ಜನೆವರಿ 4 ರಂದು ನೇರ ಸಂದರ್ಶನದಲ್ಲಿ ಭಾಗವಹಿಸಿ
ಯಾದಗಿರಿ : ಯಾದಗಿರಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ವತಿಯಿಂದ 2025ರ ಜನವರಿ 4 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ ಎಂದು ಯಾದಗಿರಿ ಉದ್ಯೋಗಾಧಿಕಾರಿ ಪ್ರಭಾಕರ್ ಅವರು ತಿಳಿಸಿದ್ದಾರೆ.
ಗ್ರೂಪ್ ಆಫ್ ಜನಶ್ರೀ ಎಂಟರ್ಪ್ರೆöÊಸಸ್, ಸೇಲ್ಸ್ ಮ್ಯಾನ್ 80 ಹುದ್ದೆಗಳು ಖಾಲಿ ಇದ್ದು ಹುದ್ದೆಗೆ ಅರ್ಹತೆ 7ನೇ/10ನೇ/ಯಾವುದೇ ಪದವಿ ಯಾದಗಿರಿ ಶಹಾಪೂರು ಸುರುಪೂರ ದೇವದುರ್ಗ ಕಲಬುರಗಿ ಸೇಡಂ ಚಿತ್ತಾಪೂರು ಗುರುಮಠಕಲ್ ವಡಗೇರಾ ಹುಣಸಿಗಿ (ತಾವು ಇರುವ ಹತ್ತಿರ ಸ್ಥಳದಲ್ಲಿಯೇ ಕಾರ್ಯ ನಿರ್ವಹಿಸಲು ಅನುಕೂಲವಿದೆ) ಉದ್ಯೋಗ ಸ್ಥಳವಾಗಿದೆ.
ವಯೋಮಿತಿ 18 ರಿಂದ 35 ವರ್ಷ ಒಳಗಿರಬೇಕು, ಪುರುಷ ಮತ್ತು ಮಹಿಳೆ ಭಾಗವಹಿಸಬಹುದಾಗಿದೆ. 02) ಅನ್ನಪೂರ್ಣ ಫೈನಾನ್ಸ್ ಪ್ರೆöÊ.ಲಿ., (ಆ) ಫೀಲ್ಡ್ ಕ್ರೇಡಿಟ್ ಆಫೀಸರ್ 20 ಹುದ್ದೆ ಗಳು ಖಾಲಿ ಇದ್ದು, ಹುದ್ದೆಗೆ ಅರ್ಹತೆ 12ನೇ ಪಾಸ್. ಪುರುಷ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ.
ವಯೋಮಿತಿ 18 ರಿಂದ 30 ವರ್ಷ (ಆ) ಡೆವಲಪ್ಮೇಂಟ್ ಆಫೀಸರ್ 10 ಹುದ್ದೆಗಳು ಖಾಲಿ ಇದ್ದು ಹುದ್ದೆಗೆ ಅರ್ಹತೆ 12ನೇ ಪಾಸ್. ಪುರುಷ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. 18 ರಿಂದ 30 ವರ್ಷ ಒಳಗಿರಬೇಕು. ಅಸಿಸ್ಟಂಟ್ ಬ್ರಾö್ಯಂಚ್ ಮ್ಯಾನೇಜರ್ 05 ಹುದೆಗಳು ಖಾಲಿ ಇದ್ದು ಹುದ್ದೆಗೆ ಅರ್ಹತೆ ಯಾವುದೇ ಪದವಿ. ಪುರುಷ, ಮಹಿಳಾ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ.
ಯಾದಗಿರಿ, ಕಲಬುರಗಿ, ರಾಯಚೂರು ಜಿಲ್ಲೆಯಾದ್ಯಂತ ಉದ್ಯೋಗ ಸ್ಥಳವಾಗಿದೆ. 21 ರಿಂದ 34 ವರ್ಷ. ಒಳಗಿರಬೇಕು, ಬೈಕ್ ಮತ್ತು ಡಿ.ಎಲ್. ಕಡ್ಡಾಯ. ಮತ್ತು ಅವಕಾಶ ವಂಚಿತ ನಿರುದ್ಯೋಗಿ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ. ಈ ನೇರ ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳು ತಮ್ಮ ದಾಖಲಾತಿಗಳೊಂದಿಗೆ ವ್ಯಕ್ತಿ ಪರಿಚಯ ರಿಸ್ಯೂಮ್, ಬಯೋಡಾಟಾದೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗ ಬೇಕು, ನೇರ ಸಂದರ್ಶನಕ್ಕೆ ಹಾಜರಾದ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆ ನೀಡಲಾಗುವುದಿಲ್ಲ.
ನೇರ ಸಂದರ್ಶನ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಚಿತ್ತಾ ಪೂರು ರೋಡ್ (ಮಿನಿ ವಿಧಾನ ಸೌಧ) ಜಿಲ್ಲಾಡಳಿತ ಭವನ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಬಿ-ಬ್ಲಾಕ್ ರೂ.ನಂ. ಬಿ1, ಬಿ2, 2ನೇ, ಮಹಡಿ ಯಾದಗಿರಿ ಇಲ್ಲಿಗೆ ದೂ.ಸಂ.08473 253718, ಮೊ.ನಂ.9448566765ಗೆ ಕಛೇರಿಯ ಸಮ ಯದಲ್ಲಿ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.