ಗುರುಮಠಕಲ್: ತಾಲೂಕಿನ ಪಸಪುಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 15 ವರ್ಷಗಳಿಂದ ಸೇವೆ ಸಲ್ಲಿಸಿ ಧಾರವಾಡ ತಾಲೂಕಿಗೆ ವರ್ಗಾವಣೆಗೊಂಡ ಚಂದ್ರಪ್ಪ.ತಿ ಧಾರವಾಡ ಶಿಕ್ಷಕರಿಗೆ ಊರಿನ ಹಿರಿಯರು ಮತ್ತು ಹಳೆ ವಿದ್ಯಾರ್ಥಿಗಳು ಬೀಳ್ಕೊಟ್ಟರು.
ಬಾಜ- ಭಜಂತ್ರಿಗಳೊಂದಿಗೆ ಶಿಕ್ಷಕ ದಂಪತಿಗಳಿಗೆ ಮೆರವಣಿಗೆ ಮಾಡಿ ನಂತರ ಜರುಗಿದ ಸಮಾರಂಭದಲ್ಲಿ ಶಾಲು ಹೊದಿಸಿ ಕಾಣಿಕೆ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ರೇವಣಗೌಡ ಪೋಲಿಸ್ ಪಾಟೀಲ , ವಿದ್ಯಾಧಾರ ಗರಡಿ, ಹುಸೇನಪ್ಪ ಮಲ್ಲೇಪಲ್ಲಿ, ಭೀಮರಾಯ ಮಲೇಪಲ್ಲಿ ,ಸಾಬಣ್ಣ,ಶಾಂತಗೌಡ, ಮಹಾದೇವಪ್ಪ, ಭೀಮರಾಯ ಕೋಟೆ, ಭೀಮರಾಯ ಸಾವೂರು, ಮೋನಪ್ಪ ಬಡಿಗೇರ , ರಮೇಶ, ಪಾಂಡು ಸಾವೂರ, ಮಲ್ಲೇಶ ಮಲ್ಲೇಪಲ್ಲಿ, ಶರಣಪ್ಪ ಬೋಯಿನ, ಹಳೇ ವಿದ್ಯಾರ್ಥಿಗಳಾದ ಅಶೋಕ, ಸುರೇಶ, ಈಶಪ್ಪ, ಬಸವರಾಜ ,ಅಶೋಕ ಬಸವರಾಜ, ಹುಸೇನಿ, ಶರಣಪ್ಪ , ಬನ್ನಪ್ಪ , ಕರಬಸಪ್ಪ, ಮಂಜುಳ ,ಕಾವೇರಿ, ಹಾಗೂ ಗ್ರಾ.ಪಂ ಸದಸ್ಯರಾದ ಮರಿಲಿಂಗಪ್ಪ ,ರವಿ, ಸಾಬಣ್ಣ , SDMC ಅಧ್ಯಕ್ಷ ಅನಂತಯ್ಯ
ಉಪಾಧ್ಯಕ್ಷ ಭೀಮರಾಯ ಆಶನಾಳ, ಮುಖ್ಯ ಗುರು ಮಾರುತಿ, ರಾಜಪ್ಪ, ಶಾಂತಮ್ಮ, ನೀಲಾವತಿ, ಅನೀತಾ , ಶರಣಗೌಡ ಪೋಲಿಸ್ ಪಾಟೀಲ್, ಬಿಆರ್ ಪಿ ಪ್ರಭು, ಸಿಆರ್ ಪಿ ಬಸವರಾಜೇಶ್ವರಿ, ವಿಶ್ವನಾಥ, ವೆಂಕಟೇಶ ಶೆಟ್ಟಿ , ಕ್ರಿಷ್ಣ ,ಈಶಪ್ಪ, ವೆಂಕಟೇಶ, ಬಂಡೆಪ್ಪ, ಜಗದೀಶ, ಮಹಾಲಿಂಗ ಹಾಜರಿದ್ದರು.
ಶಿವ ಪ್ರಸಾದ ನಿರೂಪಿಸಿದರು. ಶರಣುಗೌಡ ಪೋಲಿಸ್ ಪಾಟೀಲ್ ಬಿಡುಗಡೆ ಹೊಂದಿದ ಶಿಕ್ಷಕರ ಕುರಿತು ಮಾತನಾಡಿ, ಚಂದ್ರಪ್ಪ ಧಾರವಾಡ ಶಿಕ್ಷಕರ ಕೈಯಲ್ಲಿ ಮಕ್ಕಳು ಓದಿ ಬೆಳೆದು ಉತ್ತಮ ನಾಗರಿಕರಾಗಿದ್ದಾರೆ ಎಂದು ಹೇಳಿದರು.