ಶಿಕ್ಷಕ ಜಿ.ರಾಮಕೃಷ್ಣ ಯಾದವ ಸೇವಾ ವಯೋ ನಿವೃತ್ತಿ ಸಮಾರಂಭ
ಗುರುಮಠಕಲ್: ಶಿಕ್ಷಕ ಎಂದರೆ ಕಣ್ಣಿಗೆ ಕಾಣುವ ದೇವರು, ಶಿಕ್ಷಣದಿಂದ ಸುಶಿಕ್ಷಿತ ಸಮಾಜ ನಿರ್ಮಾಣವಾಗಿ ದೇಶದ ಭವಿಷ್ಯ ನಿರ್ಧಾರವಾಗುತ್ತದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜಗೋಪಾಲರೆಡ್ಡಿ ಮುದಿರಾಜ ಹೇಳಿದರು.
ತಾಲೂಕಿನ ಚಂಡರಕಿ ಗ್ರಾಮದ ಶತಮಾನಕಂಡ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಆಯೋಜಿಸಿದ್ದ ನಿವೃತ್ತಿ ಸಮಾರಂಭದಲ್ಲಿ ಮಾತನಾಡಿದರು.
ಶಿಕ್ಷಕ ವೃತ್ತಿ ಮುಂದಿನ ಪೀಳಿಗೆಯ ಭವಿಷ್ಯ ರೂಪಿಸುವ ಅವಕಾಶ ದೇವರು ಕೊಟ್ಟ ವರ, ಎಲ್ಲರಿಗೂ ಶಿಕ್ಷಕನಾಗುವ ಅವಕಾಶ ಸಿಗಲ್ಲ ಎಂದು ಅಭಿಪ್ರಾಯಪಟ್ಟರು.
ಇದು ನಿವೃತ್ತಿಯಲ್ಲ, ಮುಂದೆ ಶಿಕ್ಷಕರಿಗೆ ಮಾರ್ಗದರ್ಶನ ನೀಡಿ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕಾರ್ಯ ಮಾಡಲು ಸಲಹೆ ನೀಡಿದರು. ಶಿಕ್ಷಕರು ಸಮಾಜಕ್ಕೆ ನೀಡುವ ಕೊಡುಗೆ ಅಪಾರವಾಗಿದೆ ಎಂದು ಹೊಗಳಿದರು.
ಕ್ಷೇತ್ರ ಶಿಕ್ಷಣ ಸಮನ್ವಯ ಅಧಿಕಾರಿ ಮಲ್ಲಿಕಾರ್ಜುನ ಪೂಜಾರಿ ಮಾತನಾಡಿ, ಶಿಕ್ಷಕ ಜಿ.ರಾಮಕೃಷ್ಣ ಅವರು ಹಲವಾರು ವಿದ್ಯಾರ್ಥಿ ಗಳ ವ್ಯಕ್ತಿತ್ವ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಶತಮಾನಕಂಡ ಶಾಲೆ ಯಲ್ಲಿಯೂ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶ್ರಮಿಸಿದ್ದಾರೆ ಎಂದರು.
ಜಿಲ್ಲಾ ಖಾತರಿ ಯೋಜನೆ ಸಮಿತಿ ಸದಸ್ಯ ನರಸಿಂಹ ರೆಡ್ಡಿ ಚಂಡರಕಿ ಮಾತನಾಡಿ, ಸುಧೀರ್ಘ ಸೇವೆ ಸಲ್ಲಿಸಿ, ನಿವೃತ್ತಿ ಹೊಂದುವ ಶಿಕ್ಷಕ ರಾಮಕೃಷ್ಣ ಅವರು ಈ ಶಾಲೆಗೆ ಮಾರ್ಗದರ್ಶನ ನೀಡಲು ಮನವಿ ಮಾಡಿದರು.
ಲೈಯನ್ಸ್ ಕ್ಲಬ್ ನ ಶ್ರೀನಿವಾಸ ರೆಡ್ಡಿ ಪಾಟೀಲ್ ಸೇಡಂ ಮಾತನಾಡಿ, ಅವರ ಸೇವೆ ಸಾರ್ಥಕ. ಎರಡನೇ ಇನಿಂಗ್ಸ್ ಸೇವೆ ಲಾಯನ್ಸ್ ಕ್ಲಬ್ ನಲ್ಲಿ ಮುಂದುವರೆಯಲಿದೆ. ರಾಮಕೃಷ್ಣ ಅವರು ನಕ್ಷತ್ರ ವಿದ್ದಂತೆ. ಮಕ್ಕಳ ಮನಸ್ಸಿನ ಸರಳ ಸಜ್ಜನಿಕೆಯ ವ್ಯಕ್ತಿ ಎಂದರು.
ಪೂಜ್ಯ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ನೌಕರರ ಸಂಘದ ಅಧ್ಯಕ್ಷ ಸಂತೋಷ ನೀರೆಟಿ, ಬಸವರಾಜ ದಳಪತಿ, ಕೆ. ಮೊಗುಲಪ್ಪ ಪ್ರೌಢ ಶಾಲೆ ಮುಖ್ಯಗುರು, ದಾಸಪ್ಪ, ಶ್ರೀ ನಿವಾಸ ರೆಡ್ಡಿ, ವೆಂಕಟರಾಮುಲು, ವೀರಪ್ಪ ಪ್ಯಾಟಿ, ರಘುನಾಥ ರೆಡ್ಡಿ, ಕ್ಷ್ಮೀಕಾಂತ ರೆಡ್ಡಿ, ರವೀಂದ್ರ ಚವಾಣ, ನಾರಾಯಣ ರೆಡ್ಡಿ, ವೆಂಕಟಪ್ಪ ಅವಂಗಾಪುರ, ವಿಜಯ ನೀರೆಟಿ, ಬಾಲಪ್ಪ ಸಿರಿಗೆಂ, ಚಂದ್ರಕಾಂತ ಹೊಟ್ಟಿ, ಕೃಷ್ಣರೆಡ್ಡಿ, ಕುಮದ್ವತಿ, ಭಾರತಿ, ಸಾವಿತ್ರಿ, ಮಮತ ಸೇರಿದಂತೆ ಹಲವರು ಇದ್ದರು.
ಶಾಲೆ ಹಾಗೂ ಗ್ರಾಮಸ್ಥರು ನಿವೃತ್ತಿಗೊಂಡ ಶಿಕ್ಷಕ ರಾಮಕೃಷ್ಣ ಯಾದವ ಅವರನ್ನು ಸನ್ಮಾನಿಸಿದರು. ಮುಖ್ಯಗುರು ಭೀಮಪ್ಪ ಗೌಡರ ಅಧ್ಯಕ್ಷತೆ ವಹಿಸಿದ್ದರು. ಶಿವರಾಜ್ ಸಾಕಾ ನಿರೂಪಿಸಿದರು.