ಗುರುಮಠಕಲ್ ಪಟ್ಟಣದ ಕಲ್ಯಾಣ ಕರ್ನಾಟಕ ಅಭಿವೃದ್ಧಿ ವೇದಿಕೆ ಕಾರ್ಯಾಲಯದಲ್ಲಿ ನಡೆದ ಸಭೆ | ಕರ್ನಾಟಕ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘದ ರಾಜ್ಯ ಅಧ್ಯಕ್ಷ ಕುರಬೂರು ಶಾಂತಕುಮಾರ ಹೇಳಿಕೆ
ಗುರುಮಠಕಲ್: ನಾಡಿನ ಯಾವುದೇ ರೈತರು ಬೆಳೆದ ಎಲ್ಲಾ ಬೆಳೆಗಳಿಗೆ ಕಾಲಕಾಲಕ್ಕೆ ಬೆಂಬಲ ಬೆಲೆ ನೀಡುವ ಮೂಲಕ ಈ ದೇಶದ ರೈತರ ಹಿತ ಕಾಪಾಡುವಂತೆ ಕರ್ನಾಟಕ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘದ ರಾಜ್ಯ ಅಧ್ಯಕ್ಷ ಕುರಬೂರು ಶಾಂತಕುಮಾರ ಒತ್ತಾಯಿಸಿದರು.
ಪಟ್ಟಣದ ಕಲ್ಯಾಣ ಕರ್ನಾಟಕ ಅಭಿವೃದ್ಧಿ ವೇದಿಕೆ ಕಾರ್ಯಾಲ ಯದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ದೇಶದ ರೈತರ ಸಲುವಾಗಿ ದೆಹಲಿ ಗಡಿಯಲ್ಲಿ ಆರಂಭಗೊಂಡ ಸತ್ಯಾಗ್ರಹಿಗಳ ಬೇಡಿಕೆ ಈರೇಡಿಸುವಂತೆ ಒತ್ತಾಯಿಸಿದರು.
ಕಲ್ಯಾಣ ಕರ್ನಾಟಕ ಭಾಗದ ರೈತರ ಪ್ರಮುಖ ಬೆಳೆಗಳಾದ ತೊಗರಿ, ಜೋಳ, ಹತ್ತಿ, ಹೆಸರು ಸೇರಿದಂತೆ ವಿವಿಧ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಪಡಿಸಬೇಕು ಮತ್ತು ಮುಂಬರುವ ತೊಗರಿ ಬೆಳೆಗೆ ದಲ್ಲಾಳಿಗಳ ಹಾವಳಿ ತಪ್ಪಿಸಲು ಸರಕಾರದಿಂದ ಖರೀದಿ ಕೇಂದ್ರವನ್ನು ಶೀಘ್ರವಾಗಿ ಆರಂಭಿಸಿ ರೈತರ ಹಿತ ಕಾಪಾಡುವಂತೆ ಒತ್ತಾಯಿಸಿದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ಮೀಸಲಿಟ್ಟ ಅನುದಾನ ಗಳಲ್ಲಿ ಕೃಷಿ ಮೂಲ ಸೌಕರ್ಯಗಳಾದ ಬಿತ್ತನೆ ಬೀಜ, ರಸಗೊಬ್ಬ ರ, ಕೃಷಿಸಾಲ, ನೀರಾವರಿ ವ್ಯವಸ್ಥೆ, ವಿದ್ಯುತ್ ಸಂಪರ್ಕ, ತಾಂತ್ರಿಕ ಯಂತ್ರೋಪಕರಣ, ಕೊಳವೆಬಾವಿಗಳ ಸೌಲಭ್ಯಗಳಿಗೆ ಹೆಚ್ಚಿ ಆದ್ಯತೆ ನೀಡಿ ಈ ಭಾಗದ ರೈತರು ದೊಡ್ಡ ನಗರಗಳಿಗೆ ಗುಳೆ ಹೋಗುವುದನ್ನು ತಪ್ಪಿಸುವಂತೆ ಹೇಳಿದರು.
ಡಾ.ಸ್ವಾಮಿನಾಥನ್ ವರದಿ ಜಾರಿಯಾಗಿ ಬೆಂಬಲಬೆಲೆ ಖಾತರಿ ಕಾನೂನು ಜಾರಿ, 60 ವರ್ಷ ರೈತರಿಗೆ ಪಿಂಚಣಿ, ಫಸಲ್ ಬಿಮಾ ಯೋಜನೆ ತಿದ್ದುಪಡಿ ಮಾಡುವಂತೆ ಸರಕಾರಕ್ಕೆ ಆಗ್ರಹಿಸಿದರು.
ಸಭೆಯಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ವೇದಿಕೆ ಅಧ್ಯಕ್ಷ ನರಸರೆಡ್ಡಿ ನಜರಾಪೂರ, ರೈತಸಂಘದ ರಾಜ್ಯಸಂಚಾಲಕ ಕೊಟ್ರೇಶ ಚೌಧರಿ, ಸುರಪುರದ ಮರಿ ಲಿಂಗಪ್ಪ, ಮಾಣಿಕರೆಡ್ಡಿ ಕುರಕುಂದಿ, ಗುರುಮಠಕಲ್ ಶರಣರೆಡ್ಡಿ ನಜರಾಪೂರ ಸೇರಿದಂತೆ ಗಣ್ಯರಾದ ಬಿ.ಬಿ.ಸ್ವಾಮಿ, ಅಶ್ವತ್ ಚೌಧರಿ, ರೈತ ಮುಖಂಡರಾದ ಬಸವರಾಜ ರಾಯಿ ಕೋಟಿ ಚಂಡರಕಿ, ಬಸವರೆಡ್ಡಿ ಎಂಟಿಪಲ್ಲಿ, ಶಾಮಪ್ಪ ಚಂಡರಕಿ, ಹುಸೇನಪ್ಪ, ಚಂದ್ರಾರೆಡ್ಡಿ, ಶಿವರೆಡ್ಡಿ ಚಪೆಟ್ಲಾ ಇದ್ದರು.
ದಲ್ಲಾಳಿಗಳ ಹಾವಳಿ ತಪ್ಪಿಸಿ ರೈತರ ಹಿತಕಾಯುವ ನಿಟ್ಟಿನಲ್ಲಿ ಕಲ್ತಾಣ ಭಾಗದ ಸಾಂಪ್ರದಾಯಿಕ ತೊಗರಿ ಬೆಳೆ ಖರೀದಿಕೇಂದ್ರವನ್ನು ಶೀಘ್ರವಾಗಿ ಸ್ಥಾಪಿಸಬೇಕು – ಕುರಬೂರು ಶಾಂತಕುಮಾರ, ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ.