ಯಾದಗಿರಿ: ಜಗತ್ತಿಗೆ ಶಾಂತಿಯ ಮಾರ್ಗ ತೋರಿದ ಯೇಸು ಕ್ರಿಸ್ತನ ಜನ್ಮದಿನದ ಕ್ರಿಸ್ ಮಸ್ ಹಬ್ಬವನ್ನು ಕ್ರೈಸ್ತರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಸಂಭ್ರಮದಿಂದ ಆಚರಿಸಿದರು.

ತಾನು ದನದ ಕೊಟ್ಟಿಗೆ ಜನಿಸಿದರೂ ತನ್ನನ್ನು ನಡೆದುಕೊಂಡ ವರಿಗೆ ಅರಮನೆ ಜೀವನ ನೀಡಿದವರು ಯೇಸುಕ್ರಿಸ್ತರು ಎಂದು ಫೆಲೋಶಿಪ್ ಚರ್ಚ್ ನ ಪಾಸ್ಟರ್ ದಿನೇಶ ಬಣ್ಣಿಸಿದರು.

ಚಿರಂಜೀವಿ ನಗರದ ಫೆಲೋಶಿಪ್ ಚರ್ಚ್ ನಲ್ಲಿ ಕ್ರಿಸ್ಮಸ್ ಹಬ್ಬದ ನಿಮಿತ್ಯ ಏರ್ಪಡಿಸಿದ ವಿಶೇಷ ಪ್ರಾರ್ಥನೆ & ವಿವಿಧ ಕ್ಷೇತ್ರದಲ್ಲಿ ಸಾಧನಗೈದ ಗಣ್ಯರಿಗೆ ಸನ್ಮಾನ, ಗೀತಾ ಗಾಯನ, ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರರ ಸುಖದಲ್ಲಿ ಸಂತೋಷವನ್ನು ಕಂಡು ಇಡಿ ಜೀವನವನ್ನೇ ಮಾನವರ ಒಳಿಗಾಗಿ ಮುಡುಪಾಗಿದ್ದ ದೇವಿ ಸ್ವರೂಪಿ ಯೇಸು ಎಂದರು.

ಪರಸ್ಪರ ದ್ವೇಷಿಸುವುದಕ್ಕಿಂತ ಯೇಸುವಿನಂತೆ ಇತರರನ್ನು ಪ್ರೀತಿಸುವ ಕೆಲಸ ಮಾಡಬೇಕಾಗಿದೆ. ಕ್ರಿಸ್ತ ಜಯಂತಿ ಶಾಂತಿ ಯನ್ನು ಹಂಚುವ ಹಬ್ಬವಾಗಿದ್ದು, ಜಗತ್ತಿನೆಲ್ಲೆಡೆ ಸದಾ ಶಾಂತಿ ನೆಲೆಸುವಂತೆ ಪ್ರಾರ್ಥಿಸಬೇಕೆಂದರು.

ಸಾಹಸ ಕಿಡ್ಸ್ ಅಕಾಡೆ ಶಾಲೆ ಅಧ್ಯಕ್ಷರಾದ ಸುಭಾಷ್ ಬಡಿಗೇರ್ ಮಾತನಾಡಿ, ಎಲ್ಲ ಮಾನವರೂ ಒಂದೇ ಎಂಬ ಉದಾತ್ತ ಭಾವ ಉಂಟಾದಾಗ ಜಗತ್ತು ಸುಂದರವಾಗುತ್ತದೆ. ಆಗ ಪ್ರತಿ ಮಾನವ ನೂ ದೈವಸ್ವರೂಪಿಯಾಗುತ್ತಾನೆ ಎಂಬ ಈ ಮಾನವ ಪ್ರೇಮದ ಸಂದೇಶವನ್ನು ಈ ನಾಡಿಗೆ ತಿಳಿಸಿಕೊಟ್ಟವರು ಯೇಸು ಪ್ರಭು. ಅವರು ತತ್ವಸಿದ್ಧಾಂತಗಳು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜೀವನ ಸ್ವಾರ್ಥಕವಾಗುತ್ತದೆ ಎಂದರು.

ಈ ಭೂಮಿ ಋಣ ತೀರಿದ ಮೇಲೆ ಎಲ್ಲರೂ ಇಲ್ಲಿಂದ ಒಂದು ದಿನ ಹೊರಟು ಹೋಗಲೇಬೇಕು. ಇರೂವಷ್ಟು ದಿನ ನಿನ್ನ ನೆರೆಹೊರೆಯವರನ್ನು ಪ್ರೀತಿಸಿ, ದೇವರನ್ನು ಪೂರ್ಣ ಮನಸ್ಸಿನಿಂದ, ಆತ್ಮದಿಂದ, ಹಾಗೂ ಸತ್ಯದಿಂದ ಆರಾಧಿಸೋಣ ಎಂದು ತಿಳಿಸಿದರು.

ಯಾದಗಿರಿಯ ಕೇಂದ್ರ ಮೆಥೋಡಿಸ್ಟ್ ಚರ್ಚ್, ಗುರುಮಠಕಲ್ ನಲ್ಲಿ ಕ್ರಿಸ್‌ಮಸ್‌ ಅಂಗವಾಗಿ ಕೇಕ್ ಕಟ್ ಮಾಡಿ ಹಬ್ಬ ಆಚರಿಸಲಾಯಿತು.

ಕಾರ್ಯಕ್ರಮದ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರಾದ ಜನಸೇನಾ ರಾಜ್ಯದಕ್ಷರಾದ ಮೈಲಾರಪ್ಪ ಜಾಗೀರದರ್, ನ್ಯಾಯವಾದಿ ಮಾರ್ಥಾದಂಪ್ಪ ಮುಷ್ಟೂರ್, ಪರಾಮರೆಡ್ಡಿ ಕಂದಕೂರ್, ಭೀಮರವ್ ಅಬ್ಬಳ್ಳಿ ಇವರನ್ನು ಫೆಲೋಶಿಪ್ ಚರ್ಚ್ ವತಿಯಿಂದ ಸನ್ಮಾಸಲಾಯಿತು. ಈ‌ ಸಂದರ್ಭದಲ್ಲಿ ಡೇವಿಡ್, ಚನ್ನಪ್ಪ, ವಿಶ್ವನಾಥ್, ಪರಶುರಾಮ್ , ಸಚಿನ್ ಸೇರಿದಂತೆ ಕೈಸ್ತ ಸಮುದಾಯ ಜನರು ಇದ್ದರು.

ಸಡಗರ – ಸಂಭ್ರಮ, ವಿಶೇಷ ಪ್ರಾರ್ಥನೆ: ಕ್ರೈಸ್ತರು ಕುಟುಂಬ ಸಮೇತವಾಗಿ ಚರ್ಚ್‌ಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಧರ್ಮ ಗುರುಗಳ ಆಶೀರ್ವಚನ ಆಲಿಸಿದರು. ಯೇಸುವನ್ನು ಕೊಂಡಾಡುವ ದೇವಸ್ತುತಿ ಗೀತೆಗಳನ್ನು ಹಾಡಿ ಭಕ್ತಿ ಮೆರೆದರು. ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಸಂತಸ ಹಂಚಿಕೊಂಡರು.

ಹೊಸ ಬಟ್ಟೆ ಧರಿಸಿ ಕಂಗೊಳಿಸುತ್ತಿದ್ದ ಚಿಣ್ಣರು, ಗಮನ ಸೆಳೆದರು. ಸಾಂತಾಕ್ಲಾಸ್ ವೇಷಧಾರಿಗಳು ಉಡುಗೊರೆ ಮತ್ತು ಚಾಕಲೇಟ್ ವಿತರಿಸಿದರು. ಚರ್ಚ್ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ಗೋದಲಿ ಕಣ್ತುಂಬಿಕೊಂಡ ಜನರು, ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ಚರ್ಚ್ ಆವರಣದಲ್ಲಿ ಯೇಸು ಕ್ರಿಸ್ತನ ಜನನ ಸಾರುವ ಬಾಲ ಕ್ರಿಸ್ತನ ಗೋದಲಿಯನ್ನು ಯುವಕರು ನಿರ್ಮಿಸಿದ್ದು ಜನಾಕರ್ಷ ಣೆಯ ಕೇಂದ್ರವಾಗಿ ಬದಲಾಗಿತ್ತು. ಕೇಕ್‌ ಕತ್ತರಿಸಿ ಸಂಭ್ರಮಿಸಿದ ಕ್ರೈಸ್ತ ಸಮುದಾಯದವರು, ಪಟಾಕಿ ಸಿಡಿಸಿ ಕ್ರಿಸ್ತನ ಜನನ ವಾಗಿರುವುದನ್ನು ನಾಡಿಗೆ ಸಾರಿ ಹೇಳಿದರು.

ಎಲ್ಲ ಕಡೆ ಆಕರ್ಷಕ ಗೋದಲಿಗಳು ಗಮನ ಸೆಳೆದವು. ನಕ್ಷತ್ರ ಗಳು ರಾರಾಜಿಸಿದವು. ಕ್ರಿಸ್ತ ಜನನದ ಸನ್ನಿವೇಶಗಳನ್ನು ಅಲ್ಲಿ ಬಿಂಬಿಸಿದ ಬಗೆ ಗಮನ ಸೆಳೆಯುವಂತಿತ್ತು.

ಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿಯಿಂದಲೇ ಕ್ರೈಸ್ತರ ಮನೆಗಳಲ್ಲಿ ಮತ್ತು ಚರ್ಚ್‌ ಗಳಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿತ್ತು. ರಾತ್ರಿ ಚರ್ಚ್ ನಲ್ಲಿ ವಿಶೇಷ ಪ್ರಾರ್ಥನೆ, ದೇವಸ್ತು ತಿ ಗಾಯನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಚರ್ಚ್ ಗಳನ್ನು ವಿಶೇಷವಾಗಿ ವಿದ್ಯುತ್ ದೀಪಗಳಿಂ ದ ಅಲಂಕರಿಸಲಾಗಿತ್ತು.

ಬಳಿಕ ಪರಸ್ಪರ ಕ್ರಿಸ್‌ಮಸ್‌ ಶುಭಾಶಯ ಕೋರಲಾಯಿತು. ಕ್ರಿಸ್‌ಮಸ್‌ ಹಬ್ಬಕ್ಕಾಗಿ ವಿವಿಧ ಭಕ್ಷ್ಯ ಭೋಜನ ತಯಾರಿ ಮಾಡಲಾಗಿತ್ತು.

Spread the love

Leave a Reply

Your email address will not be published. Required fields are marked *

error: Content is protected !!