ಯಾದಗಿರಿಧ್ವನಿ.ಕಾಮ್ ಫಾಲೋಆಫ್ | ವಾಸವಿ ಶಾಲಾ ಮಕ್ಕಳು ಸೇಫಾಗಿ ಮರಳಲು ಕಾರಣವೇನು ಗೊತ್ತಾ..?
ಯಾದಗಿರಿ: ಜಿಲ್ಲೆಯ ಗುರುಮಠಕಲ್ ದಿಂದ ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದ ಬಸ್ ಕಂದಕಕ್ಕೆ ಇಳಿದು ಮಕ್ಕಳೆಲ್ಲಾ ಸೇಫ್ ಆಗಿರಲು ಕಾರಣ ರೋಚಕ. ಮಕ್ಕಳು ಸುರಕ್ಷಿತವಾಗಲು ಕೈಗೆ ಸಿಕ್ಕಿತು ಆ ವಸ್ತು…!
ಇದೇನಪ್ಪಾ, ಸಾರಿಗೆ ಸಂಸ್ಥೆಯವರು ಇಂದಿನ ಮುಂದುವರಿದ ಆಧುನಿಕ ಯುಗದಲ್ಲಿ ಏನಾದರೂ ಹೊಸ ತಂತ್ರಜ್ಞಾನ ಬಳಸಿದ್ದಾರಾ ಎಂದು ಕೊಂಡಿದ್ದರೆ ಇಲ್ಲ. ರಾಜ್ಯ ಪ್ರವಾಸಕ್ಕೆ ತೆರಳಿದ ಗುರುಮಠಕಲ್ ವಾಸವಿ ಶಾಲೆಯ ಎಲ್ಲಾ ಮಕ್ಕಳು ಸೇಫಾಗಿ ಮರಳಲು ಕಾರಣ ಸೀರೆಗಳು….!
ಇದೇನಪ್ಪಾ ಸೀರೆ ಹೇಗೆ ಪ್ರಾಣ ಉಳಿಸಿದವು ಎಂದು ತಿಳಿಯಲು ಪೂರ್ಣ ಸುದ್ದಿ ಓದಿ.
ನ.27ರ ರಾತ್ರಿ ಪ್ರವಾಸಕ್ಕೆ ಆರಂಭದ ವೇಳೆ ಶಾಲಾ ಶಿಕ್ಷಕರರು ಮಕ್ಕಳು ನಿದ್ದೆಗೆ ಜಾರಿದರೆ, ತಿರುವಿನಲ್ಲಿ ಆಯಾ ತಪ್ಪದಂತೆ ಸೀಟುಗಳ ಉದ್ದೇಶವೂ ಸೀರೆಗಳನ್ನು ಕಟ್ಟಿದ್ದರು. ಆ ಸೀರೆಗಳೇ ನಿಜವಾಗಿ ಮಕ್ಕಳನ್ನು ರಕ್ಷಿಸಿವೆ.
ಬಸ್ ಕಂದಕಕ್ಕೆ ಇಳಿಯುವ ವಿಷಯ ಯಾರು ಕನಸು ಕಾಣಲೂ ಸಾಧ್ಯವಿಲ್ಲ ಬಿಡಿ. ಆದರೂ ಚಾಲಕನ ಚಾತುರ್ಯ್ಯ, ದೇವರ ದಯೆ ಯಾರಿಗೂ ಏನು ಆಗಿಲ್ಲ ಎನ್ನುವದೇ ಮನಸ್ಸಿಗೆ ನೆಮ್ಮದಿಯ ಸಂಗತಿ.
ಬಸ್ ತೆರಳುವ ಮಾರ್ಗದಲ್ಲಿ ಎದುರಿನಿಂದ ಅತಿ ವೇಗವಾಗಿ ಬರುತ್ತಿದ್ದ ವಾಹನ ಒಂದನ್ನು ರಕ್ಷಿಸು ಸಂದಂರ್ಭದಲ್ಲಿ ಬಸ್ ಕೊಪ್ಪಳದ ಪ್ರಗತಿ ನಗರ ಬಳಿ ಕಂದಕಕ್ಕೆ ಇಳಿದಿತ್ತು.
ಸೀಟಿನುದ್ದ ಸೀರೆ ಕಟ್ಟಿದ್ದರಿಂದ ಅವುಗಳನ್ನು ಬಿಗಿಯಾಗಿ ಹಿಡಿ ದಿದ್ದ ಮಕ್ಕಳನ್ನು ಒಬ್ಬೊಬ್ಬರಾಗಿ ಶಾಲಾ ಶಿಕ್ಷಕರೇ ಹೊರತೆಗೆ ದಿದ್ದಾಗಿ ಶಿಕ್ಷಕರು ತಿಳಿಸಿದರು.
ಘಟನೆ ವೇಳೆ ಸೀರೆ ಕಟ್ಟಿದ್ದನ್ನು ನೋಡಿ ಪೊಲೀಸರು ಸಹ ಪ್ರಶಂಸೆ ವ್ಯಕ್ತಪಡಿಸಿದರಂತೆ, ಮಕ್ಕಳ ಮೇಲಿನ ಕಾಳಜಿಯ ಶಿಕ್ಷಕರ ಈ ಸೀರೆ ಐಡಿಯಾ 60 ಮಕ್ಕಳ ಪ್ರಾಣ ರಕ್ಷಕವಾಗಿ ಸಾಬೀತಾಗಿವೆ.
ಇನ್ನು ಮುಂದೆ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವಾಗ ಸಾರಿಗೆ ಇಲಾಖೆಯೂ ಅಗತ್ಯ ಸುರಕ್ಷತಾ ಕ್ರಮವಹಿಸಲು ಮುಂದಾಗಬೇಕಿರುವುದು ಅವರ ಜವಾಬ್ದಾರಿಯೇ ಸರಿ.