ಯಾದಗಿರಿ : ಜಿಲ್ಲೆಯ ವ್ಯಾಪ್ತಿಯ ನಕಲಿ ಮದ್ಯ, ಅಕ್ರಮ ಮದ್ಯ, ಕಲಬೆರಕೆ ಸೇಂದಿ, ಕಳ್ಳಭಟ್ಟಿ ಸಾರಾಯಿ ಹಾಗೂ ಇತರೆ ಅಬಕಾರಿ ಅಕ್ರಮ ಪದಾರ್ಥಗಳ ತಯಾರಿಕೆ ಸಾಗಾಣಿಕೆ ಸಂಗ್ರಹಣೆ ಹಾಗೂ ಮಾರಾಟಗಳಂತಹ ಅಕ್ರಮ ಚಟುವಟಿಕೆಗಳು ತಡೆಯಲು ಕ್ರಮವಹಿಸಲಾಗುತ್ತಿದೆ ಎಂದು ಯಾದಗಿರಿ ಅಬಕಾರಿ ಉಪ ಆಯುಕ್ತೆ ಶಾರದಾ ಸಿ.ಕೋಲಕಾರ ತಿಳಿಸಿದ್ದಾರೆ.
ಯಾದಗಿರಿ ತಾಲ್ಲೂಕಿನ ಸೈದಾಪೂರ ಗ್ರಾಮದ ಲಕ್ಷ್ಮೀ ನಗರದಲ್ಲಿರುವ ಲಲಿತಾ ಗಂಡ ಚಂದ್ರು ರಾಠೋಡ ಎಂಬುವವಳ ಮನೆಯ ಮೇಲೆ ದಾಳಿ ನಡೆಸಿ ಮನೆಯಲ್ಲಿ ಸಂಗ್ರಹಿಸಿ ಇಟ್ಟಿದ್ದ 136ಲೀ. ಕಲಬೆರಕೆ ಸೇಂದಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೇಲಾಧಿಕಾರಿಗಳ ನಿರ್ದೇಶನದ ಮೇರೆಗೆ ನ.12 ರಂದು ಮಧ್ಯಾಹ್ನ ಖಚಿತ ಭಾತ್ಮಿಯ ಹಿನ್ನೆಲೆ ಶ್ರೀಶೈಲ್ ಒಡೆಯರ್ ಅಬಕಾರಿ ನಿರೀಕ್ಷಕರು, ಡಿಸಿಇಐಬಿ, ಬಸವರಾಜ ಬಿ.ರಾಜಣ್ಣವರ್ ಅಬಕಾರಿ ಉಪ ನಿರೀಕ್ಷಕರು, ಡಿಸಿಇಐಬಿ, ಅಬಕಾರಿ ಮುಖ್ಯ ಪೇದೆಯಾದ ಅನಿಲ್ ಕುಮಾರ, ಪ್ರವೀಣಕುಮಾರ, ಶೇಖರ ಮೋಹನ, ಮತ್ತು ವಾಹನ ಚಾಲಕ ದೊಂಡಿಬಾ ಜಾಧವ, ಸಿಬ್ಬಂದಿಯೊಂದಿಗೆ ದಾಳಿ ನಡೆಸಿದ್ದರು. ಆರೋಪಿತಳು ಓಡಿ ಪರಾರಿಯಾಗಿದ್ದಾಳೆ ಎಂದು ಅವರು ತಿಳಿಸಿದ್ದಾರೆ.