ರಾಜ್ಯ ಉಪಾಧ್ಯಕ್ಷ ಗಣೇಶ ದುಪ್ಪಲ್ಲಿ ನೇತೃತ್ವದಲ್ಲಿ ಆದೇಶ ಪತ್ರ ವಿತರಣೆ |ಗುರುಮಠಕಲ್ ಹೆಚ್ಆರ್ ಎಂಎಸ್ ಪದಾಧಿಕಾರಿಗಳ ಆಯ್ಕೆ

ಗುರುಮಠಕಲ್:  ಸರ್ಕಾರ ಒಳ ಮೀಸಲಾತಿ ಜಾರಿಗೆ ನೀಡಿರುವ ಅವಧಿಯಲ್ಲಿ ಜಾರಿ ಮಾಡದಿದ್ದರೆ ಹೋರಾಟಕ್ಕೆ ಸಿದ್ಧ ಎಂದು ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಕಾಶಪ್ಪ ಹೆಗ್ಗಣಗ್ಗೇರಾ ಹೇಳಿದರು.

ಪಟ್ಟಣದ ಅತಿಥಿ ಗೃಹದಲ್ಲಿ ಗುರುಮಠಕಲ್ ತಾಲೂಕು ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯಾಧ್ಯಕ್ಷ, ಉಪಾಧ್ಯಕ್ಷರು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ ಎಂದರು.

ಒಗ್ಗಟ್ಟಾಗಿ ಶಕ್ತಿ ನಮ್ಮಲ್ಲಿ ಬರಬೇಕು. ಗ್ರಾಮೀಣ ಭಾಗದಲ್ಲಿ ಸಂಘಟನೆ ಅವಶ್ಯವಿದೆ. ಎಲ್ಲರೊಂದಿಗೆ ಸಹೋದರತ್ವ ಭಾವನೆಯಿಂದ ಇದ್ದು ನ್ಯಾಯಕ್ಕಾಗಿ ಹೋರಾಟ ನಡೆಸಬೇಕು. ತಪ್ಪು ಮಾಡಿದವರ ವಿರುದ್ಧ ಹೋರಾಟ ಇರಬೇಕು ಎಂದು ಸಲಹೆ ನೀಡಿದರು.

ರಾಜಕೀಯವಾಗಿ ಬೆಳೆಸಲು ನಮ್ಮವರಿಗೆ ಬೆಂಬಲ ನೀಡಬೇಕು. ಸ್ವಾಭಿಮಾನದಿಂದ ನಾಯಕರನ್ನು ಬೆಳೆಸಲು ಹೇಳಿದರು.

ಭೀಮಶಪ್ಪ ಗೂಡ್ಸೆ ಮಾತನಾಡಿ, ಮೀಸಲಾತಿ ವಿಚಾರವಾಗಿ ಹಳ್ಳಿಯಿಂದ ದಿಲ್ಲಿಗೆ ತೆರಳಿದ ನಾಯಕರು ಮಾತಾಡುತ್ತಿಲ್ಲ. ಅವರು ಹೇಳಿದರೆ ಆಗಿ ಬಿಡುತ್ತದೆ ಎಂದರು. ಎಬಿಸಿಡಿ ವರ್ಗೀಕರಣದಿಂದ ಎಲ್ಲರಿಗೂ ಲಾಭ ಸಿಗಲಿದೆ. ದುರ್ಬಲರಿಗೆ ಮೀಸಲಾತಿ ಲಾಭ ಸಿಗಬೇಕು ಎಂದರು.

ಕೃಷ್ಣಾ ಚಪೆಟ್ಲಾ ಮಾತನಾಡಿ, ಸತತವಾಗಿ ಮಂದಕೃಷ್ಣ ಮಾದಿಗ ಅವರು ಹೋರಾಟ ಮಾಡುತ್ತಲೇ ಬಂದಿದ್ದು, ಸುಪ್ರೀಂಕೋರ್ಟ್ ಆದೇಶ ಮೀಸಲಾತಿ ಜಾರಿಗೆ ಆದೇಶ ರಾಜ್ಯಗಳಿಗೆ ನೀಡಿದೆ. ಸರ್ಕಾರ ಏನು ಮಾಡಬೇಕು ಎನ್ನುವ ಗೊಂದಲದಲ್ಲಿದೆ.  ಸಿದ್ದರಾಮಯ್ಯ ಸರ್ಕಾರ ಕೇಂದ್ರಕ್ಕೆ ಕಳಿಸಿದೆ ಎಂದರು.

ಒಂದೇ ಸಂಘಟನೆ ಕಟ್ಟಿ ಹೋರಾಟ ಅಗತ್ಯ. ಸಮಾಜದ ವಿಷಯದಲ್ಲಿ ಎಲ್ಲಾ ಸಹಕಾರ. ಒಳ್ಳೆಯ ವ್ಯಕ್ತಿಗೆ ಚುಕ್ಕಾಣಿ ನೀಡಿ ಎಂದರು.

ಮಾಣಿಕ ಮುಕಡಿ, ಸಮಾಜಕ್ಕಾಗಿ ಎಲ್ಲರೂ ಒಗ್ಗೂಡಿ ಕಾರ್ಯ ಮಾಡೋಣ ಎಂದರು. ಸಮಾಜದವರ ಕೆಲಸ ನಿಷ್ಪಕ್ಷಪಾತವಾಗಿ ಮಾಡಲು ಮುಂದಾಗಬೇಕು ಎಂದರು.

ರಾಜು ಮೇತ್ರೆ ಕಡೇಚೂರ, ಒಳಮೀಸಲಾತಿಗಾಗಿ ಎಲ್ಲರನ್ನು ಜಾಗೃತ ಮಾಡಲು ಶ್ರಮಿಸಬೇಕು. ಈ ಸಮಯ ಮತ್ತೆ ಬರಲ್ಲ. ನಿಸ್ವಾರ್ಥವಾಗಿ ಎಲ್ಲರೂ ಕೈಜೋಡಿಸಬೇಕು. ಎಲ್ಲರೂ ಗಟ್ಟಿಯಾಗಿ ಹಕ್ಕಿಗಾಗಿ ಧ್ವನಿ ಎತ್ತಬೇಕು.

ಒಂದು ರೊಟ್ಟಿಯನ್ನು ಸಮಾನವಾಗಿ ಹಂಚಿಕೊಂಡು ತಿನ್ನಬೇಕು. ಆ ಭಾವನೆ ಬರಬೇಕು ಎಂದರು. ಬ್ರಿಟಿಷರಂತೆ ಒಡೆದು ಆಳುವ ನೀತಿ ಅನುಸರಿಸಲಾಗುತ್ತಿದೆ. ಮಾಜಿ ಸಚಿವ ಆಂಜನೇಯ ಅವರನ್ನು ಮೂಲೆಗುಂಪು ಮಾಡಲಾಗಿದೆ  ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಣಗಳ ಮೂಲಕ ಒಡಕು, ರಾಜಕೀಯದಿಂದಲೇ ಬಣಗಳ ಸೃಷ್ಟಿ, ಮೀಸಲಾತಿ ವಿಚಾರವಾಗಿ ಎಲ್ಲರೂ ಓಟ್ಟಾಗೋಣ ಎಂದು ಕರೆ ನೀಡಿದರು.

ರಾಜ್ಯ ಉಪಾಧ್ಯಕ್ಷ ಗಣೇಶ ದುಪ್ಪಲ್ಲಿ, ಶರಣಪ್ಪ, ವೆಂಕಟೇಶ ಪುಟಪಾಕ, ರವಿ ಬುರನೋಳ ಎಂಟಿ ಪಲ್ಲಿ, ಮಲ್ಲು ಬೆಳಗೇರಾ, ಶರಣು ಅಮ್ಮಪಲ್ಲಿ, ನರಸಪ್ಪ ಇಮ್ಲಾಪೂರ, ಮಧು ಮೇತ್ರೆ ಸೇರಿದಂತೆ ಹಲವರು ಇದ್ದರು.

ನೂತನ ಪದಾಧಿಕಾರಿಗಳು: ಗೌರವ ಅಧ್ಯಕ್ಷ ವೆಂಕಟೇಶ ಪುಟಪಾಕ್, ಅಧ್ಯಕ್ಷ ರವಿ ಎಮ್.ಟಿ.ಪಲ್ಲಿ, ಉಪಾಧ್ಯಕ್ಷ ಶರಣಪ್ಪ ಅಮ್ಮಪಲ್ಲಿ, ಪ್ರ.ಕಾರ್ಯದರ್ಶಿ ಮಹಾದೇವ ಗಾಜರಕೋಟ, ಕಾರ್ಯದರ್ಶಿ ನಿಲೀಶ್ ನಜರಾಪೂರ, ಸಹ ಕಾರ್ಯದರ್ಶಿ ನಾಗೇಶ್ ಚಂಡ್ರಿಕಿ, ಖಾಂಜಂಚಿ ನರಸಪ್ಪ ಹಿಮ್ಲಾಪೂರ, ನಗರ ಅಧ್ಯಕ್ಷರು ಶ್ರೀನಿವಾಸ ಕಿಂದಿಂಟಿ, ನಗರ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಸೈಧಪೋಳ್, ಕಾನೂನು ಸಲಹೆಗಾರ ಬುಗ್ಗಪ್ಪ ಕಾಕಲವಾರ, ಪ್ರಚಾರ ಸಮೀತಿಯ ಅಧ್ಯಕ್ಷ ಕಿಷ್ಣಪ್ಪ ಸೈಧಪೋಳ್, ನಗರ ಕಾರ್ಯದರ್ಶಿ ಅನಿಲ್ ಬಸ್ಸಪ್ಪೋಳ್ ಸಹಾಯಕ ಕಾರ್ಯದರ್ಶಿ ಭೀಮಶಪ್ಪ ಮಿನಿಂಟಿ ಅವರನ್ನು ಆಯ್ಕೆ ಮಾಡಲಾಯಿತು.

Spread the love

Leave a Reply

Your email address will not be published. Required fields are marked *

error: Content is protected !!