ಶಿವಾಜಿ ಜಯಂತಿ ಮೆರವಣಿಗೆ ಮೇಲೆ ಕಲ್ಲು ತೂರಿದ ಪುಂಡರ ನ್ನು ಬಂಧಿಸಿ, ಶಿಕ್ಷಿಸಿ | ಸೂಕ್ಷ್ಮ ಸ್ಥಳಗಳ ತಪಾಸಣೆ ಮಾಡಿ | ಗುರುಮಠಕಲ್ ನಲ್ಲಿ ಆಚರಿಸುತ್ತಿರುವ ಜಯಂತಿಗೆ ಹೆಚ್ಚಿನ ಭದ್ರತೆ ನೀಡಲು ಶಿವಾಜಿ ಸೇನಾ ಅಧ್ಯಕ್ಷ ಪರಶುರಾಮ್ ಶೇಗುರಕರ ಒತ್ತಾಯ
ಯಾದಗಿರಿ: ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಹೊರಟಿದ್ದ ಮೆರವಣಿಗೆಯ ಮೇಲೆ ಕಲ್ಲು, ಚಪ್ಪಲಿ ತೂರಿ ಅವಮಾನ ಮಾಡಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕು ಎಂದು ಅಖಿಲ ಕರ್ನಾಟಕ ಹಿಂದೂ ಸಾಮಾಟ ಜೈ ಛತ್ರಪತಿ ಶಿವಾಜಿ ಮಹಾರಾಜ ಸೇನಾ ಸಂಸ್ಥಾಪಕ ಅಧ್ಯಕ್ಷ ಪರಶುರಾಮ ಶೇಗುರಕರ್ ಒತ್ತಾಯಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು ಬಾಗಲಕೋಟೆಯಲ್ಲಿ ಶಾಂತರೀತಿಯಿಂದ ಶಿವಾಜಿ ಮಹಾರಾಜರ ಜಯಂತಿಯ ಮೆರವಣಿಗೆ ಸಾಗುತ್ತಿದ್ದಾಗ, ಕಲ್ಲು ಚಪ್ಪಲಿ ತೂರಿದ ಪುಂಡ ಪೋಕರಿಗಳನ್ನು ಸರ್ಕಾರ ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಬಾಗಲಕೋಟೆ ಕಿಲ್ಲಾ ಓಣಿಯಲ್ಲಿ ಸಾಗಿ ಬರುತ್ತಿದ್ದ ಮೆರವಣಿಗೆಯ ಮೇಲೆ ಏಕಾ ಏಕಿ ಕಲ್ಲುಗಳನ್ನು ತೂರಿದ ಪರಿಣಾಮ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಲೆಗೆ ಗಾಯವಾಗಿರುವು ದು ಅತ್ಯಂತ ಗಂಭೀರ ಸಂಗತಿಯಾಗಿದೆ. ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡುವಂತ ಒಬ್ಬ ಅಧಿಕಾರಿಯ ಮೇಲು ಹೀಗೆ ದಾಳಿ ಮಾಡುವ ಪುಂಡರನ್ನು ತಕ್ಷಣ ಸೆರೆ ಹಿಡಿದು ಸದೆಬಡೆಯ ಬೇಕೆಂದು ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಘಟನೆಯನ್ನು ನೋಡಿದರೆ ಇದು ಪೂರ್ವ ನಿಯೋಜಿತ ಎಂದು ಕಂಡುಬರುತ್ತದೆ. ಏಕಾಏಕಿ ನೂರಾರು ಕಲ್ಲುಗಳು ತೂರಿ ಬರುತ್ತವೆ ಎಂದರೆ ಪುಂಡರು ಮೊದಲೇ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು ಎಂಬುದು ಸ್ಪಷ್ಟ ಕಂಡುಬರುತ್ತಿದೆ. ಘಟನೆ ಕಲಂಕುಷ ತನಿಖೆ ನಡೆಸಬೇಕು ಮತ್ತು ಎಲ್ಲಾ ಸೂಕ್ಷ್ಮ ಸ್ಥಳಗಳ ಕಟ್ಟುನಿಟ್ಟಿನ ತಪಾಸಣೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಭದ್ರತೆ ಒದಗಿಸಲು ಒತ್ತಾಯ: ಗುರುಮಠಕಲ್ ನಲ್ಲಿ ಶನಿವಾರ ನಡೆಯುವ ಛತ್ರಪತಿ ಶಿವಾಜಿ ಮಹಾರಾಜರ ಮೆರವಣಿಗೆ ಬಿಗಿ ಪೊಲೀಸ್ ಬಂದೋಬಸ್ತು ಒದಗಿಸಬೇಕು. ಮುನ್ನೆಚ್ಚರಿಕೆಯ ಕ್ರಮವಾಗಿ ಎಲ್ಲ ಕೂಲಂಕುಶ ತಪಾಸಣೆಯನ್ನು ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಗುರುಮಠಕಲ್ ನಲ್ಲಿ ಶಿವಾಜಿ ಮಹಾರಾಜರ ಜಯಂತೋತ್ಸವದ ಅಂಗವಾಗಿ ನಡೆಯುವ ಬೃಹತ್ ಮೆರವಣಿಗೆಯಲ್ಲಿ ಸಮಸ್ತ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಮನವಿ ಮಾಡಿದ್ದಾರೆ.
