನು ಕೇಳುವುದರ ಮೂಲಕ ತಮ್ಮಲ್ಲಿರುವ ಸಂಶಯಗಳಿಗೆ ಸ್ಪಷ್ಟ ಉತ್ತರ ಪಡೆದರು‌.

ಕಲಿಕೆ ಸಂಸ್ಥೆ ಸಂಯೋಜಕ ರವಿಕುಮಾರ ಪ್ರಾಸ್ತಾವಿಕ ಮಾತನಾಡಿದರು.  ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಶಾಲೆಯ ಶಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!