ಕನ್ನಡಾಂಬೆ ಮಕ್ಕಳ ವಿಜೃಂಭಣೆಯ ರಾಜ್ಯೋತ್ಸವ
ಯಾದಗಿರಿ: ಕನ್ನಡ ರಾಜ್ಯೋತ್ಸವ ಹಿನ್ನೆಲೆ ಜಯ ಕರ್ನಾಟಕ ಸಂಘಟನೆ ಜಿಲ್ಲಾ ಕಾರ್ಯಾಲಯದಲ್ಲಿ ಧ್ವಜಾರೋಹಣ ನೆರವೇರಿತು.
ಜಿಲ್ಲಾಧ್ಯಕ್ಷರಾದ ಬಿ,ಎನ್, ವಿಶ್ವನಾಥ ನಾಯಕ ಮಾತನಾಡಿ, ನಾವೆಲ್ಲ ಕನ್ನಡಾಂಬೆಯ ಮಕ್ಕಳು ಇದು ನಮ್ಮ ಸಂಘಟನೆಯವರು ಮಾಡುವ ಕೆಲಸ ಅಷ್ಟೇ ಅಲ್ಲ. ಎಲ್ಲಾ ಕನ್ನಡಿಗರು ಅತಿ ವಿಜೃಂಭಣೆಯಿಂದ ಆಚರಿಸುವ ಹಬ್ಬವಾಗಿದ್ದು ನಾವೆಲ್ಲರೂ ಕನ್ನಡ ನಾಡು ನುಡಿ ನೆಲ ಜಲ ಭಾಷೆಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕು ಎಂದರು.
ಸಾವಿರಾರು ವರ್ಷಗಳ ಇತಿಹಾಸವಿರುವ ನಮ್ಮ ಕನ್ನಡ ಸಂಸ್ಕೃತಿಯನ್ನು ಚಾಚೂ ತಪ್ಪದೇ ಬೆಳೆಸಿಕೊಂಡು ಹೋಗಬೇಕು ಅನ್ಯ ಭಾಷೆಗಳ ಹಾವಳಿ ತಡೆಯಲು ಪ್ರತಿಯೊಬ್ಬರೂ ಕನ್ನಡಲ್ಲೇ ಮಾತನಾಡಬೇಕು ಎಂದು ಕರೆ ನೀಡಿದರು.
ನವಂಬರ್ 24 ರಂದು ನಮ್ಮ ಜಯ ಕರ್ನಾಟಕ ಸಂಘಟನೆ ವತಿಯಿಂದ ಜಿಲ್ಲೆಯಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ವಿಜಯಕುಮಾರ ಮದ್ದಂಪುರ್, ಶಿವರಾಜ್ , ನಾಗರಾಜ್ ರಾಮಸಮುದ್ರ, ನಾಗೇಶ್ ಗದಗಿ, ನಾಗಪ್ಪ ವನಿಗೇರಾ, ಮಾರುತಿ ಮುದ್ನಾಳ್, ಸಂತೋಷ್ ಕಲಾಲ್, ಜಾನಿ ಅಡಿವಪ್ಪ ರಾಮಸಂದ್ರ, ನಾಗಪ್ಪ ಶೆಟ್ಟಿಗೆರೆ ಇತರರು ಇದ್ದರು.