ಸಾಧಕರಿಗೆ ಗಿರಿನಾಡು ಸೇವಾ ಪ್ರಶಸ್ತಿ | ಹಲವು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ
ಯಾದಗಿರಿ : ನ. 29 ರಂದು ಯಾದಗಿರಿ ನಗರದ ಪಂಪ ಮಹಾಕವಿ ಮಂಟಪದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಗಿರಿನಾಡ ಉತ್ಸವ ಆಚರಿಸಲಾಗುತ್ತಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಟಿ.ಎನ್.ಭೀಮುನಾಯಕ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಸದ್ಗುರು ಶ್ರೀ ವಿಶ್ವಾರಾಧ್ಯರ ಸಿದ್ದ ಸಂಸ್ಥಾನ ಮಠ, ಸುಕ್ಷೇತ್ರ ಅಬ್ಬೆತುಮಕೂರಿನ ಪರಮಪೂಜ್ಯ ಶ್ರೀ ಷ.ಬ್ರ. ಡಾ. ಶ್ರೀ ಗಂಗಾಧರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದು, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪೂರ, ಮಾಜಿ ಸಚಿವರಾದ ನರಸಿಂಹ ನಾಯಕ (ರಾಜುಗೌಡ) ಉದ್ಘಾಟಿಸಲಿದ್ದಾರೆ.
ಮಾನ್ಯ ವಿಧಾನ ಪರಿಷತ್ತು ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಜಿ.ಕುಮಾರ ನಾಯಕ, ರಾಧಾಕೃಷ್ಣ ದೊಡ್ಡಮನಿ, ಶಾಸಕರಾದ ಚನ್ನಾರೆಡ್ಡಿ ಪಾಟೀಲ ತುನ್ನೂರ, ಶರಣಗೌಡ ಕಂದಕೂರು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಕನ್ನಡಾಂಭೆ ಪೂಜೆಯನ್ನು ಡಿ.ಎಸ್.ಮ್ಯಾಕ್ಸ್ ಪ್ರಾಪರ್ಟಿಸ್, ಬೆಂಗಳೂರಿನ ಡಾ. ಎಸ್.ಪಿ. ದಯಾನಂದ ಯಾದಗಿರಿ ಜಿಲ್ಲಾಧಿಕಾರಿ ಡಾ. ಸುಶೀಲ ಬಿ. (ಭಾ.ಆ.ಸೇ.), ವಿಶೇಷ ಆಹ್ವಾನಿತರಾಗಿ ಪ್ರಥಮ ದರ್ಜೆ ಗುತ್ತೇದಾರರು ಹಣಮೇಗೌಡ ಬಿರನಕಲ್, ಜೈವಿಕ ಇಂಧನ ನಿಗಮ ಮಂಡಳಿ ಮಾಜಿ ಅಧ್ಯಕ್ಷರಾದ ಬಸವರಾಜ ರಾಮನಾಳ, ಅರೆಅಲೆಮಾರಿ ನಿಗಮ ಮಂಡಳಿ, ಮಾಜಿ ಅಧ್ಯಕ್ಷ ದೇವಿಂದ್ರನಾಥ್ ಕೆ. ನಾದ ಮಾಜಿ ಹಿಂದುಳಿದ ವರ್ಗಗಳ ಆಯೋಗ ಸದ್ಯಸ ಶರಣಪ್ಪ ಮಾನೆಗಾರ ಯರಗೋಳ, ನಗರಸಭೆ ಅಧ್ಯಕ್ಷ ಕು. ಲಲಿತಾ ಅನಪೂರ, ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ವಿನಾಯಕ ಮಾಲಿಪಾಟೀಲ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ, ಸಂತೋಷ ಪಾಟೀಲ ಡಂಬಳ, ರಾಚಣ್ಣಗೌಡ ಮುದ್ನಾಳ, ಚನ್ನುಗೌಡ ಬಿಳ್ಹಾರ, ಬಿ. ಎಂ. ಹಳ್ಳಿಕೋಟೆ, ಮಲ್ಲಿಕಾರ್ಜುನ ಅಮ್ಮಾಪೂರ, ಮರಿಲಿಂಗಪ್ಪ ನಾಯಕ ಕರ್ನಾಳ, ಅನೀಲಕುಮಾರ ಹೆಡಗಿಮದ್ರಾ, ಚಂದ್ರಾಯಗೌಡ ಗೋಗಿ, ಸುದರ್ಶನ ನಾಯಕ, ರಾಜಶೇಖರಗೌಡ ವಡಗೇರಾ, ವಿಶ್ವನಾಥರೆಡ್ಡಿ ಗೊಂದಡಗಿ, ವಿಕಾಸ್ ಶಿಂಧೆ, ಚಂದ್ರುಗೌಡ ಸೈದಾಪೂರ, ನರೇಂದ್ರ ರಾಠೋಡ್, ಮಹಾರಾಜ ದಿಗ್ಗಿ, ಅಜೀಜ್ ಸೇನ್, ಜಹೀರ ಸವೇರಾ, ಹಣಮಂತ ನಾಯಕ, ಮಹೇಶ ಆವಂಟಿ, ವಿಜಯಕುಮಾರ ಕಡೇಚೂರ ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸ.ರಿ.ಗ.ಮ.ಪ. ಜೀ ಕನ್ನಡ ಕಲಾವಿದರಾದ ಖಾಸೀಂ, ನಯನ, ಮಹನ್ಯ, ಕವಿತಾ, ಇವರಿಂದ ಸಂಗೀತಾ ರಸಮಂಜರಿ ಹಾಗೂ ಕಾಮಿಡಿ ಕಿಲಾಡಿಗಳಾದ ರಾಕೇಶ್, ಪ್ರವೀಣ, ದೀಪಿಕಾ, ರವರಿಂದ ನಗೆಹಬ್ಬ ನಡೆಸಿಕೊಡಲಾಗುವುದು ಎಂದು ತಿಳಿಸಿದರು.
ಗಿರಿನಾಡು ಸೇವಾ ಪ್ರಶಸ್ತಿ : ಬಸವರಾಜ ಮಹಾಮನಿ – ಕಲಾ ಕ್ಷೇತ್ರ, ವೈಜನಾಥ ಹೀರೆಮಠ – ಮಾಧ್ಯಮ ಕ್ಷೇತ್ರ, ಮಲ್ಲಿಕಾರ್ಜುನ ಕ್ರಾಂತಿ ಸುರಪುರ – ಸಾಮಾಜಿಕ ಹೋರಾಟಗಾರ, ಬಸ್ಸಪ್ಪ ಭೀಮಣ್ಣ ಭಂಗಿ ಹಳಿಗೇರಾ – ನಾಟಿ ಔಷಧಿ, ಅರುಣ ಬಾಬು ಶಹಾಪುರ – ಕ್ರೀಡಾ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಸುದ್ಧಿಗೋಷ್ಠಿಯಲ್ಲಿ ಸಿದ್ದುನಾಯಕ ಹತ್ತಿಕುಣಿ, ಸಂತೋಷ ನಿರ್ಮಲಕರ್, ಸಾಹೇಬಗೌಡನಾಯಕ ಗೌಡಗೇರಾ, ಶರಣಬಸಪ್ಪ ಎಲ್ಹೇರಿ, ವಿಶ್ವರಾಜ ಹೊನಗೇರಾ, ಸಿದ್ದಪ್ಪ ಕೂಯಿಲೂರ, ಸುರೇಶ ಬೆಳಗುಂದಿ, ಸಿದ್ದಲಿಂಗರೆಡ್ಡಿ ಮುನಗಲ್, ಅಬ್ದುಲ್ ರೀಯಾಜ್, ಮರೆಪ್ಪನಾಯಕ ಕಡ್ಡಿ, ಇರ್ಫಾನ್ ಪಟೇಲ್, ರಮೇಶ.ಡಿ.ನಾಯಕ ಭಾಗಿಯಾಗಿದ್ದರು.