ಹೆಲ್ಮೆಟ್ ಕಡ್ಡಾಯ : ಪೊಲೀಸರಿಂದ ಬೈಕ್ ರ್ಯಾಲಿ ಜಾಗೃತಿ…
ಗುರುಮಠಕಲ್: ಜಿಲ್ಲೆಯಲ್ಲಿ ಡಿಸೆಂಬರ್ 1 ರಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿದ್ದು ಗುರುಮಠಕಲ್ ಪೊಲೀಸರು ಪಿಐ ದೇವಿಂದ್ರಪ್ಪ ಧೂಳಖೇಡ ಮಾರ್ಗದರ್ಶನದಲ್ಲಿ ಹೆಲ್ಮೆಟ್ ಧರಿಸುವ ಮೂಲಕ ಬೈಕ್ ರಾಲಿ ನಡೆಸಿ ಜಾಗೃತಿ ಮೂಡಿಸಿದರು.
ಪಿಎಸ್ಐ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಪಟ್ಟಣದ ಬಸ್ ನಿಲ್ದಾಣ ವೃತ್ತದಿಂದ ಮುಖ್ಯಬೀದಿಗಳ ಮೂಲಕ ಬೈಕ್ ರಾಲಿ ನಡೆಸಿದರು.
ಹೆಲ್ಮೆಟ್ ಧರಿಸಿ ಜೀವ ರಕ್ಷಿಸಿ, 18 ವರ್ಷ ಪೂರೈಸದ ಮಕ್ಕಳ ಕೈಗೆ ವಾಹನ ಚಲಾಯಿಸಲು ನೀಡದಿರಿ, ಚಾಲನಾ ಪರವಾನಿಗೆಯನ್ನು ಕಡ್ಡಾಯವಾಗಿ ಹೊಂದಲು ಆಡಿಯೋ ಮೂಲಕ ಜಾಗೃತಿ ಘೋಷಣೆಗಳನ್ನು ಮೊಳಗಿಸಿದರು.
ಪಟ್ಟಣದಲ್ಲೇ ಜನರಿಗೆ ತೊಂದರೆ ಬೇಡ: ಹೆಲ್ಮೆಟ್ ಕಡ್ಡಾಯದ ನೆಪದಲ್ಲಿ ಪಟ್ಟಣದಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡಬಾರದು ಎನ್ನುವ ಒತ್ತಾಯ ಕೇಳಿ ಬಂದಿದೆ. ಪಟ್ಟಣದ ಒಳಗೆ ವಿನಾಯಿತಿ ನೀಡಿ, ಹೊರಭಾಗದಲ್ಲಿ ಸಂಚರಿಸುವ ಚಾಲಕರಿಗೆ ಪರಿಶೀಲಿಸಿ ಫೈನ್ ಹಾಕಲಿ ಎನ್ನುವುದು ಜನರ ಒತ್ತಾಯ.