ಡಾ. ಅಂಬೇಡ್ಕರ್ 68ನೇ ಪರಿನಿರ್ವಾಣ ದಿನ | ಇಂಚಿಂಚಿಗೂ ನೋವು ಅನುಭವಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ |ಸಂವಿಧಾನ ರಚನೆಗೆ ಶಿಲ್ಪಿಗೆ ಪ್ರಕೃತಿ ಶಕ್ತಿ ಸಹಕಾರ
ಗುರುಮಠಕಲ್: ದೇಶದ ಪ್ರತಿಯೊಬ್ಬರಿಗೂ ಕೂಡ ಅಗೌರವ ಸಿಗದೇ ಸರಿಸಮಾನ ಹಕ್ಕು ಸಿಗಲು ಸಂವಿಧಾನ ರಚಿಸಿದರು. ಅವರ ಹಿಂದೆ ಪ್ರಕೃತಿ ಶಕ್ತಿ ಕೆಲಸ ಮಾಡಿದೆ ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ರಾಜ್ಯ ಉಪಾಧ್ಯಕ್ಷ ಕೆ.ಬಿ.ವಾಸು ಹೇಳಿದರು.
ಪಟ್ಟಣದ ಅತಿಥಿ ಗೃಹದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣ ದಿನದಲ್ಲಿ ಮಾತನಾಡಿದರು.
ದೇಶದ ಮೂಲೆ ಮೂಲೆಯಲ್ಲಿ ಬಾಬಾಸಾಹೇಬ ಅಂಬೇಡ್ಕರ್ ಅವರ ಮೂರ್ತಿ ಕಾಣುತ್ತವೆ. ಶೋಷಣೆ, ದೌರ್ಜನ್ಯ ತಡೆಯಲು ಹುಟ್ಟಿ ಬಂದ ಮಹಾಪುರುಷ ಡಾ. ಅಂಬೇಡ್ಕರ್ ಎಂದರು.
ಬಾಬಾ ಸಾಹೇಬ್ ಅಂಬೇಡ್ಕರ್ ಕನಸು ಈಡೇರಿಲ್ಲ. ತಾವು ಸಿಎಂ ಆಗಲು ಬಾಬಾಸಾಹೇಬ ನೀಡಿದ ಸಂವಿಧಾನದಿಂದಲೇ ಎಂದು ಸಿಎಂ, ಪಿಎಂ ಹೇಳುತ್ತಾರೆ ಎಂದರು.
ಎಲ್ಲರಿಗೂ ರಾಜಕೀಯ ಸರಿಸಮ ಪಾಲು ಸಿಗಬೇಕು, ಬಸವಣ್ಣರು ಅನುಭವ ಮಂಟಪದಲ್ಲಿ ಎಲ್ಲಾ ಶಿವಶರಣರನ್ನು ಸೇರಿದಂತೆ ಚರ್ಚಿಸಿ ಅಂಧಾಕಾರ ಹೋಗಲಾಡಿಸಲು ಶ್ರಮಿಸಿದರು.
ಅಟ್ರಾಸಿಟಿ ಕಾನೂನು ಅಂಬೇಡ್ಕರ್ ತಂದಿಲ್ಲ. 1989 ಕಾಂಗ್ರೆಸ್ ತಂದಿದೆ. ಬಾಬಾಸಾಹೇಬ ಅಂಬೇಡ್ಕರ್ ಅವರ ಹೆಸರು ಕೆಡಿಸುವ ಕಾರ್ಯ ಮಾಡಿದೆ ಎಂದರು.
ಜಾತಿ ವ್ಯವಸ್ಥೆಯಿಂದ ಬೇಸತ್ತು ಡಾ. ಅಂಬೇಡ್ಕರ್ ಅವರು 5 ಲಕ್ಷ ಜನರೊಂದಿಗೆ ಬೌದ್ಧ ಧರ್ಮ ಸ್ವೀಕರಿಸಿದರು ಎಂದು ತಿಳಿಸಿದರು. ಪ್ರಬುದ್ಧ ಭಾರತದ ನಿರ್ಮಾಣ ಕೊನೆಯ ಆಸೆ ಎಂದು ಡಾ. ಅಂಬೇಡ್ಕರ್ ಹೇಳಿದ್ದಾರೆ. ಹಾಗಾದರೆ ಬಲಿಷ್ಠ ಭಾರತ ನಿರ್ಮಾಣ ಸಾಧ್ಯ. ಅಬೇಡ್ಕರ್ ಅವರ ಆಶಯದಂತೆ ನಡೆದುಕೊಳ್ಳಲು ಕರೆ ನೀಡಿದರು.
ಸಮಾಜ ಒಡೆಯಲು ರಾಜಕೀಯ ಪಕ್ಷಗಳು ಷಡ್ಯಂತ್ರ ರೂಪಿಸುತ್ತಿ ದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಒಳಮೀಸಲಾತಿ ನೀಡಲು ಒತ್ತಾಯಿಸಿ 30 ವರ್ಷದಿಂದ ಹೋರಾಟ, ನ್ಯಾಯ ಒದಗಿಸುವುದು ಸರ್ಕಾರದ ಕೆಲಸ.
ಎಲ್ಲಾ ಸಣ್ಣ ಸಣ್ಣ ಜಾತಿ ಜನರನ್ನು ಸಹೋದರತ್ವದಿಂದ ಒಗ್ಗೂಡಿಸಿ ಸಮ ಸಮಾಜ ನಿರ್ಮಾಣ ಮಾಡಲು ಶ್ರಮಿಸಬೇಕು ಎಂದರು. ಆಳುವ ವ್ಯಕ್ತಿ ನಾನು ಆ ಜಾತಿ, ಈ ಜಾತಿ ಎಂದರೆ ಬಾಬಾಸಾಹೇಬ ಅಂಬೇಡ್ಕರ್ ಆಶಯ ಈಡೇರಲು ಹೇಗೆ ಸಾಧ್ಯ. ಒಳ್ಳೆಯ ಗುಣಗಳನ್ನು ಬೆಳೆಸಿಕೊಂಡು ಸಹೋದರತ್ವ ಭಾವನೆ ಬೆಳೆಸಿಕೊಳ್ಳಬೇಕು.
ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದಲ್ಲಿ ಹೋದರೆ ಸಾಮಾಜಿಕ ನ್ಯಾಯ ಸಿಗುವ ಭರವಸೆ ಮೂಡುವಂತಿರಬೇಕು ಎಂದರು.
ಸರ್ಕಾರಗಳು ಕಾನೂನು ಸಡಿಲು ಮಾಡಿರುವುದು ಜನರಿಗೆ ನ್ಯಾಯ ಸಿಗುತ್ತಿಲ್ಲ ಎಂದು ಅಪಘಾತದಲ್ಲಿ ಮೃತಪಟ್ಟ ಇಟ್ಕಾಲ್ ಯುವತಿ ಘಟನೆ ವಿವರಿಸಿ, ವಾಹನಕ್ಕೆ ಇನ್ಸೂರೆನ್ಸ್ ಇದ್ರೆ ಪರಿಹಾರ ಸಿಗುತ್ತಿತ್ತು. ಇದಕ್ಕೆ ಸರ್ಕಾರ ಕಾರಣ ಎಂದರು.
ಕಾಂಗ್ರೆಸ್ ನಿಂದ ಬಾ. ಬಾಬಾ ಸಾಹೇಬ್ ಅವರು ಇಂಚಿಂಚಿಗೂ ತೊಂದರೆ ಅನುಭವಿಸಿದ್ದಾರೆ. ಜೀವನ ತ್ಯಾಗ ಮಾಡಿ ತಮ್ಮ ಮಗ ಸತ್ತರೂ ದೇಶದ ಭವಿಷ್ಯಕ್ಕಾಗಿ ಚಿಂತಿಸಿದರು ಎಂದು ಮುಖಂಡ ಪ್ರಕಾಶ ಹೇಳಿದರು.
ಮಹಾದೇವ ಚಪೆಟ್ಲಾ ಮಾತನಾಡಿ, ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಕನಸು ಈಡೇರಿಲ್ಲ. ಸಂವಿಧಾನ ಯಥಾವತ್ತಾಗಿ ಜಾರಿಯಾಗಬೇಕು ಎಂದರು. ಬಾಬಾಸಾಹೇಬ ಅವರ ಕನಸು ನನಸಾಗಿಸಲು ಅವರ ವಿಚಾರ ಹಳ್ಳಿ ಹಳ್ಳಿಗೆ ತಲುಪಿಸುವ ಕಾರ್ಯಕ್ಕೆ ಕರೆ ನೀಡಿದರು.
ಜಿಲ್ಲಾ ಮುಖಂಡ ಭೀಮು ಗಿರಿ ಗಿರಿ ಮಾತನಾಡಿ, ಎಲ್ಲರಿಗೂ ಸಮಾನ ಹಕ್ಕು ಸಿಗಲು ಸಂವಿಧಾನ ಬರೆದಿದ್ದಾರೆ. ಬಡವರು ಬಡವರಾಗಿಯೇ ಉಳಿದಿದ್ದಾರೆ ಶ್ರೀಮಂತರಾಗಿದ್ದಾರೆ. ರಾಜಕೀಯವಾಗಿ ಸಮಾನತೆ ಸಿಕ್ಕಿಲ್ಲ.
ಅಶೋಕ ಬಟನೆತ್ತಿ, ಧನಂಜಯ, ಚಂದ್ರಕಾಂತ, ನವೀನ್, ದುಗ್ಗಪ್ಪ, ಕರಿಯಪ್ಪ ಯದ್ಲಾಪುರ ಇತರರು ಇದ್ದರು.