ಕೆಲವರಿಗೆ ಸಣ್ಣ ಪುಟ್ಟ ಗಾಯ, ಅದೃಷ್ಟವಶಾತ್ ಎಲ್ಲರೂ ಸೇಫ್….
ಗುರುಮಠಕಲ್: ಪಟ್ಟಣದ ವಾಸವಿ ಆಂಗ್ಲ ಮಾಧ್ಯಮ ಶಾಲೆಯಿಂದ ಮಕ್ಕಳನ್ನು ರಾಜ್ಯ ಪ್ರವಾಸಕ್ಕೆ ಕರೆದೊಯ್ದ ಸರ್ಕಾರಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಘಟನೆ ಬೆಳಗಿನ ಜಾವ ಸಂಭವಿಸಿರುವ ಕುರಿತು ವರದಿಯಾಗಿದೆ.
ಇಲ್ಲಿನ ಖಾಸಗಿ ಶಾಲೆಯ ವಿದ್ಯಾರ್ಥಿಗಳು ಆಲ್ ಕರ್ನಾಟಕ ಟೂರ್ ಗೆ ನ.27 ರ ರಾತ್ರಿ ಹೊರಡಲಾಗಿತ್ತು, ಗುರುಮಠಕಲ್ ಘಟಕದ ಕೆಎ 33 ಎಫ್ 0625 ಬಸ್ ಮಾರ್ಗ ಮಧ್ಯೆಯೇ ಕೊಪ್ಪಳದ ಪ್ರಗತಿ ನಗರ ಬಳಿ ಕಂದಕಕ್ಕೆ ಉರುಳಿದೆ.
ಘಟನೆಯಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಪಾಲಕರು ಆತಂಕ ಪಡದಿರಿ: ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಗಂಭೀರ ಗಾಯಗಳಾಗಿಲ್ಲ. ಮಕ್ಕಳು, ಶಿಕ್ಷಕರು ಎಲ್ಲರೂ ಸೇಫ್ ಇದ್ದು, ಪಾಲಕರು ಆತಂಕ ಪಡಬೇಕಿಲ್ಲ ಎಂದು ಶಾಲೆಯವರು ಹೇಳಿದ್ದಾರೆ ಎಂದು ಪಾಲಕರು ಮಾಹಿತಿ ನೀಡಿದರು.
ಟೂರ್ ಮೊಟಕುಗೊಳಿಸಿ ವಾಪಸ್: ಮಾರ್ಗ ಮಧ್ಯೆಯೇ ಬಸ್ ಉರಿಳಿದ್ದರಿಂದ ಆಲ್ ಕರ್ನಾಟಕ ಟೂರ್ ಮೊಟಕುಗೊಳಿಸಿ ಪ್ರತ್ಯೇಕ ಸಾರಿಗೆ ಬಸ್ ಮೂಲಕ ವಾಪಸ್ ಆಗುತ್ತಿದ್ದಾರೆ. ಮಧ್ಯಾಹ್ನದ ವೇಳೆಗೆ ಎಲ್ಲರೂ ಗುರುಮಠಕಲ್ ಗೆ ಬರಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.