ಕಂದ ಏನಾದರೂ ಪೆಟ್ಟಾಯಿತಾ…?
ಯಾದಗಿರಿ: ಜಿಲ್ಲೆಯ ಗುರುಮಠಕಲ್ ನ ಖಾಸಗಿ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಪ್ರವಾಸಕ್ಕೆ ತೆರಳಿದ ಬಸ್ ಉರುಳಿದ ಪರಿಣಾಮ ಬದಲಾದ ಗಂಗಾವತಿ ಘಟಕದ ಬಸ್ ನಲ್ಲಿ ವಿದ್ಯಾರ್ಥಿಗಳೆಲ್ಲ ಸೇಫ್ ಆಗಿ ಮಧ್ಯಾಹ್ನ 2:30 ಕ್ಕೆ ಬಂದಿಳಿದಿ ದ್ದಾರೆ.
ಮಕ್ಕಳನ್ನು ಪ್ರವಾಸಕ್ಕೆ ಕಳಿಸಿದ್ದ ಪಾಲಕರ ಜೀವ ಸುಮ್ಮನಿರುತ್ತಾ ಹೇಳಿ..! ಮಕ್ಕಳು ಬಸ್ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ಕಾಯುತ್ತಿದ್ದ ಪಾಲಕರು, ತಮ್ಮ ಮಕ್ಕಳ ಬಳಿಗೆ ತೆರಳಿ ಕಂದಾ ಏನಾದರೂ ಪೆಟ್ಟಾಯಿತಾ ಎಂದು ವಿಚಾರಿಸುತ್ತಿದ್ದ ದೃಶ್ಯ ಕಂಡು ಬಂತು.
ಶಾಲೆಯಿಂದ 27ರ ರಾತ್ರಿ ಸಾರಿಗೆ ಸಂಸ್ಥೆ ವಾಹನದಲ್ಲಿ ಮಕ್ಕಳಿಗೆ ರಾಜ್ಯ ಪ್ರವಾಸಕ್ಕೆ ಕರೆದುಕೊಂಡು ಹೋಗಲಾಗಿತ್ತು, ಆದರೇ ಮಾರ್ಗ ಮಧ್ಯೆಯೇ ಬಸ್ ಕಂದಕಕ್ಕೆ ಉರುಳಿತ್ತು. ಇದರಿಂದಾಗಿ ಪ್ರವಾಸ ಮೊಟಕುಗೊಳಿಸಿ ವಾಪಸ್ ಕರೆತರಲಾಗಿದೆ.
ಘಟನೆಯಲ್ಲಿ ಅದೃಷ್ಟವಶಾತ್ ದೇವರು ದೊಡ್ಡವನು ಯಾವುದೇ ಅನಾಹುತ ಸಂಭವಿಸಿಲ್ಲ ಎನ್ನುವುದೇ ಪಾಲಕರಿಗೆ ಸಮಾಧಾನ ತರಿಸಿದೆ. ಮಕ್ಕಳನ್ನು ನೋಡಿದ ಪಾಲಕರು ನಿಟ್ಟುಸಿರು ಬಿಡುವಂತಾಯಿತು.