ವಿದೇಶಗಳಿಂದ ಯೋಗ ಮಾರ್ಗದರ್ಶಕರ ಆಗಮನ | ಶಿಬಿರದ ಲಾಭ ಪಡೆಯಲು ಮನವಿ
ಯಾದಗಿರಿ: ಜಿಲ್ಲೆಯ ಜನರು ಸೇರಿದಂತೆಯೇ ಸಮಸ್ತ ಸಾರ್ವಜನಿಕರ ದೈಹಿಕ, ಮಾನಸಿಕ ,ಸಾಮಾಜಿಕ ಮತ್ತು ಆಧ್ಯಾತ್ಮಿಕ ಆರೋಗ್ಯದ ದೃಷ್ಟಿಯಿಂದ ಡಿ.18 ಮತ್ತು 19 ರಂದು ಸಹಜ ಯೋಗ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕ ಅಯ್ಯಣ್ಣಗೌಡ ಬನ್ನಿಬಸವ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.18ರ ಸಂಜೆ 5 ಕ್ಕೆ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಶಿಬಿರ ನಡೆಯಲಿದೆ. ಇದಕ್ಕೂ ಮುಂಚೆ ಹಳೆ ಡಿಸಿ ಕಚೇರಿ ಯಿಂದ ನೇತಾಜಿ ಸರ್ಕಲ್ ಮಾರ್ಗವಾಗಿ ಕ್ರೀಡಾಂಗಣ ದವರೆಗೆ ಜಾಗೃತಿ ಅರಿವು ಜಾಥಾ ನಡೆಯಲಿದೆ.
ಡಿ.19 ರಂದು ಸಂಜೆ 5 ಕ್ಕೆ ಹುಣಸಗಿಯ ಯುಕೆಪಿ ಕ್ಯಾಂಪ್ ಬಳಿ ಇರುವ ನೀಲಕಂಠೇಶ್ವರ ದೇವಸ್ಥಾನ ದ ಮೈದಾನದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಈ ಎರಡು ದಿನಗಳ ಭವ್ಯ ಕಾರ್ಯಕ್ರಮಕ್ಕೆ 12 ದೇಶ ಗಳಿಂದ 61 ಜನ ವಿದೇಶಿ ಯೋಗ ಮಾರ್ಗದರ್ಶಿ ಗಳು ಹಾಗೂ ಬೆಂಗಳೂರು, ಮುಂಬೈ ನಗರದಿಂದ ಅನೇಕ ಯೋಗ ಸಂಗೀತ ಶಿಬಿರಾರ್ಥಿಗಳು ಆಗಮಿಸಲಿದ್ದಾರೆ.
ಎರಡು ದಿನಗಳ ಕಾಲ ಸಹಜ ಯೋಗದ ಧ್ಯಾನ ಪದ್ಧತಿ ಮತ್ತು ಸಂಗೀತ (ಭಜನೆ) ಕಾರ್ಯಕ್ರಮ ನಡೆಸಿಕೊಡ ಲಿದ್ದಾರೆ. ಇದರ ಹೊರತು ಜಿಲ್ಲೆಯ ವಿವಿಧಡೆ ಬೆಳಗಿನ ಜಾವ ಸಹಜ ಯೋಗ ಶಿಬಿರಗಳು ನಡೆಯಲಿದೆ.
ಡಿ.18 ಬೆಳಗ್ಗೆ 7ಕ್ಕೆ ಪೊಲೀಸ್ ಸಿಬ್ಬಂದಿಗೆ ಪೊಲೀಸ್ ಮೈದಾನದಲ್ಲಿ ಎಸ್ ಪಿ ಪೃತ್ವಿಕ್ ಶಂಕರ ಸಮ್ಮುಖದಲ್ಲಿ ನಡೆಯಲಿದೆ. ಸರಳ ಜೀವನ, ಮಾನಸಿಕ ನೆಮ್ಮದಿಗಾಗಿ ಈ ಸಹಜ ಯೋಗ ರಾಮಬಾಣದಂತೆಯೇ ಕೆಲಸ ಮಾಡುತ್ತದೆ ಎಂದರು. ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಲಾಭ ಪಡೆಯಬೇಕೆಂದರು.
1970 ರಲ್ಲಿ ಮಾತಾಜಿ ನಿರ್ಮಲಾ ದೇವಿಯವರು ಸ್ವಯಂಪ್ರೇರಿತ, ಸುಲಭ ಮತ್ತು ಪ್ರಾಯೋಗಿಕವಾಗಿ ಕುಂಡಲಿನಿ ಜಾಗೃತಿಯ ವಿಧಾನವನ್ನು ಕಂಡು ಹಿಡಿದು ಆರಂಭಿಸಿದ್ದಾರೆ. ಈಗ ಇದು ಭಾರತ ಸೇರಿದಂತೆಯೆ ಜಗತ್ತಿನ 130 ದೇಶಗಳಲ್ಲಿ ಕೋಟ್ಯಾಂತರ ಜನರಿಗೆ ಹೇಳಿಕೊಡುವ ಮೂಲಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಪತ್ರಕರ್ತರ ವೆಂಕಟಗಿರಿ ದೇಶಪಾಂಡೆ ತಿಳಿಸಿದರು.
ಧ್ಯಾನ ಮತ್ತು ಸಂಗೀತದ ಸಮಾಗಮ ಆತ್ಮಾನಂದ ದೊಂದಿಗೆ ಜನರ ಆರೋಗ್ಯ ಕಾಪಾಡುವಲ್ಲಿ ಕೆಲಸ ಮಾಡುತ್ತಿದೆ ಎಂದು ನಿಂಗಣ್ಣಗೌಡ ಪಾಟೀಲ್ ಹೇಳಿದರು.
ದೇಶ, ವಿದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಜ ಯೋಗ ಕೇಂದ್ರವನ್ನು ಯಾದಗಿರಿ ಸೇರಿದಂತೆ ಬೇರೆ, ಬೇರೆ ಜಿಲ್ಲೆಗಳಲ್ಲಿ ಬರುವ ದಿನಗಳಲ್ಲಿ ಸ್ಥಾಪಿಸಲಾಗು ವುದೆಂದು ಮುಂಬೈನ ಮೋಹನ್ ಹೇಳಿದರು. ಅಮರಯ್ಯ ಸ್ವಾಮಿ ಜಾಲಿಬೆಂಚಿ, ಆನಂದ ಬಾರಿಗಿಡದ ಇತರರಿದ್ದರು.