ಯಾದಗಿರಿ: ನಗರ ಪೊಲೀಸ್ ಠಾಣೆಯನ್ನು ಸಬ್ ಇನ್ಸಪೆಕ್ಟರ್ ಹುದ್ದೆಯ ಮೇಲೆ ನಿರ್ವಹಣೆ ಮಾಡುತ್ತಿರುವುದು, ತಕ್ಷಣ ಕೇಂದ್ರ ಸ್ಥಾನದ ಠಾಣೆಗೆ ಪಿ.ಐ. ಹುದ್ದೆಯನ್ನು ಮಂಜೂರು ಮಾಡುವಂತೆ ಸಾಮಾಜಿಕ ಹೋರಾಟಗಾರ ಭೀಮು ಪೂಜಾರಿ ಆಗ್ರಹಿಸಿದರು.

ನಗರಕ್ಕೆ ಆಗಮಿಸಿದ್ದ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರಿಗೆ ಮನವಿ ಸಲ್ಲಿಸಿದ ಅವರು, ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಪಿ.ಎಸ್.ಐ. ಹುದ್ದೆಯಿಂದ ಠಾಣೆ ನಡೆಸಲಾ ಗುತ್ತಿದೆ. ಗುರುಮಠಕಲ್, ಸೈದಾ ಪೂರ, ಶಹಾಪೂರ, ಸುರಪುರ ಠಾಣೆಗಳು ಪಿ.ಐ. ಹುದ್ದೆಯಿಂದ ನಿರ್ವಹಣೆ ಮಾಡಲಾಗುತ್ತಿದೆ.

ಇದೇ ರೀತಿಯಲ್ಲಿ ತಕ್ಷಣ ನಗರ ಠಾಣೆಯ ಹುದ್ದೆಯನ್ನು ಮೇಲ್ದರ್ಜೆಗೇರಿಸಬೇಕು ಮತ್ತು ಹೆಚ್ಚಿನ ಸಿಬ್ಬಂದಿಗಳನ್ನು ನೇಮಿಸಿ, ಕೇಂದ್ರ ಸ್ಥಾನದ ಕಾನೂನು ಸುವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿ ಸಲು ಆಗುವಂತೆ ಕ್ರಮ ಕೈಗೊಳ್ಳಬೇಕೆಂದು ಸಚಿವ ರನ್ನು ಒತ್ತಾಯಿಸಿದರು.

ನಗರ ಪೊಲೀಸ್ ಠಾಣೆಯಲ್ಲಿ ಈಗ ಸದ್ಯ 78 ಜನ ಸಿಬ್ಬಂದಿಗಳು ಮಾತ್ರ ಇದ್ದು, ಸುಮಾರು 150 ಕ್ಕೂ ಹೆಚ್ಚು ಸಿಬ್ಬಂದಿಗಳ ಅವಶ್ಯಕ ತೆ ಇರುತ್ತದೆ. ಯಾದಗಿರಿ ಜಿಲ್ಲಾ ಕೇಂದ್ರವಾಗಿದ್ದು, ಜಿಲ್ಲೆಯಲ್ಲಿ ಹೆಚ್ಚಿನ ಸಿಬ್ಬಂದಿಗಳ ಕೊರತೆ ಇರುತ್ತದೆ. ಕಳೆದ 14 ವರ್ಷದಿಂದ ಕಡಿಮೆ ಸಿಬ್ಬಂದಿಗಳೇ ಕೆಲಸ ನಿರ್ವಹಿಸುತ್ತಿದ್ದು, ಇದರಿಂದ ಜಿಲ್ಲೆಯಲ್ಲಿನ ಅಕ್ರಮಗಳ ತಡೆಗೆ ಪೊಲೀಸರಿಗೆ ಕಷ್ಟವಾಗುತ್ತಿದೆ.

ಯಾದಗಿರಿ ನಗರ ವಿಸ್ತಾರಗೊಳ್ಳುತ್ತಿರುವುದರಿಂದ ಸ್ಟೇಷನ್ ಏರಿಯಾದಲ್ಲಿ ಒಂದು ಪೊಲೀಸ್ ಠಾಣೆ ತೆರೆದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸಚಿವರಿಗೆ ಒತ್ತಾಯಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!