ಜಿಲ್ಲಾ ಉಪಾಧ್ಯಕ್ಷ, ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಪ್ರಮುಖ ಕಾರ್ಯಕರ್ತರು ಭಾಗಿ

ಗುರುಮಠಕಲ್: ಯಾದಗಿರಿ ಜಿಲ್ಲಾ ಉಪಾಧ್ಯಕ್ಷ ಪ್ರಕಾರ ಮೌರ್ಯ ಮತ್ತು ಭೀಮರಾಯ ಗಿರಿಗಿರಿ ನೇತೃತ್ವದಲ್ಲಿ ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಬಹುಜನ ಸಮಾಜ ಪಕ್ಷದ ಪ್ರಮುಖ ಕಾರ್ಯಕರ್ತರು ಪಕ್ಷದ ರಾಜ್ಯಾಧ್ಯಕ್ಷರಿಗೆ ಸಾಮೂಹಿಕ ರಾಜೀನಾಮೆ ಪತ್ರ ಸಲ್ಲಿಸಲಾಗುವುದು ಎಂದು ಘೋಷಿಸಿದರು.

ಪಟ್ಟಣದ ಅತಿಥಿ ಗೃಹದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಅಶೋಕ್ ಗಿರಿಗಿರಿ, ಬಹುಜನ ಸಮಾಜ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾದ ಮಾಯಾವತಿ ಅವರ ನೇತೃತ್ವದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ನಾವು ಪಕ್ಷದ ಧೋರಣೆಯಲ್ಲಿ ಮಹತ್ವಪೂರ್ಣ ಬದಲಾವಣೆಗಳನ್ನು ಗಮನಿಸಿದ್ದೇವೆ. ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಮತ್ತು ದಾದಾಸಾಹೇಬ್ ಕಾನ್ಷಿ ರಾಮ್ ಅವರ ಸಿದ್ಧಾಂತಗಳನ್ನು ಬಿಟ್ಟು, ತಮ್ಮ ಕುಟುಂಬ ರಾಜಕಾರಣವನ್ನು ಮುಂದುವರಿಸಲು ಅವರ ನಡೆಗಳಿಂದ ಬೇಸರಗೊಂಡು ರಾಜೀನಾಮೆ ನೀಡಿರುವುದಾಗಿ ಹೇಳಿದರು.

ಮುಸ್ಲಿಂ ವಿರೋಧಿ ಕಾಯ್ದೆಗಳು, ರಾಷ್ಟ್ರೀಯ ಶಿಕ್ಷಣ ನೀತಿ, ರೈತರ ಹೋರಾಟದಲ್ಲಿ ಮೌನ ಧರಣಿ, ಮತ್ತು ಒಂದು ರಾಷ್ಟ್ರ-ಒಂದು ಚುನಾವಣೆ ಸೇರಿ ಹಲವು ಘಟನೆಗಳನ್ನು ಖಂಡಿಸಿದೆ ಮೌನ ತಾಳಿದ್ದಾರೆ.

ಒಳಮೀಸಲಾತಿ ತೀರ್ಪು ವಿರೋಧಿಸಿ ತೀರ್ಪನ್ನು ಮರುಪರಿಶೀಲಿಸುವಂತೆ ಅವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಘಟನೆಗಳ ಹಿನ್ನೆಲೆಯಲ್ಲಿ, ಅವರ ಸರ್ವಾಧಿಕಾರಿ ತಂತ್ರದಿಂದ ನಾವು ಅವರ ಮೇಲೆ ನಂಬಿಕೆಯನ್ನು ಕಳೆದುಕೊಳ್ಳುವಂತಾಗಿದೆ ಎಂದರು.

ಆದಕಾರಣ, ನಮ್ಮ ಆತ್ಮಗೌರವವನ್ನು ಕಾಯ್ದುಕೊಂಡು, ನಾವು ಬಹುಜನ ಸಮಾಜ ಪಾರ್ಟಿಯ ಪ್ರಾಥಮಿಕ ಸದಸ್ಯತ್ವದಿಂದ ರಾಜೀನಾಮೆ ನೀಡುತ್ತಿದ್ದೇವೆ. ಮುಂದೆ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಸೇರುವುದಾಗಿ ಹೇಳಿದರು.

ಈ ವೇಳೆ ಗುಂಡೇಶ್ ಹಲ್ಗೂರ್, ಮಹದೇವಪ್ಪ ಚಪೇಟ್ಲಾ, ಅಶೋಕ್ ಬಟನ್ನೇತಿ, ಕರಿಯಪ್ಪ ಯದ್ಲಾಪುರ್,  ದೇಶಪ್ಪ ಚಿನ್ನಾಕಾರ್ , ಧನಂಜಯ ಬಂಟು, ಸುರೇಶ್ ಬೂದುರ್, ಮಲ್ಲಿಕಾರ್ಜುನ್, ನರೇಶ್, ನವೀನ್ , ಚಂದ್ರು ನಜರಾಪುರ್, ಆನಂದ್ ನಜರಾಪುರ್ , ರಮೇಶ್ ಮಾಡೆಗಾನ್, ಮೊಂಡಿ ಚನ್ನಪ್ಪ , ಗೋಪಾಲಕೃಷ್ಣ ಚಪೆಟ್ಲಾ  ಇವರು ತಮ್ಮ ಸ್ಥಾನಗಳಿಗೆ ರಾಜಿನಾಮೆ ಸಲ್ಲಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!