ಗಡಿಯಲ್ಲಿ ಹೆಚ್ಚಾದ ವಾಹನ ದಟ್ಟಣೆ | ಶಾಲಾ ಮಕ್ಕಳು, ಸಾರ್ವಜನಿಕ ರಿಗೆ ತೊಂದರೆ

ಗುರುಮಠಕಲ್: ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ದಿನೆದಿನೇ ಹೆಚ್ಚುತ್ತಿದ್ದು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಪ್ರಮುಖರು ಮನವಿ ಸಲ್ಲಿಸಿದ್ದಾರೆ.

ಪೊಲೀಸ್ ಠಾಣೆಗೆ ತೆರಳಿ ಪಿಐ ದೇವಿಂದ್ರಪ್ಪ ಧೂಳಖೇಡ ಅವರಿಗೆ ಮನವಿ ಸಲ್ಲಿಸಿ, ನಗರೇಶ್ವರ ದೇವಸ್ಥಾನದಿಂದ ಬಸ್ ನಿಲ್ದಾಣದ, ಕನಕ ವೃತ್ತದವರೆಗೆ ಸಂಚಾರ ನಿಯಂತ್ರಣ ಮಾಡಲು ಕೋರಿದ್ದಾರೆ.

ಬಸ್ ನಿಲ್ದಾಣದ ಕನಕ ವೃತ್ತ ದವರಗೆ ವಾಹನಗಳ ದಟ್ಟನ ಹಚ್ಚಾಗಿರುವುದರಿಂದ ಸಾರ್ವಜನಿಕರು ತೊಂದರ ಅನುಭವಿಸುತ್ತಿದ್ದಾರೆ. ವಾಹನಗಳು ರಸ್ತೆ ಮೇಲೆ ನಿಲ್ಲಿಸಿ ಅದರಲ್ಲಿರುವ ಸರುಕುಗಳು ಇಳಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿವೆ.

ವಾಹನಗಳು ರಸ್ತೆ ಮೇಲೆ ನಿಲ್ಲುವ ಕಾರಣ ಎಲ್ಲಾ ವಾಹನಗಳಗೆ ತೊಂದರೆ ಆಗುತ್ತಿದೆ. ಇದರಿಂದಾಗಿ ಸರಿಯಾದ ಸಮಯಕ್ಕೆ ಕೆಲಸಕ್ಕೆ ತೆರಳುವವರು, ಶಾಲಾ ಮಕ್ಕಳು ಶಾಲೆಗೆ ತಲುಪಲು ತೊಂದರೆಯಾಗಿದೆ.

ಹಾಗಾಗಿ ಸರಕು ಇಳಿಸುವ ವಾಹನಗಳಿಗೆ ರಾತ್ರಿ ಸಮಯ ನಿಗದಿಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಈ ವೇಳೆ ನಾರಾಯಣ ಮಜ್ಜಿಗೆ, ವೆಂಕಟಪ್ಪ ಮನ್ನೆ, ಹನಮಂತು ಕಂದೂರು, ಅಂಜಪ್ಪ ಮಜ್ಜಿಗೆ, ನರಸಪ್ಪ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!