ಯಾದಗಿರಿ ಜಿಲ್ಲಾಡಳಿತ ಭವನದಲ್ಲಿ ಸಿರಿಧಾನ್ಯ ಸ್ಪರ್ಧೆ|ಸಿರಿಧಾನ್ಯ ಸೇವನೆಯಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ

ಯಾದಗಿರಿ: ಸಿರಿಧಾನ್ಯ ಸೇವನೆಯಿಂದ ಗುಣವಾಗದ ಕಾಯಿಲೆಗಳನ್ನೂ ಗುಣ ಪಡಿಸಬಹುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣ ಅಧಿಕಾರಿಗಳಾದ ಡಾ.ಲವೀಶ್ ಒರಡಿಯಾ ಅವರು ಹೇಳಿದರು.

ಕೃಷಿ ಇಲಾಖೆಯಿಂದ ನಗರದ ಜಿಲ್ಲಾ ಪಂಚಾಯತ್ ಸಭಾಂಗಣ ದಲ್ಲಿ ಇಂದು ಸಿರಿಧಾನ್ಯ ಹಾಗೂ ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ಅಂಗವಾಗಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯ ಸ್ಪರ್ಧೆ ಹಾಗೂ ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ಸಿರಿಧಾನ್ಯ ಸೇವನೆಯಿಂದ ಗುಣವಾಗದ ಕಾಯಿಲೆಗಳು ಗುಣ ಪಡಿಸಬಹುದು. ಪೌಷ್ಟಿಕ ಆಹಾರ ಹೊಂದಿರುವ ಸಿರಿಧಾನ್ಯ ಗಳನ್ನು ಎಲ್ಲರೂ ದಿನನಿತ್ಯ ಸೇವನೆ ಮಾಡಿ ಆರೋಗ್ಯ ಕಾಪಾಡಿ ಕೊಳ್ಳಬೇಕು ಎಂದು ತಿಳಿಸಿದರು.

ಸ್ಪರ್ಧೆಗಳಲ್ಲಿ ಗೆಲುವು ಸೋಲು ಇದ್ದೇ ಇರುತ್ತದೆ. ಇನ್ನು ಇಂತಹ ಕಾರ್ಯಕ್ರಮ ಹೆಚ್ಚು ಆಗಬೇಕು. ಇದರಿಂದ ಆರೋಗ್ಯಕರ ಆಹಾರ ಕ್ಕೂ ಉತ್ತೇಜನ ದೊರೆಯಲಿದೆ ಎಂದು ಹೇಳಿ ಸಿರಿಧಾನ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಾಳುಗಳಿಗೆ ಪ್ರೋತ್ಸಾಹ ನೀಡುವಂತೆ ಸಲಹೆ ನೀಡಿದರು.

ಇಂದಿನ ದಿನಗಳಲ್ಲಿ ಸಿರಿಧಾನ್ಯಗಳಲ್ಲಿ ಅಡಗಿರುವ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಹೆಚ್ಚಿನವರಿಗೆ ಗೊತ್ತಾಗಬೇಕಿದೆ. ಇದರಲ್ಲಿ ರುವ ಹಲವು ಬಗೆಯ ಆರೋಗ್ಯಕಾರಿ ಅಂಶಗಳು, ರೋಗ – ರುಜಿನಗಳನ್ನು ದೂರವಿಡುವುದು ಮಾತ್ರವಲ್ಲದೆ, ದೀರ್ಘಕಾಲದ ಕಾಯಿಲೆಗಳಿಂದ ಕೂಡ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ.

ಸರಿಸುಮಾರು 20- 25 ವರ್ಷಗಳ ಹಿಂದೆ, ನಮ್ಮ ಹಳ್ಳಿಗಳಲ್ಲಿ ವಾರಕ್ಕೆ ಒಮ್ಮೆ ನಡೆಯುವ ತರಕಾರಿ ಹಾಗೂ ದಿನಸಿ ಸಾಮಗ್ರಿಗಳನ್ನು ಮಾರಾಟ ಮಾಡುವ ಸಂತೆಗಳಲ್ಲಿ ಅಲ್ಲಲ್ಲಿ ವಿಭಿನ್ನ ಬಗೆಯ ಸಿರಿ ಧಾನ್ಯಗಳು ರಾಶಿ-ರಾಶಿಯೇ ಕಾಣಲು ಸಿಗುತ್ತಿತ್ತು. ಇದರ ಮಾರಾಟ ಕೂಡ ಅಷ್ಟೇ ಜೋರಾಗಿ ನಡೆಯುತ್ತಿತ್ತು.

ಆದರೆ ಕಾಲ ಬದಲಾಗಿ ಹಿಂದಿನ ಕಾಲದಲ್ಲಿ ಹೇರಳವಾಗಿ ಎಲ್ಲಾ ಕಡೆ ಲಭ್ಯವಿದ್ದ ಈ ಆರೋಗ್ಯ ಭರಿತ ಸಿರಿಧಾನ್ಯಗಳು, ಇತ್ತೀಚಿನ ದಿನಗಳಲ್ಲಿ ಕಣ್ಮರೆ ಆಗಿರುವುದು ನಿಜಕ್ಕೂ ವಿಷಾದನೀಯ ಸಂಗತಿ ಎಂದು ಹೇಳಿದರು.

ಇಂದು ನಡೆದ ಕಾರ್ಯಕ್ರಮದಲ್ಲಿ ವಿವಿಧ ತಾಲೂಕಿನ ಸ್ಪರ್ಧಾಳುಗಳು ಭಾಗಿಯಾಗಿದ್ದರು. ಒಟ್ಟು 22 ಜನ ಭಾಗವಹಿಸಿ ಸಿರಿ ಧಾನ್ಯಗಳಿಂದ ಮಾಡಿದಂತಹ ಪದಾರ್ಥ ಪ್ರದರ್ಶಿಸಿದರು. ಸಿರಿಧಾನ್ಯ ಹಾಗೂ ಸಾವಯವ ಅಂತರಾಷ್ಟ್ರೀಯ ಮೇಳ 2025 ರ ಈ ಸ್ಪರ್ಧೆಯಲ್ಲಿ 9 ಜನ ಸ್ಪರ್ಧಾಳುಗಳನ್ನು ವಿಜೇತರನ್ನಾಗಿ ಘೋಷಿಸಲಾಯಿತು.

ಸಿರಿಧಾನ್ಯ ಸ್ಪರ್ಧೆಗೆ ತೀರ್ಪುಗಾರರಾಗಿ ಆಗಮಿಸಿದ ಡಾಕ್ಟರ್ ಶಶಿಕಲಾ ರೂಳಿ. ಡಾಕ್ಟರ್ ವಾಣಿಶ್ರೀ. ಹಾಗೂ ಮನುಜಾಕ್ಷಿ ಭಾಗವಹಿಸಿದ ಎಲ್ಲ ಸ್ಪರ್ಧೆಗಳ ಸಿರಿಧಾನ್ಯಗಳಿಂದ ಮಾಡಿದ ಪದಾರ್ಥ ವೀಕ್ಷಣೆ ಮಾಡಿ ತೀರ್ಪು ನೀಡಿದರು.

ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕರು ರವೀಂದ್ರನಾಥ್ ಸೂಗೂರು. ಉಪ ಕೃಷಿ ನಿರ್ದೇಶಕಿ ಮಂಜುಳಾ ಬಸವ ರೆಡ್ಡಿ , ಸ ಹಾಯಕ ಕೃಷಿ ನಿರ್ದೇಶಕರು ರಾಜಕುಮಾರ್, ಸುರೇಶ್. ಬಿ.ಸಹಾಯಕ ಕೃಷಿ ಅಧಿಕಾರಿಗಳು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!