ಯಾದಗಿರಿಧ್ವನಿ.ಕಾಮ್ ಫಾಲೋಆಪ್ | ಕೃಷಿ ವಿಜ್ಞಾನಿಗಳು ಭೇಟಿ ಸಾಧ್ಯತೆ
ಯಾದಗಿರಿ: ಜಿಲ್ಲೆಯ ಬುದುರು ಗ್ರಾಮದಲ್ಲಿ ಅಂದಾಜು 150 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ತೊಗರಿ ಬೆಳೆ ಫಸಲು ನೀಡದ ಕುರಿತು ವರದಿಯಾಗಿತ್ತು.
ವರದಿ ಬೆನ್ನಲ್ಲೇ ಗುರುಮಠಕಲ್ ಕೃಷಿ ಅಧಿಕಾರಿ ಮಲ್ಲಿಕಾರ್ಜುನ ವಾರದ ಅವರು ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಬಳಿಕ ಯಾದಗಿರಿಧ್ವನಿಯೊಂದಿಗೆ ಮಾತನಾಡಿದ ಕೃಷಿ ಅಧಿಕಾರಿ, ಬೂದುರು ಗ್ರಾಮಕ್ಕೆ ತೆರಳಿ ರೈತರ ಜಮೀನು ಪರಿಶೀಲನೆ ಮಾಡಲಾಯಿತು. ತೊಗರಿ ಬೆಳೆ ಫಸಲು ನೀಡದಿರುವುದು ಇದೊಂದು ವೈರಸ್ ಮೂಲಕ ಹರಡುವ ರೋಗದಿಂದ ಈ ರೀತಿಯಾಗಿದೆ.
ರೈತರು ಸಾಮಾನ್ಯವಾಗಿ ಗೊಡ್ಡು ರೋಗ ಎಂದು ಕರೆಯುತ್ತಾರೆ. ಇದು ಆರಂಭ ಹಂತದಲ್ಲೇ ಕ್ರಮವಹಿಸಬೇಕಿತ್ತು, ಈಗ ಪರಿಸ್ಥಿತಿ ಕೈ ಮೀರಿದೆ. ಏನು ಮಾಡಲು ಸಾಧ್ಯವಾಗಲ್ಲ.
ಮೇಲಾಗಿ ರೈತರು ಬೆಳೆ ವಿಮೆ ಮಾಡಿಸಿಲ್ಲ. ಬೆಳೆ ವಿಮೆ ಬಗ್ಗೆ ವ್ಯಾಪಕ ಪ್ರಚಾರ ಮಾಡಲಾಗಿದೆ. ವಿಮೆ ಮಾಡಿಸಿದ್ದರೇ ಪರಿಹಾರ ದೊರಕಿಸಬಹುದಿತ್ತು ಎಂದರು.
ಕೃಷಿ ವಿಜ್ಞಾನಿಗಳಿಗೆ ಮಾಹಿತಿ ನೀಡಲಾಗಿದೆ. ಪರಿಶೀಲನೆ ಮಾಡಲಿದ್ದಾರೆ ಎಂದು ತಿಳಿಸಿದರು.
ಮುಂದೆ ರೋಗ ಬರದಂತೆ ರೈತರು ವಹಿಸಬೇಕಿರುವ ಮುನ್ನೆಚ್ಚರಿಕೆ ಕುರಿತು ಮಾಹಿತಿ ನೀಡಲಾಗಿದೆ. ಬೆಳೆ ಪರಿವರ್ತನೆ ಸೇರಿ ಕೈಗೊಳ್ಳಬೇಕಿರುವ ಮಾಹಿತಿ ನೀಡಿದ್ದಾರೆ.
ಬೆಳೆಗೆ ಕಾಡುತ್ತಿದೆ ಬಂಜೆ ರೋಗ: ಬೂದುರು ವ್ಯಾಪ್ತಿಯಲ್ಲಿ 150 ಎಕರೆ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ. ಸಕಾಲಕ್ಕೆ ಬೀಜ ಬಿತ್ತನೆ ಮಾಡಲಾಗಿದೆ. ಉತ್ತಮ ಇಳುವರಿ ಬರುವ ನಿರೀಕ್ಷೆಯಲ್ಲಿದ್ದ ರೈತರಿಗೆ ಆಘಾತ ಕಾಡಿದೆ. ಏಕೆ ಚಿಗುರೊಡೆದಿಲ್ಲ, ಕಾಯಿ ಕೊಟ್ಟಿಲ್ಲ ಎಂದು ರೈತರು ಚಿಂತೆಯಿಲ್ಲ ಮುಳುಗಿದ್ದರು, ಇದೀಗ ಕೃಷಿ ಅಧಿಕಾರಿಗಳು ಭೇಟಿ ನೀಡಿದ್ದು ವೈರಸ್ ನಿಂದ ಹರಡಿರುವ ಬಂಜೆ ರೋಗ ಹರಡಿದೆ ಎನ್ನುವ ಮಾಹಿತಿ ನೀಡಿದ್ದಾರೆ.