ಯಾದಗಿರಿ : ಐ.ಟಿ.ಐ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೆ ಶಿಶಿಕ್ಷು ತರಬೇತಿ ಆಯ್ಕೆಗಾಗಿ ಸಂದರ್ಶನ ಏರ್ಪಡಿಸಲಾಗಿದೆ ಎಂದು ಯಾದಗಿರಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಪ್ರಾದೇಶಿಕ ಕಾರ್ಯಾಗಾರ ಕಾರ್ಯ ವ್ಯವಸ್ಥಾಪಕರು ತಿಳಿಸಿದ್ದಾರೆ.
ಭಾರತ ಸರ್ಕಾರದ ಗೆಜೆಟ್ ಸಂಖ್ಯೆ 561 ದಿನಾಂಕ 25-09-2019ರ ನಿರ್ದೇಶನದಂತೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಪ್ರಾದೇಶಿಕ ಕಾರ್ಯಾಗಾರದಲ್ಲಿ ಐ.ಟಿ.ಐ ವಿದ್ಯಾರ್ಹತೆಯನ್ನು ಹೊಂದಿದ ಅರ್ಹ ಅಭ್ಯರ್ಥಿಗಳಿಂದ ಐ.ಟಿ.ಐನಲ್ಲಿ ಮೆಕ್ಯಾನಿಕ್ ಡಿಸೇಲ್, ಮೆಕ್ಯಾನಿಕಲ್ ಮೋಟಾರ್ ವಹಿಕಲ್, ಫಿಟ್ಟರ್, ಆಟೋ ಎಲೆಕ್ಟ್ರಿಕಲ್ ಹಾಗೂ ವೆಲ್ಡರ್ ವೃತ್ತಿಯಲ್ಲಿ ಉತ್ತೀರ್ಣರಾದ 10 ಅಭ್ಯರ್ಥಿಗಳನ್ನು ಶಿಶಿಕ್ಷು ತರಬೇತಿಗಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು, ಅರ್ಜಿಸಲ್ಲಿಸುವ ಅಭ್ಯರ್ಥಿಗಳು 18 ವರ್ಷ ಮೇಲ್ಪಟ್ಟಿರಬೇಕು, ಹಾಗೂ 30 ವರ್ಷ ಒಳಗಿರಬೇಕು.
ಅಭ್ಯರ್ಥಿಗಳುwww.apprenticeship.gov.inಪೋರ್ಟಲ್‌ಗೆ ಹೋಗಿ Candidate Registration ರಲ್ಲಿ ಅವರ ವಿವರವಾದ ಮಾಹಿತಿಯನ್ನು ಆನ್‌ಲೈನ್ ನೋಂದಣಿಯೊಂದಿಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿಸಲ್ಲಿಸಬೇಕು. 2024ರ ನವೆಂಬರ್ 6 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯ ವರೆಗೆ ಜರುಗುವ ನೇರ ಸಂದರ್ಶನಕ್ಕೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಪ್ರಾದೇಶಿಕ ಕಾರ್ಯಾಗಾರ, ಯಾದಗಿರಿ ಆಡಳಿತ ಕಛೇರಿಯಲ್ಲಿ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ.7760992031, 9449436403ಗೆ ಸಂಪರ್ಕಿಸಬಹುದು.