ಯಾದಗಿರಿ : ನಾರಾಯಣಪೂರ ಆಣೆಕಟ್ಟು ಅಡಿಯಲ್ಲಿನ ಜೆ.ಬಿ.ಸಿ. ವೃತ್ತದಡಿ ಬರುವ ಕಾಲುವೆ ಜಾಲಕ್ಕೆ 2024-25ನೇ ಸಾಲಿನ ಹಿಂಗಾರು ಹಂಗಾಮಿಗೆ ಚಾಲೂ ಬಂದ್ ಪದ್ಧತಿ ಅನುಸರಿಸಿ ನೀರನ್ನು ಹರಿಸುವ ಚಾಲುಬಂದ ವೇಳಾ ಪಟ್ಟಿ ಪ್ರಕಟಿಸಲಾಗಿದೆ ಎಂದು ಭೀಮರಾಯನಗುಡಿ ಜೆಬಿಸಿ ವೃತ್ತ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಅಧೀಕ್ಷಕ ಅಭಿಯಂತರರು ಲಕ್ಷ್ಮಣ ಎಂ.ನಾಯಕ ತಿಳಿಸಿದ್ದಾರೆ.

ಕೃಷ್ಣಾ ಮೇಲ್ದಂಡೆ ಯೋಜನೆಯ ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆ ತೀರ್ಮಾನದಂತೆ, ಈ ವೃತ್ತದಡಿ ಬರುವ ಶಹಾಪೂರ ಶಾಖಾ ಕಾಲುವೆ, ಜೇವರ್ಗಿ ಶಾಖಾ ಕಾಲುವೆ ಹಾಗೂ ಮುಡಬಾಳ ಶಾಖಾ ಕಾಲುವೆಯ ಕಾಲುವೆ ಜಾಲಕ್ಕೆ 2024ರ ನವೆಂಬರ್ 17 ರಿಂದ 20ರ ವರೆಗೆ ಸತತವಾಗಿ ನೀರು ಹರಿಸುವುದನ್ನು ಮುಂದುವರೆಸಲಾಗುವುದು. 2024ರ ನವೆಂಬರ್ 21 ರಿಂದ ಡಿಸೆಂಬರ್ 8ರ ವರೆಗೆ ಕಾಲುವೆ ಜಾಲದಡಿಯಲ್ಲಿ ನೀರು ಹರಿಸುವುದನ್ನು ನಿಲ್ಲಿಸಲಾಗುವುದು.

2024-25ನೇ ಸಾಲಿನ ಹಿಂಗಾರು ಹಂಗಾಮಿಗೆ 14 ದಿನಗಳ ಚಾಲೂ ಹಾಗೂ 10 ದಿನಗಳ ಬಂದ್ ಪದ್ಧತಿಯನ್ನು ಅನುಸರಿಸಿ, 2024ರ ಡಿಸೆಂಬರ್ 9 ರಿಂದ 2025ರ ಮಾರ್ಚ್ 23ರ ವರೆಗೆ ಈ ವೃತ್ತದಡಿಯಲ್ಲಿ ಬರುವ ಶಹಾಪೂರ ಶಾಖಾ ಕಾಲುವೆ, ಜೇವರ್ಗಿ ಶಾಖಾ ಕಾಲುವೆ ಹಾಗೂ ಮುಡಬಾಳ ಶಾಖಾ ಕಾಲುವೆಯ ಕಾಲುವೆ ಜಾಲದ ಅಚ್ಚುಕಟ್ಟು ಪ್ರದೇಶಕ್ಕೆ ಈ ಕೆಳ ಸೂಚಿಸಿದ ವಾರಬಂದಿ ಪದ್ಧತಿಯಂತೆ ನೀರನ್ನು ಹರಿಸಲು ಸಹ ತೀರ್ಮಾನಿಸಲಾಗಿದೆ.

ಕಾಲುವೆ ಚಾಲೂ ಇರುವ ದಿನಾಂಕ : 2024ರ ಡಿಸೆಂಬರ್ 9 ರಿಂದ 2024ರ ಡಿಸೆಂಬರ್ 22ರ ವರೆಗೆ 14 ದಿನಗಳು, 2025ರ ಜನವರಿ 2 ರಿಂದ 2025ರ ಜನವರಿ 15ರ ವರೆಗೆ 14 ದಿನಗಳು, 2025ರ ಜನವರಿ 26 ರಿಂದ 2025 ಫೆಬ್ರವರಿ 8ರ ವರೆಗೆ 14 ದಿನಗಳು, 2025ರ ಫೆಬ್ರವರಿ 19 ರಿಂದ 2025ರ ಮಾರ್ಚ್ 4ರ ವರೆಗೆ 14 ದಿನಗಳು, 2025ರ ಮಾರ್ಚ್ 15 ರಿಂದ 2025ರ ಮಾರ್ಚ್ 23ರ ವರೆಗೆ 09 ದಿನಗಳು ಒಟ್ಟು 65 ದಿನಗಳು ಕಾಲುವೆ ಚಾಲೂ ಇರಲಿದೆ.

ಕಾಲುವೆ ಬಂದ್ ಇರುವ ದಿನಾಂಕ : 2024ರ ಡಿಸೆಂಬರ್ 23 ರಿಂದ 2025ರ ಜನವರಿ 1ರ ವರೆಗೆ 10 ದಿನಗಳು, 2025ರ ಜನವರಿ 16 ರಿಂದ 2025ರ ಜನವರಿ 25ರ ವರೆಗೆ 10 ದಿನಗಳು, 2025ರ ಫೆಬ್ರವರಿ 9 ರಿಂದ 2025ರ ಫೆಬ್ರವರಿ 18ರ ವರೆಗೆ 10 ದಿನಗಳು, 2025ರ ಮಾರ್ಚ್ 5 ರಿಂದ 2025ರ ಮಾರ್ಚ್ 14ರ ವರೆಗೆ 10 ದಿನಗಳು, ಒಟ್ಟು 40 ದಿನಗಳು ಕಾಲುವೆ ಬಂದ ಇರಲಿದೆ.

2024-25ನೇ ಸಾಲಿನ ಹಿಂಗಾರು ಹಂಗಾಮಿಗಾಗಿ ನೀರನ್ನು ಪ್ರಾರಂಭಿಸಲಾಗುವ 2024ರ ಡಿಸೆಂಬರ್ 9 ಮುಂಚಿತವಾಗಿಯೇ ಜೆ.ಬಿ.ಸಿ. ವೃತ್ತದಡಿಯಲ್ಲಿ ಬರುವ ಶಹಾಪೂರ ಶಾಖಾ ಕಾಲುವೆ, ಜೇವರ್ಗಿ ಶಾಖಾ ಕಾಲುವೆ ಹಾಗೂ ಮುಡಬಾಳ ಶಾಖಾ ಕಾಲುವೆಗಳ ಅಡಿಯಲ್ಲಿನ ಕಾಲುವೆ ಅಚ್ಚುಕಟ್ಟು ಪ್ರದೇಶದಲ್ಲಿ ಬಿತ್ತನೆ ಕಾರ್ಯವನ್ನು ಕೈಗೊಳ್ಳಲು ರೈತರಲ್ಲಿ  ವಿನಂತಿಸಲಾಗಿದೆ.

ಅಚ್ಚುಕಟ್ಟು ಕ್ಷೇತ್ರದ ರೈತ ಬಾಂಧವರು ಲಘು ನೀರಾವರಿ ಬೆಳೆಗಳನ್ನು ಮಾತ್ರ ಬೆಳೆಯಲು ವಿನಂತಿಸಲಾಗಿದೆ. ಕಬ್ಬು, ಬಾಳೆ ಹಾಗೂ ಭತ್ತ ಬೆಳೆಗಳನ್ನು ನೀರಾವರಿ ಆಶ್ರಯದಲ್ಲಿ ಬೆಳೆಯುವುದನ್ನು ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!