ಸಮರ್ಪಕ ಸರ್ಕಾರಿ ಕಚೇರಿಗಳು ಆರಂಭಿಸಲು ಆಗ್ರಹಿಸಿ ಪ್ರತಿಭಟನೆ | ನ್ಯಾಯಾಲಯ, ನೋಂದಣಿ ಕಚೇರಿ, ಭೂಮಾಪ ಇಲಾಖೆ, ಅಗ್ನಿಶಾಮಕ ಠಾಣೆ ಆರಂಭಿಸಲು ತಿಂಗಳ ಗಡುವು
ಗುರುಮಠಕಲ್ : ಗಡಿ ಭಾಗದ ಗುರುಮಠಕಲ್ ತಾಲೂಕು ಘೋಷಣೆಯಾಗಿ ಸುಮಾರು 6 ವರ್ಷ ಕಳೆದರೂ ಸಮರ್ಪಕ ಕಚೇರಿಗಳನ್ನು ಆರಂಭಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಕಾರ್ಯವಾಗಿಲ್ಲ. ಶೀಘ್ರವೇ ಕಚೇರಿಗಳನ್ನು ಆರಂಭಿ ಸಲು ಮುಂದಾಗಬೇಕು ಎಂದು ತಾಲೂಕು ಅಭಿವೃದ್ಧಿ ಸಮಿತಿ ಯ ನೇತೃತ್ವವಹಿಸಿದ ಪೂಜ್ಯ ಶಾಂತವೀರ ಗುರುಮುರುಘ ರಾಜೇಂದ್ರ ಸ್ವಾಮೀಜಿ ಸರ್ಕಾರವನ್ನು ಒತ್ತಾಯಿಸಿದರು.
ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಹೋರಾಟಕ್ಕೆ ಜಿಲ್ಲಾ ವಕೀಲರ ಸಂಘ, ನಿವೃತ್ತ ಸರ್ಕಾರಿ ನೌಕರರ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳ ಬೆಂಬಲದೊಂದಿಗೆ ಆಯೋಜಿ ಸಿ ಪ್ರತಿಭಟನೆ ರ‍್ಯಾಲಿ ಉದ್ದೇಶಿಸಿ ಬಸವೇಶ್ವರ ವೃತ್ತದಲ್ಲಿ ಮಾತನಾಡಿದರು.
ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ, ಸಬ್ ರಜೀಸ್ಟರ್ ಕಾರ್ಯಾಲಯ, ಕ್ಷೇತ್ರ ಶಿಕ್ಷಣಾಧಿಕಾರಿ, ತಾಲೂಕ ಸಮಾಜ ಕಲ್ಯಾಣ ಇಲಾಖೆ, ತಾಲೂಕ ಕೃಷಿ ಇಲಾಖೆ, ತಾಲೂಕ ಹಿಂದುಳಿದ ಇಲಾಖೆ, ಅಗ್ನಿಶಾಮಕ ಇಲಾಖೆ ಮತ್ತು ಭೂಮಾಪನ ಸೇರಿದಂತೆ ತಾಲೂಕು ಕೇಂದ್ರಕ್ಕೆ ಬೇಕಿರುವ 27 ಇಲಾಖೆ ಕಚೇರಿಗಳನ್ನು ಶೀಘ್ರವೇ ಸರ್ಕಾರ ಸ್ಥಾಪನೆಗೆ ಮುಂದಾಗಬೇಕು ಎಂದರು.
ನಿವೃತ್ತ ಮುಖ್ಯಗುರು ಪಿ. ಕಿಷ್ಟಪ್ಪ ಮಾತನಾಡಿ, ತಾಲೂಕು ಕೇಂದ್ರ ವಾದರು ಗುರುಮಠಕಲ್ ಸಮರ್ಪಕ ಸರ್ಕಾರಿ ಕಚೇರಿಗಳನ್ನು ಹೊಂದಿರದೇ ಇರುವುದು ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಮೂಲಭೂತ ಸೌಕರ್ಯಗಳನ್ನು ಒದಗಿಸುವ ಪ್ರಮಾಣಿಕ ಕೆಲಸ ಸರ್ಕಾರದಿಂದ ಆಗಬೇಕು. ಇಲ್ಲಿನ ಜನರು ನಿತ್ಯ ಯಾದಗಿರಿಗೆ ತೆರಳಬೇಕಿದ್ದು, ಇಲ್ಲಿಯವರೆಗೆ ಜನರ ಕಷ್ಟ ಕೇಳುತ್ತಿಲ್ಲ. ಸರ್ಕಾರ ಕೂಡಲೇ ಕಚೇರಿಗಳನ್ನು ಸ್ಥಾಪಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಿ.ಎಸ್. ಪಾಟೀಲ್ ಮಾತನಾಡಿ, ಯಾವುದೇ ರಾಜಕೀಯ ಉದ್ದೇಶದ ಹೋರಾಟ ಇದ್ದಲ್ಲ. ಗಡಿ ಭಾಗದ ತಾಲೂಕು ಕೇಂದ್ರಕ್ಕೆ ಸಮರ್ಪಕ ಸೌಲಭ್ಯ ಕಲ್ಪಿಸಬೇಕು ಎಂದು ಹೋರಾಟ ಸಮಿತಿ ರಚಿಸಿ ಹೋರಾಟ ಆರಂಭಿಸಲಾಗಿದೆ. ಇದನ್ನು ನಿರ್ಲಕ್ಷಿಸಿದರೆ ಹೋರಾಟ ತೀವ್ರ ಗೊಳಿಸಲಾಗುತ್ತದೆ ಎಂದರು.
ಗುರುಮಠಕಲ್ ಪಟ್ಟಣದಿಂದ ಸುತ್ತಮುತ್ತಲಿನ ಹಳ್ಳಿಯ ಜನರು ಪಟ್ಟಣಕ್ಕೆ ಬಂದು ಯಾದಗಿರಿಯ ನ್ಯಾಯಾಲಯ ಹಾಗೂ ಸರಕಾರಿ ಕಛೇರಿಗಳಿಗೆ ಹೋಗಲು ತೊಂದರೆಯಾಗುತ್ತಿದೆ. ಸುಮಾರು 120 ಕಿ.ಮೀ ಯಾದಗಿರಿ ಜಿಲ್ಲಾ ಕೇಂದ್ರಕ್ಕೆ ಹೋಗಲು ಬರಲು ಜನಸಾಮಾನ್ಯರು ಹಾಗೂ ಕಕ್ಷಿದಾರರಿಗೆ ತೊಂದರೆ, ಆರ್ಥಿಕ ಹೊರೆಯಾಗುತ್ತಿದೆ ಎಂದರು.
ಗುರುಮಠಕಲ್ ಪಟ್ಟಣದಲ್ಲಿ ಸಿವಿಲ್ ನ್ಯಾಯಾಲಯ ಸ್ಥಾಪನೆಗೋಸ್ಕರ ಸರ್ಕಾರಕ್ಕೆ ಈಗಾಗಲೇ ಲೋಕೋಪಯೋಗಿ ಇಲಾಖೆ ಮುಖಾಂತರ ಗುರುಮಠಕಲ್ ಪುರಭವನ ದುರಸ್ಥಿ ಮಾಡಲು 50 ಲಕ್ಷ ರೂಪಾಯಿಗಳು ಮಂಜೂರು ಗೋಸ್ಕರ ವರದಿಯನ್ನು ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದರು. ಬಳಿಕ ತಹಸೀಲ್ದಾರ ಶಾಂತಗೌಡ ಬಿರಾದಾರ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ವಕೀಲರಾದ ರಾಜಾರಮೇಶ ಗೌಡ, ಭೀಮರಾವ ಚಂಡರಕಿ, ಕಿಶನರಾವ ಚಂಡರಕಿ, ಆನಂದ ನೀರೆಟಿ, ದೇವಿಂದ್ರಪ್ಪ ಮಲಖೇಡಕರ್, ಕೃಷ್ಣಾ ಪಾಂಚಾಳ, ಗುರುನಾಥ ರೆಡ್ಡಿ ಅನಪೂರ, ವಿಶ್ವನಾಥರೆಡ್ಡಿ ಚಂಡರಿಕಿ, ಚಂದಪಾಷಾ ಬುರಗಪಲ್ಲಿ, ಕೃಷ್ಣಾ ಮೇದ, ಶಿವಕುಮಾರ ಅನಪೂರ, ಮೋಹನ ಗಜರೆ, ಪ್ರಮುಖರಾದ ವೀರಪ್ಪ ಪ್ಯಾಟಿ, ಆಶನ್ನ ಬುದ್ಧ, ನರಸರೆಡ್ಡಿ ಗಡ್ಡೆಸೂಗೂರ, ಅನಂತಪ್ಪ ಯದ್ಲಾಪೂರ, ಆನಂದ ಬೋಯಿನಿ, ವೆಂಕಟಪ್ಪ ಅವಂಗಾಪೂರ, ಜಗದೀಶ್ಚಂದ್ರ ಮೇಂಗಜಿ, ಲಿಂಗಪ್ಪ ತಾಂಡೂಕರ್, ವೆಂಕಟಪ್ಪ ಮನ್ನೆ, ಶ್ರೀನಿವಾಸ ಗಾಳಾ, ಸಾಯಬ ಣ್ಣ ಪೂಜಾರಿ, ಇಸ್ಮಾಯಿನ್ ಪ್ಯಾರೆ, ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ಅಶೋಕ ಶನಿವಾರಂ, ನಾಗೇಶ ಗದ್ದಿಗಿ, ಲಾಲಪ್ಪ ತಲಾರಿ, ಗೋಪಾಲಕೃಷ್ಣಾ ಮೇದಾ, ಎಂ.ಡಿ. ಪಾಟೀಲ್, ರವೀಂದ್ರರೆಡ್ಡಿ ಪೋತುಲ್, ಮುರಳಿ ಮೌರ್ಯ, ಭೀಮಶಪ್ಪ ಶನಿವಾರಂ, ರಂಗಪ್ಪ ಕೊಂಕಲ್, ಫಯಾಜ್ ಅಹ್ಮದ್, ಚಾಂದಪಾಷಾ, ನರೇಶ ಮುದಿರಾಜ ಇನ್ನಿತರರು ಇದ್ದರು.