ಬೇಡಿಕೆ ಈಡೇರಿಕೆಗೆ ಗಡುವು ನೀಡಿ ಕೊನೆಗೂ ಪ್ರತಿಭಟನೆ ಹಿಂಪಡೆದ ದಂಡೋರ ಸಮಿತಿ…
ಗುರುಮಠಕಲ್: ತಾಲೂಕಿನ ಬಳಿಚಕ್ರ ಹೋಬಳಿಯ ಗುಡ್ಲಗುಂಟ ಗ್ರಾಮದ ಸರ್ವೆ ನಂಬರ್ 105/2 ರಲ್ಲಿ 0.30 ಗುಂಟೆ ಜಮೀನು ಕಾನೂನು ಬಾಹಿರವಾಗಿ ಇತರರ ಹೆಸರಿಗೆ ವರ್ಗಾವಣೆ ಸಂಬಂಧ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ನಡೆದ ಪ್ರತಿಭಟನೆಯನ್ನು ಕೊನೆಗೂ ಮಾದಿಗ ದಂಡೋರ ಹಿಂಪಡೆದಿದೆ.
ಪ್ರತಿಭಟನಾಕಾರರು ಮತ್ತು ತಹಸೀಲ್ದಾರರ ನಡುವೆ ನಡೆದ ಮಾತಿನ ಸಮರ ಕೊನೆಗೂ ಸಂಜೆ ಸಮಾಧಾನಗೊಂಡಿತು.
ಕಾನೂನು ಬಾಹಿರವಾಗಿ ಆಸ್ತಿ ವರ್ಗಾವಣೆ ಮಾಡಿದ ವಿ.ಎ, ಆರ್ ಐ, ಶಿರಸ್ತೇದಾರ್ ಹಾಗೂ ತಹಸೀಲ್ದಾರ್ ವಿರುದ್ಧ ಪ್ರಕರಣ ದಾಖಲು ಮಾಡುವ ಬೇಡಿಕೆ ಮುಂದಿರಿಸಿ ಪ್ರತಿಭಟನೆ ವಾಪಸ್ ಪಡೆಯಲಾಗಿದೆ ಎಂದು ದಂಡೋರ ಸಮಿತಿ ರಾಜ್ಯಾಧ್ಯಕ್ಷ ಬಿ. ನರಸಪ್ಪ ತಿಳಿಸಿದ್ದಾರೆ.
ಈಗಾಗಲೇ ಅಧಿಕಾರಿಗಳು ಜಮೀನು ವರ್ಗಾವಣೆ ರದ್ದು ಮಾಡಿದ್ದಾರೆ, ಜಮೀನು ಮೇಲಿದ್ದ ಲೋನ್ ಮೊತ್ತವನ್ನು ಪಾವತಿ ಮಾಡಿದ್ದಾರೆ ಎಂದರು.
ಘಟನೆಗೆ ಸಂಬಂಧಿಸಿದಂತೆ 3 ದಿನಗಳೊಳಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ಡಿ.1ರಂದು ಗುರುಮಠಕಲ್ ಬಂದ್ ಗೆ ಕರೆ ನೀಡಿ ಹೋರಾಟ ಮಾಡಲಾಗುವುದು ಎಂದು ಘೋಷಿಸಿದರು.
ಇದೇ ವೇಳೆ ತಹಸೀಲ್ದಾರರ ವಿರುದ್ಧ ಪೊಲೀಸ ಇನ್ಸ್ಪೆಕ್ಟರ್ ಅವರಿಗೆ ದೂರು ಸಲ್ಲಿಸಿದರು.
ಈ ವೇಳೆ ಜಿಲ್ಲಾಧ್ಯಕ್ಷರಾದ ಕಾಶಪ್ಪ ಹೆಗ್ಗಣಗೇರಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ನಡುಮನೆ ಮುಂಡರಗಿ, ಕಾರ್ಯಾಧ್ಯಕ್ಷ ದೇವು ಲಿಂಗೇರಿ,ಉಪಾಧ್ಯಕ್ಷ ಮಲ್ಲು ಬೆಳೆಗೆರ, ಆಶನ್ನ ಬುದ್ಧ, ವೆಂಕಟೇಶ, ಗುರುಮಠಕಲ್ ತಾಲೂಕ ಅಧ್ಯಕ್ಷರು ರಾಜು ಮೇತ್ರೆ ಕಡೇಚೂರು, ರವಿ ಬುರನೋಳ, ತಿಪ್ಪಣ್ಣ ಗೊಂದೇನೂರ್, ಸುರಪುರನ ಬಸವರಾಜ, ವಡಿಗೇರ ತಾಲೂಕ ಅಧ್ಯಕ್ಷರು ಶರಪ್ಪ, ವಿದ್ಯಾರ್ಥಿ ಘಟಕದ ತಾಲೂಕ ಅಧ್ಯಕ್ಷರು ವಿಲ್ಸನ್ ಹಾಲಿಗೆರಾ, ಶರಪ್ಪ ಗೊಂದೇನೂರ್,ಮರೆಪ್ಪ ವಡಿಗೇರಾ,ರಾಕೇಶ್ ಪುಟಿಗಿ,ಲಿಂಗಪ್ಪ ಬಿಲ್ಹಾರ, ದುರುಗಪ್ಪ, ಮರಪ್ಪ ವಡಿಗೇರ, ಮಲ್ಲು ಕುಮುನೋರ ಅಶೋಕ್ ಹಲಗೇರಾ, ಮಲ್ಲಪ್ಪ ಕುಮುನೋರ, ಪ್ರಭು ಹಾಲಗೇರಾ ಇತರರು ಪಾಲ್ಗೊಂಡಿದ್ದರು.