ಯಾದಗಿರಿ : ಕೊಂಕಲ್‌ನ 110ಕೆವಿ ಸಬ್ ಸ್ಟೇಷನ್‌ನಲ್ಲಿ ತ್ರೈಮಾಸಿಕ ನಿರ್ವಹಣೆ ಹಾಗೂ ದುರಸ್ಥಿ ಕಾಮಗಾರಿಯನ್ನು ನಿರ್ವಹಿಸುತ್ತಿರುವ ಹಿನ್ನೆಲೆ 2024ರ ನವೆಂಬರ್ 30 ರ ಶನಿವಾರ ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಯಾದಗಿರಿ ಜೆಸ್ಕಾಂ ಕಾರ್ಯ ಮತ್ತು ಪಾಲನಾ ವಿಭಾಗ ಕಾರ್ಯನಿರ್ವಾಹಕ ಅಭಿಯಂತರರು (ವಿ) ರಾಘವೇಂದ್ರ ಅವರು ತಿಳಿಸಿದ್ದಾರೆ.
11ಕೆವಿ ಎಫ್-5 ಮಿನಾಸಪೂರ ಐ.ಪಿ, 11ಕೆವಿ ಎಫ್-6 ಅನಪೂರ ಎನ್.ಜೆ.ವೈ, 11ಕೆವಿ ಎಫ್-7 ವಾಟರ್ ಸಪ್ಲೈ, 11ಕೆವಿ ಎಫ್-8 ಅನಪೂರ ಐ.ಪಿ, 11ಕೆವಿ ಎಫ್-9 ಕಂದಕೂರ ಐ.ಪಿ ಹಾಗೂ 11ಕೆವಿ ಎಫ್-10 ರಾಮಸಮುದ್ರ ಐ.ಪಿ ಫೀಡರ್‌ಗಳಿಗೆ ವಿದ್ಯುತ್ ಸರಬರಾಜು ನಿಲುಗಡೆ ಮಾಡಲಾಗುವುದು.
ಸದರಿ 11 ಕೆವಿ ಮಾರ್ಗಗಳಿಂದ ವಿದ್ಯುತ್ ಸಂಪರ್ಕ ಕಲ್ಪಿಸಿರುವ ಅನಪೂರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ, ತಾಂಡಗಳಿಗೆ ಮತ್ತು ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಜೆಸ್ಕಾಂಗೆ ಸಹಕರಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.