ಗುರುಮಠಕಲ್ : ಎರಡನೇ ತಿರುಪತಿ ಎಂದೇ ಖ್ಯಾತಿ ಪಡೆದಿರುವ ಲಕ್ಷ್ಮೀತಿಮ್ಮಪ್ಪ ದೇವಸ್ಥಾನದ 15ನೇ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ದೇವಸ್ಥಾನ ವ್ಯವಸ್ಥಾಪಕ ನರೇಂದ್ರ ರಾಠೋಡ ತಿಳಿಸಿದರು.
ಪಟ್ಟಣದ ಎಸ್ ಎಲ್ ಟಿ ಸಿಬಿಎಸ್ ಸಿ ಶಾಲೆಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ನ.14 ರಂದು ಸಂಜೆ 6 ಕಾರ್ತಿಕ ಸಹಸ್ರ ದೀಪೋತ್ಸವ, ಜಾತ್ರಾ ಉದ್ಘಾಟನೆಯನ್ನು ಶಾಸಕ ಶರಣಗೌಡ ಕಂದಕೂರ ನೆರವೇರಿಸಲಿದ್ದಾರೆ.
ಪೂಜ್ಯ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ, ನೆರಡಗುಂಬ ಮಠದ ಪೂಜ್ಯ ಸಿದ್ದಲಿಂಗಸ್ವಾಮಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಲಕ್ಷ್ಮೀ ತಿಮ್ಮಪ್ಪ ಜಾತ್ರಾ ಮಹೋತ್ಸವದ ನಿಮಿತ್ತ ಗುರುವಾರ ನ. 14 ರಂದು ಬೆಳಿಗ್ಗೆ 08.00 ಗಂಟೆಗೆ ಶ್ರೀ ಲಕ್ಷ್ಮೀ ತಿಮ್ಮಪ್ಪದೇವರಿಗೆ ಕಲಬುರಗಿ ವಾದಿರಾಜ ಆಚಾರ್ಯ ಕನಕಗಿರಿ ಮತ್ತು ಇನ್ನಿತರ ಆಚಾರ್ಯರಿಂದ ವಿಶೇಷ ಪೂಜೆ, ಅಭಿಷೇಕ ಮತ್ತು ಅಲಂಕಾರ 09.00 ರಿಂದ ಮದ್ಯಾಹ್ನ 12.00 ಗಂಟೆವರೆಗೆ ಶ್ರೀ ಸೂಕ್ತ ಹೋಮ, ಪುರಷಸೂಕ್ತ ಹೋಮ, ನವಗ್ರಹ ಹೋಮ ಸಂಜೆ 06.00 ಗಂಟೆಗೆ ಕಾರ್ತಿಕ ಸಹಸ್ರ ದೀಪೋತ್ಸವ ಮಹಾ ಮಂಗಳಾರತಿ ಜರುಗುವುದು. ರಾತ್ರಿ 08.00 ಗಂಟೆಗೆ ಬೋರಬಂಡಾ ಗ್ರಾಮದ ಸಾಬಪ್ಪ ಕಿಂದಿಂಟೋಳು ಇವರ ಮನೆಯಿಂದ ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದ ವರೆಗೆ ಪಲ್ಲಕ್ಕಿ ಉತ್ಸವ ನೆರವೇರುವುದು, ತದನಂತರ ಇಡೀ ರಾತ್ರಿ ಸಾರ್ವಜನಿಕರಿಂದ ಭಜನೆ ಕಾರ್ಯಕ್ರಮ ಜರುಗುವುದು ಎಂದು ತಿಳಿಸಿದರು.
ನ.15 ರಂದು ಪೂರ್ಣಿಮಾ ರಂದು ಬೆಳಿಗ್ಗೆ 05.30 ಗಂಟೆಗೆ ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವರಿಗೆ ಸುಪ್ರಭಾತ ಸೇವೆ, ಬೆಳಿಗ್ಗೆ 06.30 ಗಂಟೆಗೆ ಪಂಚಾಮೃತ ಅಭಿಷೇಕ, ಅಲಂಕಾರ ಸೇವೆ, ಬೆಳಿಗ್ಗೆ 09.00 ರಿಂದ 10.00 ಗಂಟೆವರೆಗೆ ರಥಾಂಗ ಹೋಮ ನೆರವೇರುವುದು. ಬೆಳಿಗ್ಗೆ 10.00 ಗಂಟೆಗೆ ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವರ ಕಲ್ಯಾಣೋತ್ಸವ ತದನಂತರ ಭವ್ಯವಾಗಿ ರಥೋತ್ಸವ ಜರುಗುವುದು.
ನಂತರ ಉಂಜಲ ಸೇವಾ, ಸಹಸ್ರ ತುಳಸಿ ಅರ್ಚನೆ, ಕುಂಕುಮ ಅರ್ಚನೆ ಮತ್ತು ಮಹಾ ಮಂಗಳಾರತಿ ಬಂದಂತಹ ಭಕ್ತರಿಗೆ ಮಹಾ ಪ್ರಸಾದ ವಿತರಣೆ ಹಾಗೂ ಕೈ ಕುಸ್ತಿ ಕಾರ್ಯಕ್ರಮ ಜರುಗುವುದು.
ಈ ಎಲ್ಲಾ ಜಾತ್ರಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾಧಿ ಗಳು ಭಾಗಿಯಾಗಿ ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವರ ಕೃಪೆಗೆ ಪಾತ್ರರಾಗಬೇಕೆಂದು ನರೇಂದ್ರ ರಾಠೋಡ್ ಅವರು ಮನವಿ ಮಾಡಿದ್ದಾರೆ.