ಯಾದಗಿರಿ : ಜಿಲ್ಲಾ ಉದ್ಯೋಗ ವಿನಿಮಯ ಕಛೇರಿದಿಂದ ನೇರ ಸಂದರ್ಶನವನ್ನು ಇದೇ 2024ರ ನವೆಂಬರ್ 27ರ ಬುಧವಾರ ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಉದ್ಯೋಗಾಧಿಕಾರಿ ಪ್ರಭಕಾರ ತಿಳಿಸಿದ್ದಾರೆ.
ಶ್ರೀ ಸಾಯಿ ಆರ್ಥ್ ಮೂರ್ಸ್, (ಅ) ಸರ್ವಿಸ್ ಇಂಜಿನಿಯರ್ ಹುದ್ದೆಗೆ 50 ಹುದ್ದೆ ಖಾಲಿ ಇದ್ದು, ಅರ್ಹತೆ ಐಟಿಐ, ಡಿಪ್ಲೋಮ ಯಾವುದೇ ಟ್ರೇಡ್. (ಆ) ಸೇಲ್ಸ್ ಇಂಜಿನಿಯರ್ 50 ಹುದ್ದೆ ಖಾಲಿ ಇದ್ದು, ಅರ್ಹತೆ ಯಾವುದೇ ಪದವಿ ಯಾದಗಿರಿ, ಶಹಾಪೂರು, ಲಿಂಗಸೂಗುರು, ಸಿಂಧನೂರು, ಬೀದರ್, ವಿಜಯಪೂರ. ಉದ್ಯೋಗ ಸ್ಥಳವಾಗಿದೆ.
ಪುರುಷ ಅಭ್ಯರ್ಥಿಗಳು ಮಾತ್ರ ಭಾಗಹಿಸಬಹುದಾಗಿದೆ. 18 ರಿಂದ 35 ವರ್ಷ ಒಳಗಿರಬೇಕು. (ಇ) ಮಾರ್ಕೇಟಿಂಗ್ ಮ್ಯಾನೇಜರ್ 2 ಹುದ್ದೆ ಖಾಲಿ ಇದ್ದು, ಅರ್ಹತೆ ಎಮ್.ಬಿ.ಎ ಇನ್ ಮಾರ್ಕೆಟಿಂಗ್, 2 ರಿಂದ 3 ವರ್ಷ ಅನುಭವ. ಕಲಬುರಗಿ ಉದ್ಯೋಗ ಸ್ಥಳವಾಗಿದೆ. ಪುರುಷ ಅಭ್ಯರ್ಥಿ ಭಾಗವಹಿಸಬಹುದಾಗಿದೆ. 25 ರಿಂದ 35 ವರ್ಷ ಒಳಗಿರಬೇಕು, (ಈ) ಪರ್ಟ್÷್ಸ ಅಸಿಸ್ಟಂಟ್ 2 ಹುದ್ದೆ ಖಾಲಿ ಇದ್ದು, ಅರ್ಹತೆ ಐಟಿಐ, ಡಿಪ್ಲೋಮ, ಯಾವುದೇ ಪದವಿ, ಕಂಪ್ಯೂಟರ್ ಅನುಭವ ಕಡ್ಡಾಯ.
ಯಾದಗಿರಿ ಉದ್ಯೋಗ ಸ್ಥಳವಾಗಿದೆ. ಪುರುಷ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. 20 ರಿಂದ 30 ವರ್ಷ ಒಳಗಿರಬೇಕು, (ಉ) ಬ್ರಾö್ಯಂಚ್ ಮ್ಯಾನೇಜರ್ 1 ಹುದ್ದೆ ಖಾಲಿ ಇದ್ದು, ಅರ್ಹತೆ ಬಿ.ಇ. ಮೇಕ್ಯಾನಕಲ್ 3 ರಿಂದ 4 ವರ್ಷ ಅನುಭವ ಕಡ್ಡಾಯ ಯಾದಗಿರಿ ಉದ್ಯೋಗ ಸ್ಥಳವಾಗಿದೆ, ಪುರುಷ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ, 25 ರಿಂದ 35 ವರ್ಷ ಒಳಗಿರಬೇಕು.
ಕಲ್ಟಿವ ಫೀನ್ ಇನ್ಕೂ ಸರ್ವಿಸ್ ಪ್ರೈ.ಲಿ. (ಅ) ಬ್ರಾಂಚ್ ಮ್ಯಾನೇಜರ್ 6 ಹುದ್ದೆ ಖಾಲಿ ಇದ್ದು, ಅರ್ಹತೆ ಯಾವುದೇ ಪದವಿ 2 ರಿಂದ 3 ವರ್ಷ ಅನುಭವ ಕಡ್ಡಾಯ, ಪುರುಷ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. 21 ರಿಂದ 35 ವರ್ಷ ಒಳಗಿರಬೇಕು, (ಆ) ಜೂನಿಯರ್ ಫೀಲ್ಡ್ ಅಫೀಸರ್ 25 ಹುದ್ದೆ ಖಾಲಿ ಇದ್ದು, ಅರ್ಹತೆ ಎಸ್.ಎಸ್.ಎಲ್.ಸಿ ಆಗಿರಬೇಕು. (ಸಿ) ಸೀನಿಯರ್ ಫೀಲ್ಡ್ ಅಫೀಸರ್ 25 ಹುದ್ದೆ ಖಾಲಿ ಇದ್ದು, ಅರ್ಹತೆ, ಪಿಯುಸಿ, ಐಟಿಐ, ಡಿಪ್ಲೋಮ ಯಾವುದೇ ಟ್ರೇಡ್, ಶಹಾಪೂರು, ದೇವದುರ್ಗ, ರಾಯಚೂರು, ಸೇಡಂ, ಕಲಬುರಗಿ ಉದ್ಯೋಗ ಸ್ಥಳವಾಗಿದೆ.
18 ರಿಂದ 35 ವರ್ಷ ಒಳಗಿರಬೇಕು, ಪುರುಷ ಮತ್ತು ಮಹಿಳಾ ಭಾಗವಹಿಸಬಹುದಾಗಿದೆ. ಬೈಕ್ ಮತ್ತು ಆ.ಐ. ಕಡ್ಡಾಯ. ಅವಕಾಶ ವಂಚಿತ ನಿರುದ್ಯೋಗಿ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ. ನೇರ ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳು ತಮ್ಮ ದಾಖಲಾತಿಗಳೊಂದಿಗೆ ವ್ಯಕ್ತಿ ಪರಿಚಯ ರಿಸ್ಯೂಮ್, ಬಯೋಡಾಟಾದೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ. ಹಾಗೂ ನೇರ ಸಂದರ್ಶನಕ್ಕೆ ಹಾಜರಾದ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆ ನೀಡಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ನೇರ ಸಂದರ್ಶನ ನಡೆಯುವ ಸ್ಥಳ ಚಿತ್ತಾಪೂರು ರೋಡ್ (ಮಿನಿ ವಿಧಾನ ಸೌಧ) ಜಿಲ್ಲಾಡಳಿತ ಭವನ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಬಿ-ಬ್ಲಾಕ್ ರೂ.ನಂ.ಬಿ1, ಬಿ2 2ನೇ ಮಹಡಿ ಯಾದಗಿರಿ ದೂ.ಸಂ.08473 253718, ಮೊ.ನಂ.9448566765ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.