ಗಾಜರಕೋಟನಲ್ಲಿ 3 ಅಂಗಡಿ ಕಳುವು : ಪೊಲೀಸ್ ಠಾಣೆಗೆ ಗ್ರಾಮಸ್ಥರ ದೂರು

ಯಾದಗಿರಿ: ಜಿಲ್ಲೆಯ ಗುರುಮಠಕಲ್ ಪೊಲೀಸ ಠಾಣೆ ವ್ಯಾಪ್ತಿಯ ಗಾಜರಕೋಟ ಗ್ರಾಮದಲ್ಲಿ ಮಧ್ಯರಾತ್ರಿ 3 ವಾಣಿಜ್ಯ ಮಳಿಗೆ ಕಳುವಾಗಿದ್ದು ಸಣ್ಣ ಪುಟ್ಟ ವ್ಯಾಪಾರ ಮಾಡುವವರಲ್ಲಿ ಆತಂಕ ಮೂಡಿಸಿದೆ.

ಗ್ರಾಮದ ರಾಚಪ್ಪಯ್ಯ ಕಡ್ಲಪ್ಪಯ್ಯ ದೇವಸ್ಥಾನದ ಆವರಣದಲ್ಲಿರುವ ವೀರೇಶ ಅಡಕಿ ಅವರಿಗೆ ಸೇರಿದ ಮೊಬೈಲ್ ರಿಪೇರಿ ಅಂಗಡಿ ಕಳುವಾಗಿದ್ದು, ರಿಪೇರಿಗೆ ಬಂದಿದ್ದ 4 ಮೊಬೈಲ್ ಎಗರಿಸಿ ಕೈಚಳಕ ತೋರಿಸಿದ್ದಾರೆ.

ಇನ್ನು ಬಸವರಾಜ ಮಾಲಿ ಬೀರಾದಾರ್ ಅವರ ಟೀ ಅಂಗಡಿಯ ಟೀನ್ ಮುರಿದು  ಅಂದಾಜು 4 ಸಾವಿರ ಚಿಲ್ಲರೆ ಹಣವನ್ನು ಕದಿಯಲಾಗಿದೆ. ಈ ಹಿಂದೆಯೂ ಹಲವು ಬಾರಿ ಇಂತಹ ಘಟನೆಗಳು ನಡೆದಿದ್ದು ವ್ಯಾಪಾರಿಗಳ ನಿದ್ದೆಗೆಡಿಸಿದೆ.

3 ಅಂಗಡಿಗಳಿಂದ ಕಳ್ಳರು ಅಂದಾಜು 20 ಸಾವಿರ ನಗದು ಮತ್ತು ಸಾಮಾನುಗಳನ್ನು ಕಳುವು ಮಾಡಿದ್ದಾರೆಂದು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸೆಪ್ಟೆಂಬರ್ ನಲ್ಲಿಯು ನಡೆದಿತ್ತು ಕಳುವು: ಈ ಹಿಂದೆ ಸೆಪ್ಟೆಂಬರ್ ನಲ್ಲಿ ಹೋಟಲ್ ಅಂಗಡಿಯೊಂದು ಕಳುವಾಗಿತ್ತು, ಇದರ ಮಾಲೀಕ ರಾಜು ಎಂಬುವರು ಅಂಗಡಿಯಲ್ಲಿದ್ದ 75 ಸಾವಿರ ನಗದು ಕಳುವಾಗಿತ್ತು ಎನ್ನಲಾಗಿದೆ.

ಗ್ರಾಮದಲ್ಲಿ ಈ ಹಿಂದೆಯೂ 2 ಬಾರಿ ಕಳುವಾಗಿದ್ದು, ಯಾವುದೇ ಕ್ರಮವಹಿಸಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳ್ಳತನವಾಗಿರುವ ಕುರಿತು ಪ್ರಕರಣ ದಾಖಲಿಸಿಕೊಂಡು ಕಳ್ಳರನ್ನು ಪತ್ತೆ ಹಚ್ಚಿ ಕಳ್ಳತನವಾಗದಂತೆ ಕ್ರಮವಹಿಸಲು ಶಿವರಾಯ ಮಠಪತಿ, ನಾಗೇಂದ್ರಪ್ಪ, ಆಶಪ್ಪ ಕಲಾಲ್, ಸುರೇಶ, ಕಾಂತರೆಡ್ಡಿ, ಬಸವರಾಜ ಅರುಣಿ, ಅನೀಲ ಕುಮಾರ್, ಗೌರಿಶಂಕರ ಅರುಣಿ, ಮೋನಪ್ಪ, ಜಗದೀಶ ಸಜ್ಜನ್, ನಾಗರೆಡ್ಡಿ, ಉಸ್ಮಾನ್, ಶಿವರುದ್ರ, ಉಮರ್ ಮಷಾಕ್, ಆನಂದ ಹಡಪದ, ಶ್ರೀಶೈಲ, ನರಸಪ್ಪ, ಲಕ್ಷ್ಮಣ, ರವಿ, ನಾಗರಾಜ ಪೂಜಾರಿ, ರಾಜು ಕರದಳ್ಳಿ, ಮಂಜುನಾಥ, ಕಾಶಪ್ಪ ಇತರರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಗ್ರಾಮದಲ್ಲಿ 3 ಅಂಗಡಿ ಕಳುವಾಗಿದೆ. ಮಧ್ಯರಾತ್ರಿ ಅಪರಿಚಿತ ವ್ಯಕ್ತಿಗಳು ಕೃತ್ಯ ನಡೆಸಿದ್ದಾರೆ. ಇದರಿಂದಾಗಿ ಸಣ್ಣ ವ್ಯಾಪಾರ ಮಾಡುವವರು ಭಯದಲ್ಲಿ ಇದ್ದಾರೆ. ಈ ದುಷ್ಕೃತ್ಯ ದ ಬಗ್ಗೆ ಪೊಲೀಸರು ಗಂಭೀರವಾಗಿ ಪರಿಗಣಿಸಿ ಕಳ್ಳರನ್ನು ಪತ್ತೆ ಹಚ್ಚಿ ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳಬೇಕು – ಪ್ರಭು ಹೊಟ್ಟಿ, ಗ್ರಾಮದ ಯುವ ಮುಖಂಡ.

Spread the love

Leave a Reply

Your email address will not be published. Required fields are marked *

error: Content is protected !!