ರೈತ ಬೆಳೆದ ಫಲಹಾರ ಸೇವಿಸಿ ವಿಶಿಷ್ಟ ರೀತಿಯಲ್ಲಿ 2025 ನ್ನು ಸ್ವಾಗತ | ಹಣ್ಣು ಹಂಪಲು, ತರಕಾರಿ ಸೇವಿಸಿ ವಿನೂತನ ಹೊಸವರ್ಷ ಆಚರಿಸಿದ, ಉಮೇಶ ಕೆ. ಮುದ್ನಾಳ
ಯಾದಗಿರಿ: ಜಿಲ್ಲಾ ಟೋಕರಿ ಕೋಲಿ (ಕಬ್ಬಲಿಗ) ಸಮಾಜದ ಜಿಲ್ಲಾ ಕೇಂದ್ರ ಕಾರ್ಯಾಲಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ರೈತ ಬೆಳೆದ ಹಣ್ಣು ಹಂಪಲು, ತರಕಾರಿ ಮತ್ತು ಕಬ್ಬಿನ ಹಾಲು ಸೇವಿಸುವ ಮೂಲಕ ವಿನೂತನವಾಗಿ 2025 ಕ್ಯಾಲೆಂಡರ್ ಹೊಸ ವರ್ಷವನ್ನು ಆಚರಿಸಲಾಯಿತು.
ನಗರದ ಸ್ಟೇಷನ್ ಪ್ರದೇಶದಲ್ಲಿರುವ ಕಚೇರಿಯಲ್ಲಿ ಸಮಾಜದ ಬಾಂಧವರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ೨೦೨೫ರ ಹೊಸ ವರ್ಷಆಚರಣೆ ಸಂಭ್ರಮವನ್ನು ಬರಮಾಡಿಕೊಂಡರು.
ಇದೇ ವೇಳೆ ಮಾತನಾಡಿದ ಕರ್ನಾಟಕ ಪ್ರದೇಶಿಕ ಕೋಲಿ ಸಮಾಜ ರಾಜ್ಯಾ ಸಂಘಟನಾ ಕಾರ್ಯದರ್ಶಿ, ಸಾಮಾಜಿಕ ಹೋರಾಟಗಾರ ಉಮೇಶ ಕೆ ಮುದ್ದಾಳ ಅವರು, ಹೊಸ ವರ್ಷವನ್ನು ರೈತ ಬೆಳೆದ ಫಲಾಹಾರ ಸೇವಿಸುವ ಮೂಲಕ ಸ್ವಾಗತಿಸಿದ್ದರು. ಇದರಿಂದ ಆರೋಗ್ಯದಲ್ಲಿ ಯಾವುದೇ ಕೆಟ್ಟ ಪರಿಣಾಮ ಆಗುವುದಿಲ್ಲ. ಒಳ್ಳೆಯ ಬೆಳವಣಿಗೆಗೆ ನಾಂದಿ ಯಾಡಿದಂತೆ ಆಗುತ್ತದೆ ಎಂದರು.
ಈಗಾಗಲೇ ಹೊಸ ವರ್ಷ ಬಂದರೆ ಯುವಕರು ಮದ್ಯ-ಮಾಂಸಗಳ ಸೇವನೆ ಮಾಡಿ ಹೊಸ ವರ್ಷ ಸಂಭ್ರಮಾಚ ರಣೆಯಲ್ಲಿ ತಮ್ಮ ತನವನ್ನೆ ಮರೆತು ಮನಬಂದಂತೆ ನರ್ತಿಸಿ ಮದ್ಯಪಾನ ಸೇವಿಸಿ ಕುಣಿದು ಕುಪ್ಪಳಿಸಿ ಶಿಷ್ಟಾಚಾರಇಲ್ಲದಂತೆ ಆಚರಿಸುವದು ಇದು ಉತ್ತಮ ಬೆಳವಣಿಗೆಯಲ್ಲ ಎಂದು ಹೇಳಿದರು.
ಪಾಶ್ಚಿಮಾತ್ಯ ರಾಷ್ಟ್ರಗಳ ಆಚರಣೆಗಳಿಗೆ ಮನಸೋತು ನಮ್ಮ ಸಂಸ್ಕೃತಿಯನ್ನೇ ಮರೆತು, ನಾವು ಮನಬಂದಂತೆ ವರ್ತಿಸು ವುದು ದೇಶಕ್ಕೆ ಶೋಭೆ ತರುವಂತದ್ದಲ್ಲ. ಇಂದಿನ ಕೆಲವು ಯುವ ಜನತೆ ಹಿರಿಯರು, ಕಿರಿಯರು ಹೊಸ ವರ್ಷ ಸಂಭ್ರಮಾಚರಣೆ ಯಲ್ಲಿ ವಿಪರೀತ ಕುಡಿದು ಮುಖ್ಯ ರಸ್ತೆಗಳಲ್ಲಿ ಕುಣಿಯುತ್ತಿರು ವುದು ಸರ್ವೆ ಸಾಮಾನ್ಯವಾಗಿದೆ. ಇದನ್ನು ರದ್ದುಗೊಳಿಸಬೇಕು ಎಂದರು.
ನಮ್ಮ ಭಾರತದ ಪರಂಪರೆ ಬಿಂಬಿಸುವಂತೆ ಬಡ ರೈತರು ಬೆಳೆದಿರುವ ಕಲ್ಲಂಗಡಿ, ನೆಲಕಟ್ಟು, ತರಕಾರಿ, ಹಣ್ಣು ಹಂಪಲುಗಳು ಸೇವಿಸಿ ಕುಟುಂಬ ಸಮೇತ ಸುಖ ಶಾಂತಿ ನೆಮ್ಮದಿಯಿಂದ ಹರ್ಷಪಟ್ಟು ಹೊಸ ವರ್ಷವನ್ನು ವಿನೂತನವಾಗಿ ಸ್ವಾಗತಿಸುವುದು ಬಹಳ ಒಳ್ಳೆಯದು. ಇವುಗಳಿಂದ ರೋಗಿ ಕೂಡ ನಿರೋಗಿಯಾಗುತ್ತಾನೆ. ಇದರಿಂದ ಮಕ್ಕಳಿಗೂ, ವೃದ್ಧರಿಗೂ, ಸ್ತ್ರೀಯರಿಗೂ ಹಾಗೂ ಎಲ್ಲಾರಿಗೂ ಒಳ್ಳೆಯದೆ ಆಗುವುದೆಂದು ಹೇಳಿದರು.
ತೀವ್ರ ಅತಿವೃಷ್ಠಿ ಇಂದಿನ ದಿನಗಳಲ್ಲಿ ರೈತನು ಬೆಳೆದ ನೆಲಕಬ್ಬು ಕಲ್ಲಂಗಡಿ, ತರಕಾರಿಗಳು ಬಳಸಿ ಹಬ್ಬ ಆಚರಣೆ ಮಾಡುವುದ ರಿಂದ ರೈತರಿಗೆ ನೆರವಾದಂತೆ ಆಗುತ್ತದೆ ಈ ರೀತಿಯಾಗಿ ಹೊಸ ವರ್ಷ ಆಚರಣೆ ಮಾಡಬೇಕೆಂದು ಹೇಳಿದರು.
ಇದೇ ಸಂಧರ್ಬದಲ್ಲಿ ಲಕ್ಷ್ಮಣ, ಹಣಮಂತ, ನರಸಿಂಲೂ, ವಿಶ್ವಾನಾಥ, ಆಂಜನೇಯ, ರಫಿಕ್ ಪಟೇಲ್, ನಾರಾಯಣ, ಬಾಬಖಾನ್, ಮಹೇಶ, ರಾಜು, ಪ್ರಭು, ಹಣಮಯ್ಯ, ಸಾಬಯ್ಯ, ಮಲ್ಲಯ್ಯ, ಮಹೇಶ, ಹುಸೇನ್, ಈಶಪ್ಪ, ಆಶಪ್ಪ ಚಂಧ್ರು, ರವಿ, ರಾಮು, ತಾಯಪ್ಪ, ಆನಂದ, ಶಿವಶರಣಪ್ಪಮ, ಸಾಬಯ್ಯ, ನೈಯಮ್‌ಶೇಟ್, ಗುಲಾಮನಬಿ, ಗಣೇಶ, ಮಲ್ಲಣ್ಣಗೌಡ, ಬಸವರಾಜ, ಬನಶಂಕರ, ಮಹೇಶ, ಹುಸೇನ್ ಪಟೇಲ್, ಬಾಬಾಅಜೀಜ್, ಮುತ್ತುರಾಜ ನರಸಿಂಲೂ ಇನ್ನಿತರರಿದ್ದರು.